ಬ್ರೇಕಿಂಗ್ ನ್ಯೂಸ್
04-01-22 02:36 pm HK Desk news ದೇಶ - ವಿದೇಶ
ಲಕ್ನೋ, ಜ.4 : ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ತಿರುಗೇಟು ನೀಡುವ ಭರದಲ್ಲಿ ಮಥುರೆಯ ಕೃಷ್ಣ ತನಗೂ ಕನಸಿನಲ್ಲಿ ಬಂದಿದ್ದಾಗಿ ಹೇಳಿಕೆ ನೀಡಿದ್ದಾರೆ. ನನಗೆ ದಿನವೂ ರಾತ್ರಿ ನಿದ್ದೆಯಲ್ಲಿ ಶ್ರೀಕೃಷ್ಣ ಕನಸಿನಲ್ಲಿ ಬರುತ್ತಿದ್ದು, ಮುಂದಿನ ಬಾರಿ ಸಮಾಜವಾದಿ ಪಾರ್ಟಿಯೇ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾಗಿ ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿಯ ರಾಜ್ಯಸಭಾ ಸದಸ್ಯ ಹರಿನಾಥ್ ಸಿಂಗ್, ಪಾರ್ಟಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿ ಅಖಿಲೇಶ್ ಈ ಮಾತು ಹೇಳಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಈ ಬಾರಿ ಮಥುರಾದಿಂದ ಚುನಾವಣೆಗೆ ನಿಲ್ಲಿಸಬೇಕು. ಈ ಬಗ್ಗೆ ಮಥುರೆಯ ಶ್ರೀಕೃಷ್ಣನೇ ತನಗೆ ಕನಸಿನಲ್ಲಿ ಬಂದು ಹೇಳಿದ್ದಾನೆ. ಮಥುರೆಯಲ್ಲಿ ಯೋಗಿ ಆದಿತ್ಯನಾಥ್ ಗೆದ್ದು ಬರಲಿದ್ದಾರೆ ಎಂದು ಹರಿನಾಥ್ ಸಿಂಗ್, ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಈಗಾಗಲೇ ಯೋಗಿ ಆದಿತ್ಯನಾಥ್, ಪಕ್ಷ ಹೇಳಿದರೆ ಉತ್ತರ ಪ್ರದೇಶದ ಯಾವ ಕ್ಷೇತ್ರದಲ್ಲೂ ಚುನಾವಣೆಗೆ ನಿಲ್ಲಲು ನಾನು ತಯಾರಿದ್ದೇನೆ ಎಂಬುದಾಗಿ ಹೇಳಿಕೆ ನೀಡಿದ್ದರು.
ಹೀಗಾಗಿ ಯೋಗಿ ಅವರನ್ನು ತಮ್ಮಲ್ಲಿ ನಿಲ್ಲಿಸಿ ಗೆಲ್ಲಿಸಬೇಕೆಂದು ವಿವಿಧ ಕ್ಷೇತ್ರಗಳ ಬಿಜೆಪಿ ನಾಯಕರು ಅಹವಾಲು ಮುಂದಿಡುತ್ತಿದ್ದಾರೆ. ಈ ಪತ್ರವನ್ನು ಉಲ್ಲೇಖಿಸಿದ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್, ಬಾಬಾಜೀ (ಯೋಗಿ ಆದಿತ್ಯನಾಥ್) ಎಲ್ಲದರಲ್ಲಿ ಸೋಲು ಕಂಡಿದ್ದಾರೆ. ಅವರನ್ನು ಯಾರು ಕೂಡ ರಕ್ಷಣೆ ಮಾಡಲು ಸಾಧ್ಯವಿಲ್ಲ. ಕೃಷ್ಣ ದೇವರು ನನಗೂ ಕನಸಿನಲ್ಲಿ ಬರುತ್ತಿದ್ದು ದಿನವೂ ಸಮಾಜವಾದಿ ಪಾರ್ಟಿಯೇ ಅಧಿಕಾರಕ್ಕೆ ಬರುವ ಬಗ್ಗೆ ಭವಿಷ್ಯ ಹೇಳುತ್ತಿದ್ದಾನೆ ಎಂದು ಕಟಕಿಯಾಡಿದ್ದಾರೆ.
ಅಖಿಲೇಶ್ ಯಾದವ್, 2019ರ ಚುನಾವಣೆಯಲ್ಲಿ ಅಜಂಗಢ ಲೋಕಸಭಾ ಕ್ಷೇತ್ರದಲ್ಲಿ ನಿಂತು ಸಂಸದರಾಗಿದ್ದರು. ಈಗ ಬಿಜೆಪಿ ವಿರುದ್ಧ ಹರಿಹಾಯುತ್ತಾ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಕಸರತ್ತು ಮಾಡುತ್ತಿದ್ದಾರೆ.
UP election 2022: Referring to a letter written by BJP Rajya Sabha MP Harnath Singh, SP chief Akhilesh said that Lord Krishna came in his dreams to tell him that SP is going to form the government in Uttar Pradesh.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm