ಬ್ರೇಕಿಂಗ್ ನ್ಯೂಸ್
14-12-21 12:34 pm HK Desk news ದೇಶ - ವಿದೇಶ
ತಿರುವನಂತಪುರಂ, ಡಿ.14 : ಕೋವಿಡ್ ಸರ್ಟಿಫಿಕೇಟ್ ನಲ್ಲಿ ಪ್ರಧಾನಿ ಮೋದಿ ಚಿತ್ರ ಹಾಕಿರುವುದನ್ನು ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿಗೆ ಕೇರಳ ಹೈಕೋರ್ಟ್ ತಪರಾಕಿ ಹಾಕಿದೆ. ಮೋದಿ ನಮ್ಮ ದೇಶದ ಪ್ರಧಾನಿ. ಅಮೆರಿಕದ ಪ್ರಧಾನಿಯಲ್ಲ. ದೇಶದ ಪ್ರಧಾನಿಯ ಫೋಟೊ ಹಾಕಿದರೆ ನಿಮಗೇನು ತೊಂದರೆ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ.
ಕೋವಿಡ್ ಸರ್ಟಿಫಿಕೇಟಿನಲ್ಲಿ ಮೋದಿ ಫೋಟೋ ಹಾಕಿರುವುದು ನನ್ನ ಮೂಲಭೂತ ಹಕ್ಕಿಗೆ ಉಲ್ಲಂಘನೆಯಾಗಿದೆ ಎಂದು ವ್ಯಕ್ತಿಯೊಬ್ಬರು ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಪಿ.ವಿ.ಕುಂಞಕೃಷ್ಣನ್, ಮೋದಿ ನಮ್ಮ ದೇಶದ ಪ್ರಧಾನಿ. ಅವರು ಜನರಿಂದ ಆಯ್ಕೆಯಾಗಿ ಪ್ರಧಾನಿ ಹುದ್ದೆಗೇರಿದ್ದಾರೆ. ಯಾವುದೇ ಹಿಂಬಾಗಿಲ ಮೂಲಕ ಅಧಿಕಾರಕ್ಕೇರಿಲ್ಲ ಎಂದು ಹೇಳಿದ್ದಾರೆ.
ಅರ್ಜಿ ಸಲ್ಲಿಸಿದ ವ್ಯಕ್ತಿ ದೆಹಲಿಯ ಜವಾಹರಲಾಲ್ ನೆಹರು ಲೀಡರ್ ಶಿಪ್ ಇನ್ ಸ್ಟಿಟ್ಯೂಟ್ ನಲ್ಲಿ ಸ್ಟೇಟ್ ಲೆವೆಲ್ ಮಾಸ್ಟರ್ ಕೋಚ್ ಆಗಿರುವುದನ್ನು ಉಲ್ಲೇಖಿಸಿದ ನ್ಯಾಯಾಧೀಶರು, ನೀವು ಕೆಲಸ ಮಾಡುತ್ತಿರುವ ಸಂಸ್ಥೆಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹೆಸರು ಇದೆ. ಯಾಕೆ ನೀವು, ಆ ಸಂಸ್ಥೆಯ ಹೆಸರಿನಿಂದ ಜವಾಹರ್ ಲಾಲ್ ಹೆಸರನ್ನು ತೆಗೆದು ಹಾಕಬೇಕು ಎಂದು ಒತ್ತಾಯ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಮೋದಿ ನಮ್ಮ ದೇಶದ ಪ್ರಧಾನ ಮಂತ್ರಿ. ನಿಮಗೆ ಅವರ ಬಗ್ಗೆ ರಾಜಕೀಯ ವಿರೋಧ ಇರಬಹುದು. ಕೋವಿಡ್ ಸರ್ಟಿಫಿಕೇಟಿನಲ್ಲಿ ಪ್ರಧಾನ ಮಂತ್ರಿಯ ಫೋಟೋ ಹಾಕಿರುವುದರಲ್ಲಿ ಏನು ತೊಂದರೆಯಾಗಿದೆ ಅನ್ನೋದು ನನಗೆ ಅರ್ಥವಾಗುತ್ತಿಲ್ಲ ನ್ಯಾಯಾಧೀಶರು ಹೇಳಿದ್ದಾರೆ. ಕೊಟ್ಟಾಯಂ ನಿವಾಸಿ ಪೀಟರ್ ಮಯಲಿಪರಂಬಿಲ್ ಎಂಬವರು ಕೋವಿಡ್ ಸರ್ಟಿಫಿಕೇಟಿನಿಂದ ಮೋದಿ ಫೋಟೋವನ್ನು ತೆಗೆಯುವಂತೆ ಅರ್ಜಿ ಸಲ್ಲಿಸಿದ್ದರು.
ಬೇರಾವುದೇ ರಾಷ್ಟ್ರಗಳಲ್ಲಿ ದೇಶದ ಪ್ರಧಾನಿಯ ಫೋಟೋವನ್ನು ಕೋವಿಡ್ ಸರ್ಟಿಫಿಕೇಟಿನಲ್ಲಿ ಅಳವಡಿಸಿಲ್ಲ. ಅಲ್ಲದೆ, ಸರಕಾರದ ಅನುದಾನದಲ್ಲಿ ನೀಡಲಾಗುವ ಯಾವುದೇ ಸೌಲಭ್ಯಗಳಿಗೆ ರಾಜಕೀಯ ವ್ಯಕ್ತಿಯ ಫೋಟೋ ಬಳಸುವುದು ಸ್ವತಂತ್ರ ಮತದಾರನ ಮೇಲೆ ಪ್ರೇರಣೆ ನೀಡಿದಂತಾಗುತ್ತದೆ. ಹೀಗಾಗಿ ಸ್ವತಂತ್ರ ಮತದಾನಕ್ಕೆ ಅವಕಾಶ ಇರುವ ರಾಷ್ಟ್ರದಲ್ಲಿ ಈ ರೀತಿ ಫೋಟೋ ಬಳಕೆಯಿಂದ ಜನರ ಮೇಲೆ ಹೇರಿದಂತಾಗುತ್ತದೆ ಎಂದು ಪೀಟರ್ ಕೋರ್ಟಿನಲ್ಲಿ ವಾದ ಮಂಡಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನೀವು ಟಿವಿಯಲ್ಲಿ ಮೋದಿ ಕಾಣಿಸಿದರೆ ಕಣ್ಣು ಮುಚ್ಚಿಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದರು. ಟಿವಿಯಲ್ಲಿ ಮೋದಿ ಚಿತ್ರ ಬಂದರೆ ಕಣ್ಣು ಮುಚ್ಚಿ ಕೊಂಡೇನು. ಆದರೆ, ಸರ್ಟಿಫಿಕೇಟ್ ನನ್ನ ವೈಯಕ್ತಿಕವಾದದ್ದು ಅಲ್ಲವೇ ಎಂದು ಮರು ಪ್ರಶ್ನೆ ಹಾಕಿದರು. ನೀವು ಯಾಕೆ ನಮ್ಮ ದೇಶದ ಪ್ರಧಾನಿ ಬಗ್ಗೆ ನಾಚಿಕೆ ಪಡಬೇಕು. ದೇಶದ 150 ಕೋಟಿ ಜನರಿಗೆ ಉದ್ಭವಿಸಿದ ಪ್ರಶ್ನೆ, ನಿಮಗೆ ಒಬ್ಬರಿಗೆ ಮಾತ್ರ ಯಾಕೆ ಬಂತು ಎಂದು ಕೇಳಿದ್ದಾರೆ.
ಬೇರೆ ಯಾವುದೇ ದೇಶದಲ್ಲಿ ಪ್ರಧಾನಿಯ ಫೋಟೋ ಬಳಸಿಲ್ಲ ಎಂದು ಅರ್ಜಿದಾರ ನ್ಯಾಯಾಧೀಶರ ಮುಂದೆ ಸಾಕ್ಷ್ಯ ಮುಂದಿಟ್ಟಾಗ, ಅವರಿಗೆ ಯಾರಿಗೂ ದೇಶದ ಪ್ರಧಾನಿ ಬಗ್ಗೆ ಹೆಮ್ಮೆ ಇರದೇ ಇರಬಹುದು. ಆದರೆ, ನಮ್ಮ ಪ್ರಧಾನಿ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ. ಯಾಕೆಂದರೆ, ಅವರು ಈ ದೇಶದ ಜನರು ಆಯ್ಕೆ ಮಾಡಿದ್ದರಿಂದಾಗಿ ಪ್ರಧಾನಿಯಾಗಿದ್ದಾರೆ ಎಂದುತ್ತರಿಸಿ, ಅರ್ಜಿಯನ್ನು ವಜಾ ಮಾಡಿದ್ದಾರೆ.
The Kerala High Court on Monday questioned the credibility of the plea challenging the photograph of Prime Minister Narendra Modi being affixed on the vaccination certificates issued to citizens upon being vaccinated against Covid-19.
13-09-25 04:31 pm
HK News Desk
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm