ಬ್ರೇಕಿಂಗ್ ನ್ಯೂಸ್
08-12-21 07:44 pm HK Desk news ದೇಶ - ವಿದೇಶ
ನವದೆಹಲಿ, ಡಿ.8 : ಕಡೆಗೂ ಆ ನಿರೀಕ್ಷೆ ಈಡೇರಲೇ ಇಲ್ಲ. ಏನು ಆಗಬಾರದು ಅಂದ್ಕೊಂಡಿದ್ದೆವೋ, ಅದೇ ದುರಂತ ನಡೆದುಬಿಟ್ಟಿದೆ. ಭಾರತದ ಮೂರು ಸೇನೆಗಳ ಮುಖ್ಯಸ್ಥರಾಗಿ ನಿಯೋಜನೆಗೊಂಡು, ಕಳೆದ ಎರಡು ವರ್ಷಗಳಿಂದ ಭಾರತ ಸರಕಾರಕ್ಕೆ ಮಿಲಿಟರಿ ವಿಚಾರದಲ್ಲಿ ಸಂಪೂರ್ಣ ಸಲಹೆ, ಸೂಚನೆಗಳನ್ನು ನೀಡುತ್ತಿದ್ದ ಜನರಲ್ ಬಿಪಿನ್ ರಾವತ್ ದುರಂತ ಸಾವು ಕಂಡಿದ್ದಾರೆ.
ತಮಿಳುನಾಡಿನ ಊಟಿ ಸಮೀಪದ ಕೂನ್ನೂರು ಜಿಲ್ಲೆಯ ನೀಲಗಿರಿ ಬೆಟ್ಟಗಳ ನಡುವಿನಲ್ಲಿ ದುರಂತಕ್ಕೀಡಾದ ವಾಯುಪಡೆ ಹೆಲಿಕಾಪ್ಟರ್ ನಲ್ಲಿದ್ದ ಸಿಬಂದಿ ಸೇರಿ ಎಲ್ಲ 14 ಮಂದಿಯೂ ದುರಂತ ಸಾವಿಗೀಡಾಗಿದ್ದಾರೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಕೂಡ ಬೆಂಕಿಯ ಕೆನ್ನಾಲಿಗೆಯಲ್ಲಿ ಉರಿದು ಸಜೀವ ದಹನವಾಗಿದ್ದಾರೆ. ಬಹುತೇಕ ಅದರಲ್ಲಿದ್ದ ಎಲ್ಲ ಅಧಿಕಾರಿಗಳೂ ಪೂರ್ತಿ ಸುಟ್ಟು ಹೋಗಿದ್ದು, ಗುರುತು ಸಿಗದಂತಾಗಿದೆ. ಡಿಎನ್ ಎ ಟೆಸ್ಟ್ ನಿಂದಲೇ ಅವರ ಗುರುತು ಪತ್ತೆ ಮಾಡಬೇಕು ಎನ್ನುವ ಮಾಹಿತಿಗಳಿವೆ.
ಸೂಲೂರು ಮಿಲಟರಿ ಬೇಸ್ ನಿಂದ 11.45ಕ್ಕೆ ಹೊರಟಿದ್ದ ಎಂಐ 17ವಿ 5 ಹೆಲಿಕಾಪ್ಟರ್ ಮೋಡಗಳ ಮರೆಯಲ್ಲಿ ಸಾಗುತ್ತಿದ್ದಾಗ ಮಧ್ಯಾಹ್ನ 12.15ರ ಸುಮಾರಿಗೆ ಅವಘಡಕ್ಕೀಡಾಗಿತ್ತು. ಊಟಿ ಬಳಿಯ ವೆಲ್ಲಿಂಗ್ಟನ್ ಎಂಬ ಗಿರಿ ಶಿಖರಗಳ ಮೇಲಿನ ನಗರದಲ್ಲಿ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಲ್ಲಿ ಕ್ಯಾಡೆಟ್ ಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಪಿನ್ ರಾವತ್ ಪತ್ನಿಯೊಂದಿಗೆ ಹೊರಟಿದ್ದರು. ಊಟಿ ವಿಹಾರ ತಾಣ ಆಗಿರುವುದರಿಂದ ಬೆಳಗ್ಗೆ ದೆಹಲಿಯಿಂದ ಹೊರಡುವಾಗ ಪತ್ನಿಯನ್ನೂ ಜೊತೆಗೆ ಕರೆತಂದಿದ್ದರು. ದೆಹಲಿಯಿಂದ ಸೂಲೂರು ವಾಯುನೆಲೆಗೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಬಿಪಿನ್ ರಾವತ್, ಅಲ್ಲಿಂದ ವಾಯುಪಡೆ ಹೆಲಿಕಾಪ್ಟರ್ ಮೂಲಕ ವೆಲ್ಲಿಂಗ್ಟನ್ ಗೆ ತೆರಳುತ್ತಿದ್ದರು.
ಚೀನಾ ಮತ್ತು ಪಾಕಿಸ್ಥಾನದಿಂದ ಎದುರಾಗುತ್ತಿದ್ದ ತಂಟೆ, ತಕರಾರಿನ ಜೊತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸೇನೆಗೆ ಎದುರಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ತುರ್ತಾಗಿ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ಮೋದಿ, ತ್ರಿವಳಿ ಸೇನೆಗಳ ಮುಖ್ಯಸ್ಥರ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಎನ್ನುವ ಹೊಸ ಹುದ್ದೆಯನ್ನು ಸೃಜಿಸಿದ್ದರು. 2019ರಲ್ಲಿ ಇದರ ಮೊದಲ ಮುಖ್ಯಸ್ಥರಾಗಿ ಬಿಪಿನ್ ರಾವತ್ ಅವರನ್ನು ನೇಮಕ ಮಾಡಲಾಗಿತ್ತು. ಅದಕ್ಕೂ ಹಿಂದೆ ಮೂರು ವರ್ಷಗಳ ಕಾಲ ಇಂಡಿಯನ್ ಆರ್ಮಿ ಚೀಫ್ ಆಗಿ ಬಿಪಿನ್ ರಾವತ್ ಕೆಲಸ ಮಾಡಿದ್ದರು. ಆ ಹುದ್ದೆಯಿಂದ ನಿವೃತ್ತಿಯಾಗಲು ಒಂದು ದಿನ ಇರುವಾಗ ಹೊಸ ಹುದ್ದೆಯನ್ನು ಅಲಂಕರಿಸಿದ್ದ ಅದೃಷ್ಟವಂತ ಬಿಪಿನ್ ರಾವತ್.
ಗೋರ್ಖಾ ರೆಜಿಮೆಂಟಿನಲ್ಲಿ ಅಧಿಕಾರಿಯಾಗಿ ನಿಯೋಜನೆಗೊಂಡು ಸೇನೆಗೆ ಸೇರ್ಪಡೆಯಾಗಿದ್ದ ಉತ್ತರಾಖಂಡ ಮೂಲದ ರಾವತ್, ಆನಂತರ ಸೇನಾ ಮುಖ್ಯಸ್ಥ ಹುದ್ದೆಗೇರಿದ್ದರು. ಗೋರ್ಖಾ ರೆಜಿಮೆಂಟಿನಲ್ಲಿದ್ದು ಸೇನಾ ಮುಖ್ಯಸ್ಥರಾದ ನಾಲ್ಕನೇ ಅಧಿಕಾರಿಯಾಗಿದ್ದರು ರಾವತ್. ಕೇಂದ್ರ ಸರಕಾರಕ್ಕೆ ಸೇನೆಯ ವಿಚಾರದಲ್ಲಿ ಸಿಂಗಲ್ ಪಾಯಿಂಟ್ ಅಡ್ವೈಸರ್ ಬೇಕು ಎನ್ನುವ ನಿಟ್ಟಿನಲ್ಲಿ ಮಿಲಿಟರಿ ಬಗ್ಗೆ ಆಳ ಅನುಭವ ಹೊಂದಿದ್ದ ಬಿಪಿನ್ ರಾವತ್ ಅವರನ್ನು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ನೇಮಕ ಮಾಡಲಾಗಿತ್ತು. ಪ್ರಮುಖವಾಗಿ ಕಳೆದ ಬಾರಿ ಸರ್ಜಿಕಲ್ ಸ್ಟ್ರೈಕ್, ಚೀನಾ ಗಡಿವಿವಾದ ಸಂದರ್ಭದಲ್ಲಿ ಬಿಪಿನ್ ರಾವತ್ ಕೈಚಳಕ ಕೆಲಸ ಮಾಡಿತ್ತು.
ಈ ಹಿಂದೆ ಕಮಾಂಡಿಂಗ್ ಅಧಿಕಾರಿಯಾಗಿದ್ದ ವೇಳೆ ಬಿಪಿನ್ ರಾವತ್ ಚೀನಾ ಗಡಿಯಲ್ಲಿ ಸುದೀರ್ಘ ಅವಧಿಗೆ (Line Of Actual Control) ಇನ್ ಫ್ಯಾಂಟ್ರಿ ಬೆಟಾಲಿಯನ್ ಮುನ್ನಡೆಸಿದ್ದರು. ಕಾಶ್ಮೀರ ಕಣಿವೆಯಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿಯೂ ಕಮಾಂಡಿಂಗ್ ಆಫೀಸರ್ ಆಗಿ ಅಲ್ಲಿನ ಪ್ರತ್ಯೇಕತಾವಾದಿಗಳ ನಿಗ್ರಹಕ್ಕೆ ಕ್ರಮ ಕೈಗೊಂಡಿದ್ದರು. ಕಾಶ್ಮೀರ ಕಣಿವೆಯಲ್ಲಿ ಉಗ್ರರ ನಿಗ್ರಹಕ್ಕಾಗಿ ವಿಶೇಷ ಮುತುವರ್ಜಿ ವಹಿಸಿದ್ದ ರಾವತ್ ಬಗ್ಗೆ ಮೋದಿ ಸರಕಾರಕ್ಕೂ ಮೆಚ್ಚುಗೆ ಇತ್ತು. 2016ರ ಡಿಸೆಂಬರ್ 31ರಂದು ಜನರಲ್ ರಾವತ್, ಇಂಡಿಯನ್ ಆರ್ಮಿ ಚೀಫ್ ಆಗಿ ನೇಮಕವಾಗಿದ್ದರು. ನಾಲ್ಕು ಸ್ಟಾರ್ ಹೊಂದಿದ್ದ ಅಧಿಕಾರಿ ರಾವತ್ ಅವರನ್ನು ಭಾರತ ಸರಕಾರ 2019ರ ಡಿಸೆಂಬರ್ 30ರಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಹೊಸ ಹುದ್ದೆಗೆ ನೇಮಿಸಿತ್ತು.
ನಾಲ್ಕು ದಶಕದ ಸೇವಾವಧಿಯಲ್ಲಿ ಬಿಪಿನ್ ರಾವತ್ ಅವರು ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಬ್ರಿಗೇಡ್ ಕಮಾಂಡರ್, ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್(ಸೌತರ್ನ್ ಕಮಾಂಡ್), ಜನರಲ್ ಸ್ಟಾಫ್ ಆಫೀಸರ್ ಗ್ರೇಡ್ -2(ಮಿಲಿಟರಿ ಆಪರೇಶನ್), ಕೊಲೊನೆಲ್ ಮಿಲಿಟರಿ ಸೆಕ್ರಟರಿ, ಡೆಪ್ಯುಟಿ ಮಿಲಿಟರಿ ಸೆಕ್ರಟರಿ, ಜೂನಿಯರ್ ಕಮಾಂಡಿಂಗ್ ವಿಂಗ್ ನಲ್ಲಿ ಹಿರಿಯ ತರಬೇತುದಾರನಾಗಿ ಹುದ್ದೆ ನಿರ್ವಹಿಸಿದ್ದರು. ಇದಲ್ಲದೆ, ವಿಶ್ವಸಂಸ್ಥೆಯ ಶಾಂತಿ ಪರಿಪಾಲನಾ ಪಡೆಯ ಸದಸ್ಯರೂ ಆಗಿದ್ದರು.
2015ರಲ್ಲಿ ಮ್ಯಾನ್ಮಾರ್, ನಾಗಾಲ್ಯಾಂಡ್ ಗಡಿಭಾಗದಲ್ಲಿ ಆತಂಕದ ವಾತಾವರಣವನ್ನು ನಿಯಂತ್ರಣಕ್ಕೆ ತಂದಿದ್ದು ಕೀರ್ತಿಯೂ ಇವರಿಗೆ ಸಲ್ಲುತ್ತದೆ. 2016ರಲ್ಲಿ ಉರಿ ಸೇನಾ ಶಿಬಿರಕ್ಕೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಪಾಕಿಸ್ಥಾನಕ್ಕೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರಲ್ಲಿಯೂ ಬಿಪಿನ್ ರಾವತ್ ಪಾತ್ರ ಪ್ರಮುಖವಾಗಿತ್ತು. ಕಳೆದ ಬಾರಿ ಪುಲ್ವಾಮಾ ದಾಳಿಗೆದುರಾಗಿ ಪಾಕಿಸ್ಥಾನದ ಬಾಲಾಕೋಟ್ ಉಗ್ರರ ಶಿಬಿರವನ್ನು ನಾಶ ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರ ಮಾಸ್ಟರ್ ಮೈಂಡ್ ಕೂಡ ಬಿಪಿನ್ ರಾವತ್ ಆಗಿದ್ದರು.
ಒಂದು ದೇಶದ ಸೇನಾ ಮುಖ್ಯಸ್ಥರಾಗಿದ್ದವರು ದೇಶದ ಅತ್ಯುನ್ನತ ದರ್ಜೆಯ ಅಧಿಕಾರಿಯಾಗಿದ್ದು, ಈ ರೀತಿ ದುರಂತ ಸಾವು ಕಂಡಿದ್ದು ಇದೇ ಮೊದಲು. ಯುದ್ಧ ಇನ್ನಿತರ ತುರ್ತು ಸಂದರ್ಭದಲ್ಲಿ ಯೋಧರ ನೋವು- ನಲಿವುಗಳ ಬಗ್ಗೆ ಜೊತೆಯಾಗುವ, ಮುಂಚೂಣಿ ನಿರ್ಧಾರಗಳ ಹಿಂದೆ ನಿಂತು ಸರಕಾರಕ್ಕೆ ಸಲಹೆಗಳನ್ನು ನೀಡುವ, ಮಿಲಿಟರಿಯ ಶ್ರೇಯವೇ ನನ್ನ ಗುರಿ ಎನ್ನುವಂತೆ ಬದುಕಿದ್ದ ಜನರಲ್ ಬಿಪಿನ್ ರಾವತ್ ಹೀಗೆ ದುರಂತ ಸಾವು ಕಂಡಿದ್ದು ದೇಶದ ಘೋರ ದುರಂತಗಳಲ್ಲಿ ಒಂದಾಗಿ ದಾಖಲಾಗಲಿದೆ.
ವಿಶೇಷ ಅಂದ್ರೆ, ಭಾರತೀಯ ವಾಯುಪಡೆ ಇತಿಹಾಸದಲ್ಲಿ ಈ ರೀತಿಯ ಘೋರ ದುರಂತ ಆಗಿದ್ದು ಇದೇ ಮೊದಲು. ಸೇನಾ ಮುಖ್ಯಸ್ಥರನ್ನೇ ಕಳಕೊಳ್ಳುವ ರೀತಿಯಲ್ಲಿ ಬೇರಾವುದೇ ಮುಂಚೂಣಿ ದೇಶಗಳಲ್ಲೂ ಘಟಿಸಿದ್ದೂ ಇಲ್ಲ. ಈ ಹಿಂದೆ 1963ರಲ್ಲಿ ವಾಯುಪಡೆ ಹೆಲಿಕಾಪ್ಟರ್ ಕಾಶ್ಮೀರದ ಕಣಿವೆಯಲ್ಲಿ ದುರಂತಕ್ಕೀಡಾಗಿ ಆರು ಮಂದಿ ಹಿರಿಯ ಸೇನಾಧಿಕಾರಿಗಳು ಸಾವು ಕಂಡಿದ್ದ ಘಟನೆ ನಡೆದಿತ್ತು. ಅದು ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ನಡೆದಿತ್ತು. ಅದು ಬಿಟ್ಟರೆ ಭಾರತದ ವಾಯುಪಡೆಯಲ್ಲಿ ಘೋರ ದುರಂತಕ್ಕೀಡಾಗುವ ಲೋಪ ನಡೆದದ್ದೇ ಇಲ್ಲ. ಇಂದಿನ ದುರಂತಕ್ಕೇನು ಕಾರಣ ಅನ್ನೋದ್ರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತುರ್ತಾಗಿ ವರದಿಯನ್ನೂ ಕೇಳಿದ್ದಾರೆ.
As India’s first CDS, Gen Rawat worked on diverse aspects relating to our armed forces including defence reforms. He brought with him a rich experience of serving in the Army. India will never forget his exceptional service.
— Narendra Modi (@narendramodi) December 8, 2021
India's top military commander has died in a helicopter crash in the southern Indian state of Tamil Nadu, the air force says. Chief of Defence Staff Gen Bipin Rawat, his wife and 11 others were travelling in the Mi-17V5 helicopter that came down in hills near Coonoor city. One passenger has been taken to hospital. Gen Rawat, 63, was appointed India's first-ever Chief of Defence Staff in January 2019.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm