ಜೀವಕ್ಕೆ ಅಪಾಯ ಎನ್ನುವ ಮೂಲಕ ಪಂಜಾಬಿಗಳನ್ನು ಮೋದಿ ಅಪಮಾನ ಮಾಡಿದ್ದಾರೆ ; ನವಜೋತ್ ಸಿಧು 

07-01-22 09:58 pm       HK Desk news   ದೇಶ - ವಿದೇಶ

ಪ್ರಧಾನಿ ಮೋದಿಯವರು ಭದ್ರತಾ ಲೋಪದಲ್ಲಿ ತನ್ನ ಜೀವ ಅಪಾಯದಲ್ಲಿದೆ ಎಂದು ಹೇಳಿಕೆ ನೀಡಿದ್ದನ್ನು ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪ್ರಬಲವಾಗಿ ಆಕ್ಷೇಪಿಸಿದ್ದಾರೆ.

ನವದೆಹಲಿ, ಜ.7 : ಪ್ರಧಾನಿ ಮೋದಿಯವರು ಭದ್ರತಾ ಲೋಪದಲ್ಲಿ ತನ್ನ ಜೀವ ಅಪಾಯದಲ್ಲಿದೆ ಎಂದು ಹೇಳಿಕೆ ನೀಡಿದ್ದನ್ನು ಪಂಜಾಬ್ ಕಾಂಗ್ರೆಸ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪ್ರಬಲವಾಗಿ ಆಕ್ಷೇಪಿಸಿದ್ದಾರೆ. ಮೋದಿಯವರು ಪಂಜಾಬಿಗಳನ್ನು ಅಪಮಾನ ಮಾಡಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಎದುರಿಸುವುದಕ್ಕಾಗಿ ಭದ್ರತಾ ಲೋಪದ ನೆಪದಲ್ಲಿ ದೊಡ್ಡ ನಾಟಕ ಆಡಿದ್ದಾರೆ ಎಂದು ಗೇಲಿ ಮಾಡಿದ್ದಾರೆ.

ತಮ್ಮ ಆಡಳಿತದ ವಿರುದ್ಧ ಎದ್ದಿರುವ ವಿರೋಧಿ ಅಲೆಯಿಂದ ಪಾರಾಗಲು ಮೋದಿ ಈ ನಾಟಕ ಮಾಡಿದ್ದಾರೆ. ಭದ್ರತಾ ಲೋಪದ ಬಗ್ಗೆ ವೈಫಲ್ಯದ ಮಾತು ಹೇಳುತ್ತಿದ್ದಾರೆ. 70 ಸಾವಿರ ಜನರನ್ನು ಎದುರಿಸಲು ಭದ್ರತಾ ವ್ಯವಸ್ಥೆ ಇದ್ದಾಗ 500 ಜನರು ಎದುರಾಗಿದ್ದನ್ನೇ ನೆಪವಾಗಿಸಿ ನಾಟಕ ಮಾಡಿದ್ದಾರೆ ಎಂದು ಸಿಧು ಹೇಳಿದ್ದಾರೆ.

ಪಂಜಾಬ್ ಪೊಲೀಸ್ ವಿಫಲಗೊಂಡಿದ್ದಕ್ಕೆ ಪ್ರಧಾನಿಯ ಭದ್ರತಾ ವಿಭಾಗದ ವೈಫಲ್ಯವೇ ಕಾರಣ. ಯಾಕಂದ್ರೆ, ಕೇಂದ್ರದ ವಿವಿಧ ಏಜನ್ಸಿಗಳು ಪ್ರಧಾನಿ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದು ಎಲ್ಲದರ ವೈಫಲ್ಯ ಆಗಿದೆ. ಚುನಾವಣೆ ಕಾಲದಲ್ಲಿ ರಾಜ್ಯದ ಜನರ ಸಾಮರಸ್ಯ ಕದಡುವ ಯತ್ನ ಮಾಡಲಾಗಿದೆ. ಆಮೂಲಕ ಆಡಳಿತ ವಿರೋಧಿ ಅಲೆಯನ್ನು ತಪ್ಪಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಪಂಜಾಬಿನಲ್ಲಿರುವ ಅಮರಿಂದರ್ ಸಿಂಗ್ ರೀತಿಯ ಕೆಲವು ಬಿಜೆಪಿ ಹಿಡಿತದಲ್ಲಿರುವ ಗೂಡಿನಲ್ಲಿರುವ ಗಿಳಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಪ್ರಧಾನಿ ಬಗ್ಗೆ ಗೌರವ ಇದೆ. ಪ್ರಧಾನಿ ಕೇವಲ ಬಿಜೆಪಿಯವರಿಗೆ ಮಾತ್ರ ಅಲ್ಲ. ದೇಶಕ್ಕೆ ಪ್ರಧಾನಿ ಎಂದು ಸಿಧು ಹೇಳಿದ್ದಾರೆ.

ಪ್ರಧಾನಿ ತೆರಳುತ್ತಿದ್ದಾಗ ರೈತರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ 20 ನಿಮಿಷ ಕಾಲ ಮೋದಿಯಿದ್ದ ವಾಹನ ಬಾಕಿಯಾಗಿತ್ತು. ಈ ಬಗ್ಗೆ ದೇಶಾದ್ಯಂತ ಕಾಂಗ್ರೆಸ್ ವಿರುದ್ಧ ಆಕ್ರೋಶ ಎದ್ದಿದೆ. ಬಿಜೆಪಿ ನಾಯಕರು ಇದನ್ನು ಕಾಂಗ್ರೆಸಿನ ರಾಷ್ಟ್ರೀಯ ನಾಯಕರೇ ಹೇಳಿ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Congress leader Navjot Singh Sidhu on Friday hit out at PM Narendra Modi and alleged that he is insulting Punjabiyat by saying that his life is in danger. Sidhu was reacting to the security breach during the Prime Minister’s Punjab visit and called the incident a big farce and drama.