ಬ್ರೇಕಿಂಗ್ ನ್ಯೂಸ್
29-12-21 11:39 am HK Desk news ದೇಶ - ವಿದೇಶ
ನವದೆಹಲಿ, ಡಿ.28: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 12 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಐಶರಾಮಿ ಕಾರನ್ನು ಬಳಕೆ ಮಾಡಲಾರಂಭಿಸಿದ್ದಾರೆ. ಮರ್ಸಿಡೇಸ್ ಬೆಂಜ್ ಕಂಪೆನಿಯ ಮೇಬ್ಯಾಕ್ ಎಸ್650 ಸರಣಿಯ ಶಸ್ತ್ರಸ್ತ್ರ ಸಜ್ಜಿತ ಕಾರನ್ನು ಪ್ರಧಾನಿ ಅವರಿಗಾಗಿ ಮತ್ತಷ್ಟು ಮಾರ್ಪಡಿಸಲಾಗಿದೆ.
ಈಗಾಗಲೇ ರೆಂಜ್‍ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರುಗಳು ಪ್ರಧಾನಿ ಅವರ ಕಚೇರಿಯಲ್ಲಿವೆ. ಅವುಗಳ ಜೊತೆ ಈಗ ಮರ್ಸಿಡೆಸ್ ಬೆಂಜ್ ಸೇರ್ಪಡೆಯಾಗಿದೆ. ಇತ್ತೀಚೆಗೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟೀನ್ ಭಾರತಕ್ಕೆ ಭೇಟಿ ನೀಡಿದಾಗ ಅವರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಮೇಬ್ಯಾಕ್ ಕಾರನ್ನು ಬಳಸಿದ್ದರು. ಹೈದರಾಬಾದ್ ಹೌಸ್‍ನಲ್ಲಿ ಹೊಸ ಕಾರಿನೊಂದಿಗೆ ಮೋದಿ ಕಾಣಿಸಿಕೊಂಡಿದ್ದರು. ಅದೇ ಕಾರು ಇತ್ತೀಚೆಗೆ ಪ್ರಧಾನಿ ಅವರ ಕ್ಯಾನ್‍ವೇನಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.
ಮೇಬ್ಯಾಕ್ ಅತ್ಯುನ್ನತ ರಕ್ಷಣಾ ಸೌಲಭ್ಯವನ್ನು ಹೊಂದಿದೆ. ಕಾರು ಎಕೆ 47 ರೈಫಲ್‍ನ ನಿರಂತರ ದಾಳಿಯನ್ನು ಹಾಗೂ ಸೆಲ್ ಆಕ್ರಮಣವನ್ನು ತಡೆದುಕೊಳ್ಳಬಲ್ಲದಾಗಿದೆ. ನವೀಕರಿಸಿದ ಕಿಟಕಿಗಳು ಪಾಲಿಕಾರ್ಬೋನೇಟ್‍ನಿಂದ ಲೇಪಿತವಾಗಿದ್ದು, ಗಟ್ಟಿಯಾದ ಸ್ಟೀಲ್ ಕೋರ್ ಬುಲೆಟ್‍ಗಳನ್ನು ತಡೆದುಕೊಳ್ಳುವ ಸಾಮಥ್ರ್ಯ ಹೊಂದಿವೆ.
ಸ್ಪೋಟಕ ನಿರೋಧ ಸೌಲಭ್ಯ ಅತ್ಯಂತ ಬಲಿಷ್ಠವಾಗಿದೆ. 15 ಕೆ.ಜಿ.ಯಷ್ಟು ಅಪಾಯಕಾರಿ ಸ್ಪೋಟಕ ಎರಡು ಮೀಟರ್ ಅಂತರದ ಒಳಗೆ ಸೋಟಿಸಿದರೂ ಕಾರಿನ ಒಳಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ವರದಿಯಾಗಿದೆ. ಕಾರಿನ ಒಳಗಿನ ಕ್ಯಾಬಿನ್ ಅತ್ಯಂತ ಸುರಕ್ಷತೆ ಹೊಂದಿದೆ.
ಒಂದು ವೇಳೆ ವಿಷಾನಿಲ ದಾಳಿ ನಡೆಸಿದರೆ ಕಾರಿನ ಒಳಗೆ ಸ್ವಚ್ಚ ವಾಯು ಪೂರೈಕೆ ಸೌಲಭ್ಯ ಕಲ್ಪಿಸಲಾಗಿದೆ. 6.0 ಲೀಟರ್ ಟ್ವಿನ್ ಟರ್ಬೊ ವಿ-12 ಎಂಜಿನ್ ಹೊಂದಿದ್ದು, 516 ಬಿಎಚ್‍ಪಿ ಮತ್ತು 900 ಎನ್‍ಎಂ ಪೀಕ್ ಟಾರ್ಕ್ ಅಳವಡಿಸಲಾಗಿದೆ. ಕಾರಿನ ಗರಿಷ್ಠ ವೇಗವನ್ನು 160 ಕಿಲೋ ಮೀಟರ್‍ಗೆ ಮಿತಿಗೊಳಿಸಲಾಗಿದೆ.
ಬೋಯಿಂಗ್ ವಿಮಾನ ಮತ್ತು ಎಎಸ್-64 ಹೆಲಿಕಾಫ್ಟರ್ ಪೆಟ್ರೋಲ್ ಟ್ಯಾಂಕ್‍ಗೆ ಅಳವಡಿಸಲಾಗಿರುವ ವಿಶೇಷ ಕೋಟಿಂಗ್ ವ್ಯವಸ್ಥೆಯನ್ನು ಮೇಬ್ಯಾಕ್ ಕಾರಿನ ಪೆಟ್ರೋಲ್ ಟ್ಯಾಂಕ್‍ಗೂ ಅಳವಡಿಸಲಾಗಿದೆ. ಈ ಸೀಲಿಂಗ್ ಬಂದೂಕು ಗುಂಡಿನಿಂದಾಗುವ ಹಾನಿಯನ್ನು ತಡೆಯಲಿದೆ.
ಕಾರಿನ ಒಳಾಂಗಣ ಅತ್ಯಂತ ಐಶರಾಮಿಯಾಗಿದೆ. ಪ್ರಧಾನಿ ಅವರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಈ ಕಾರಿನ ನಿಖರವಾದ ವೆಚ್ಚ ಇನ್ನೂ ಬಹಿರಂಗವಾಗಿಲ್ಲ. ಆದರೆ ಮಸಿಡೇಸ್ ಬೆಂಜ್‍ನ ಎಸ್600 ಗಾರ್ಡ್ ಮೌಲ್ಯ 10.5 ಕೋಟಿ, ಎಸ್650 ಸರಣಿಯ ಮೌಲ್ಯ 12 ಕೋಟಿಯಷ್ಟಿದೆ. ಪ್ರಧಾನಿ ಅವರ ಕಾರು ಇದಕ್ಕಿಂತಲೂ ದುಬಾರಿ ಎಂದು ಹೇಳಲಾಗಿದೆ. ನರೇಂದ್ರ ಮೋದಿ ಅವರು ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಸುರಕ್ಷತಾ ದೃಷ್ಠಿಯಿಂದ ಅತ್ಯನ್ನತ ಶ್ರೇಣಿಯ ಕಾರುಗಳನ್ನು ಬಳಸುತ್ತಿದ್ದಾರೆ.
ಮುಖ್ಯಮಂತ್ರಿಯಾಗಿದ್ದಾಗ ಗುಂಡು ನಿರೋಧಕ ವ್ಯವಸ್ಥೆ ಹೊಂದಿರುವ ಮಹಿಂದ್ರಾ ಸ್ಕಾಪ್ರ್ರಿಯೋ ಬಳಸುತ್ತಿದ್ದರು. 2014ರಲ್ಲಿ ಪ್ರಧಾನಿಯಾದಾಗ ಉತ್ಕøಷ್ಟ ದರ್ಜೆಯ ರಕ್ಷಣಾ ವ್ಯವಸ್ಥೆ ಹೊಂದಿದ್ದ ಬಿಎಂಡಬ್ಲ್ಯೂ 7 ಸರಣಿಯ ಕಾರನ್ನು ಬಳಕೆ ಮಾಡಲಾರಂಭಿಸಿದರು. ಅನಂತರ ರೆಂಜ್‍ರೋವರ್ ಮತ್ತು ಲ್ಯಾಂಡ್ ಕ್ರೋಸರ್ ಕೂಡ ಹೊಂದಿದ್ದರು.
The Prime Minister of India has a new armoured vehicle in the fleet, the Mercedes-Maybach S650 Guard. Based on the previous-gen S-class, the Maybach S650 Guard is said to offer one of the highest levels of protection available to civilian buyers.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am