ಬ್ರೇಕಿಂಗ್ ನ್ಯೂಸ್
08-12-21 04:48 pm HK Desk news ದೇಶ - ವಿದೇಶ
ಚೆನ್ನೈ, ಡಿ.8: ತಮಿಳುನಾಡಿನ ನೀಲಗಿರಿ ಬೆಟ್ಟಗಳ ಮಧ್ಯೆ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನ ದುರಂತದಲ್ಲಿ ಈವರೆಗೆ 11 ಮಂದಿಯ ಮೃತದೇಹಗಳನ್ನು ರಕ್ಷಣಾ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಕುಟುಂಬಸ್ಥರು ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದರು.
ಬೆಳಗ್ಗೆ 11.30ರ ಸುಮಾರಿಗೆ ಮಿಲಿಟರಿ ಬೇಸ್ ಇರುವ ಕೊಯಂಬತ್ತೂರು ಬಳಿಯ ಸೂಲೂರಿನಿಂದ ಹೆಲಿಕಾಪ್ಟರ್ ನಲ್ಲಿ ಕೂನೂರು ಜಿಲ್ಲೆಯ ವೆಲ್ಲಿಂಗ್ಟನ್ ಗೆ ತೆರಳುತ್ತಿದ್ದರು. ದುರ್ಘಟನೆಯಲ್ಲಿ ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ. ಬೆಟ್ಟಗಳ ಎಡೆಯಿಂದ ಚಲಿಸುತ್ತಿದ್ದಾಗ ತೀವ್ರ ಮಂಜು ಆವರಿಸಿದ್ದರಿಂದ ಕಾಪ್ಟರ್ ಪತನಕ್ಕೀಡಾಗಿದೆ ಎನ್ನಲಾಗುತ್ತಿದೆ.
ಪ್ರತ್ಯಕ್ಷದರ್ಶಿ ಕೃಷ್ಣಸ್ವಾಮಿ ಹೇಳುವ ಪ್ರಕಾರ, ಏನೋ ದೊಡ್ಡ ಸದ್ದು ಕೇಳಿದಂತಾಯಿತು. ಕೂಡಲೇ ಮನೆಯಿಂದ ಹೊರಬಂದಿದ್ದು, ನೋಡಿದರೆ ಹೆಲಿಕಾಪ್ಟರ್ ಮರಗಳ ಎಡೆಯಿಂದ ನೆಲಕ್ಕೆ ಬೀಳುತ್ತಿತ್ತು. ಕಾಪ್ಟರ್ ಗೆ ಬೆಂಕಿ ಹತ್ತಿಕೊಂಡಿತ್ತು. ಮರಗಳು ಸೇರಿದಂತೆ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿತ್ತು. 2-3 ಮಂದಿ ಬೆಂಕಿಯ ನಡುವೆಯೇ ಹೊರಗೆ ಬಂದಿದ್ದು, ತೀವ್ರ ಸುಟ್ಟಗಾಯಗಳಿಂದ ಕೂಡಿದ್ದರು. ಆನಂತರ, ಬೆಂಕಿಯ ಕೆನ್ನಾಲಿಗೆಯಲ್ಲಿ ಉರಿಯುತ್ತಲೇ ಕೆಳಕ್ಕೆ ಬಿದ್ದರು ಎಂದು ಹೇಳಿದ್ದಾರೆ.
ಘಟನೆಯಲ್ಲಿ ಬಿಪಿನ್ ರಾವತ್ ತೀವ್ರ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದ್ದು, ಅವರ ಸ್ಥಿತಿ ಬಗ್ಗೆ ಸೇನಾಪಡೆ ಇನ್ನೂ ಮಾಹಿತಿ ನೀಡಿಲ್ಲ. ಇದೇ ವೇಳೆ, ಪ್ರಧಾನಿ ಮೋದಿ ತುರ್ತಾಗಿ ಸಚಿವ ಸಂಪುಟ ಸಭೆ ಕರೆದಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಥಳಕ್ಕೆ ತೆರಳುವುದಾಗಿ ಹೇಳಿದ್ದಾರೆ. ದೆಹಲಿಯಲ್ಲಿರುವ ಬಿಪಿನ್ ರಾವತ್ ಕುಟುಂಬಸ್ಥರನ್ನು ರಾಜನಾಥ್ ಸಿಂಗ್ ಈಗಾಗಲೇ ಭೇಟಿಯಾಗಿದ್ದಾರೆ. ಮಂಜು ಮತ್ತು ಮೋಡದಿಂದಾಗಿ ಬೆಟ್ಟಗಳ ಸಾಲು ಕಾಣದೆ ಮರಗಳಿಗೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.
ಎಂಐ 17 ವಿ5 ಹೆಲಿಕಾಪ್ಟರ್ ವಾಯುಸೇನೆಯ ಶಸ್ತ್ರಸಜ್ಜಿತ ಕಾಪ್ಟರ್ ಆಗಿದ್ದು, ಕ್ಷಿಪಣಿ, ಮಷಿನ್ ಗನ್ ಸೇರಿದಂತೆ ವಿವಿಧ ರೀತಿಯ ಶಸ್ತ್ರಾಸ್ತ್ರಗಳ ಜೊತೆಗೆ ಪ್ರಯಾಣ ಮಾಡುತ್ತದೆ. ಕಾಪ್ಟರ್ ನಲ್ಲಿ 4500 ಕೇಜಿ ತೂಕದ ಶಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಐದು ಮಂದಿ ಹೆಲಿಕಾಪ್ಟರ್ ಸಿಬಂದಿ ಮತ್ತು ಜನರಲ್ ಬಿಪಿನ್ ರಾವತ್, ಅವರ ಪತ್ನಿ ಸೇರಿ ಒಂಬತ್ತು ಮಂದಿ ದುರ್ಘಟನೆ ವೇಳೆ ಕಾಪ್ಟರ್ ನಲ್ಲಿದ್ದರು. ಬಿಪಿನ್ ರಾವತ್ ಇಂದು ಬೆಳಗ್ಗೆ 9 ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಯಿಂದ ಸೂಲೂರು ಮಿಲಿಟರಿ ಬೇಸ್ ಗೆ ಆಗಮಿಸಿದ್ದರು. ಸೂಲೂರಿಗೆ 11.30ಕ್ಕೆ ತಲುಪಿದ್ದು, ಅಲ್ಲಿಂದ ವೆಲ್ಲಿಂಗ್ಟನ್ ಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.
ದುರಂತ ಸ್ಥಳಕ್ಕೆ ವಾಯುಪಡೆ ಮುಖ್ಯಸ್ಥ ವಿವೇಕ್ ರಾಮ್ ಚೌಧರಿ ಆಗಮಿಸಿದ್ದು, ಘಟನೆ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ. ಮೇಲ್ನೋಟಕ್ಕೆ ಘಟನೆಗೆ ಹವಾಮಾನ ವೈಪರೀತ್ಯ ಕಾರಣ ಎನ್ನಲಾಗುತ್ತಿದ್ದರೂ, ಬೆಟ್ಟಗಳ ಸಾಲಿನ ಮಧ್ಯೆ ದುರ್ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಬೇರಾವುದೇ ಕಾರಣ ಇರಬಹುದೇ, ನಕ್ಸಲ್ ಕೈವಾಡ ಇರಬಹುದೇ ಎನ್ನುವ ಬಗ್ಗೆ ತನಿಖೆ ಆರಂಭಿಸಿದ್ದಾರೆ.
#WATCH | Latest visuals from the spot (between Coimbatore and Sulur) where a military chopper crashed in Tamil Nadu. CDS Gen Bipin Rawat, his staff and some family members were in the chopper.
— ANI (@ANI) December 8, 2021
(Video Source: Locals involved in search and rescue operation) pic.twitter.com/YkBVlzsk1J
An Air Force helicopter, with CDS General Bipin Rawat and some of his family members on board, crashed in Tamil Nadu's Coonoor on Wednesday. The fatal crash left 11 people dead, while rescue operations are still underway to save others. A total of 14 people were on board the chopper. However, there is still no information on General Bipin Rawat.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm