ಬ್ರೇಕಿಂಗ್ ನ್ಯೂಸ್
30-11-21 04:02 pm HK Desk news ದೇಶ - ವಿದೇಶ
ನವದೆಹಲಿ, ನ.30: ಸತ್ಯಂ ನಾದೆಲ್ಲಾ, ಸುಂದರ್ ಪಿಚೈ ಬಳಿಕ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿ ಜಗತ್ತಿನ ದೈತ್ಯ ಕಂಪನಿಯೊಂದರ ಸಿಇಓ ಆಗಿ ನೇಮಕಗೊಂಡಿದ್ದಾರೆ. ಸಾಮಾಜಿಕ ಜಾಲತಾಣದ ದೈತ್ಯ ಟ್ವಿಟರ್ ಕಂಪನಿಯ ಸಿಇಓ ಆಗಿ ಮುಂಬೈ ಮೂಲದ 37 ವರ್ಷದ ಪರಾಗ್ ಅಗರ್ವಾಲ್ ನೇಮಕ ಆಗಿದ್ದಾರೆ.
ಟ್ವಿಟರ್ ಸಿಇಓ ಆಗಿದ್ದ ಜಾಕ್ ಡೋರ್ಸೆ ಸೋಮವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ತಿಂಗಳ ಹಿಂದಿನಿಂದಲೂ ಡೋರ್ಸೆ ಅವರ ಸ್ಥಾನಕ್ಕೆ ಬೇರೊಬ್ಬರನ್ನು ತರಲಿದೆ ಎಂಬ ಮಾಹಿತಿಗಳಿದ್ದವು. ಟ್ವಿಟರ್ ಬೋರ್ಡ್ ಡೋರ್ಸೆಯನ್ನು ಕಿತ್ತು ಹಾಕಲಿದೆ ಅನ್ನುವ ವದಂತಿಯೂ ಹರಡಿತ್ತು. ಇದರ ಬೆನ್ನಲ್ಲೇ ಡೋರ್ಸೆ ರಾಜಿನಾಮೆ ನೀಡಿದ್ದು, ಕೂಡಲೇ ಟ್ವಿಟರ್ ಆಡಳಿತ ಮಂಡಳಿ ಆ ಸ್ಥಾನಕ್ಕೆ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರನ್ನು ನೇಮಿಸಿದೆ.
ಕಳೆದ 11 ವರ್ಷಗಳಿಂದ ಟ್ವಿಟರ್ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಪರಾಗ್, 2017ರಲ್ಲಿ ಸಿಟಿಓ(ಚೀಫ್ ಟೆಕ್ಲಾಲಜಿ ಆಫೀಸರ್) ಆಗಿ ನಿಯೋಜನೆಗೊಂಡಿದ್ದರು. ಪರಾಗ್ ಈ ಹುದ್ದೆ ಪಡೆದ ಬಳಿಕ ಟ್ವಿಟರ್ ಅನ್ನು ಜಾಲತಾಣದಲ್ಲಿ ಇನ್ನಷ್ಟು ವೇಗವಾಗಿ ಮತ್ತು ಇನ್ನಷ್ಟು ಗ್ರಾಹಕರಿಗೆ ಹತ್ತಿರವಾಗುವಂತೆ ಮಾಡಿದ್ದರು. ಅಲ್ಲದೆ, ಟ್ವಿಟರ್ ರೆವಿನ್ಯೂವನ್ನೂ ಹೆಚ್ಚುವಂತೆ ಮಾಡಿದ್ದರು. ಇದರಿಂದ ಉತ್ತೇಜಿತರಾಗಿದ್ದ ಕಂಪನಿ ಮಾಲೀಕ ಮಾರ್ಕ್ ಜುಕರ್ಬರ್ಗ್, ಪರಾಗ್ ಅವರನ್ನೇ ಸಿಇಓ ಆಗಿ ನೇಮಕ ಮಾಡಿದ್ದಾರೆ.
ಮುಂಬೈ ಐಐಟಿಯಲ್ಲಿ ಇಂಜಿನಿಯರಿಂಗ್ ಪೂರೈಸಿದ್ದ ಪರಾಗ್ ಅಗರ್ವಾಲ್, ಆನಂತರ ಅಮೆರಿಕದ ಸ್ಟಾನ್ ಫೋರ್ಟ್ ವಿಶ್ವವಿದ್ಯಾನಿಲಯಕ್ಕೆ ಉನ್ನತ ಅಧ್ಯಯನಕ್ಕಾಗಿ ತೆರಳಿದ್ದರು. ಅಲ್ಲಿಯೇ ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್ ಡಿ ಮಾಡಿದ್ದರು. ಪರಾಗ್ ತಾಯಿ ಶಿಕ್ಷಕಿಯಾಗಿ ನಿವೃತ್ತರಾಗಿದ್ದಾರೆ. ತಂದೆ ಅಣು ವಿದ್ಯುತ್ ಸ್ಥಾವರದಲ್ಲಿ ಉದ್ಯೋಗಿಯಾಗಿದ್ದರು.
ಪರಾಗ್ 2011ರಲ್ಲಿ ಟ್ವಿಟರ್ ಕಂಪನಿ ಸೇರುವುದಕ್ಕಿಂತ ಮುನ್ನ ಮೈಕ್ರೋಸಾಫ್, AT &T ಮತ್ತು ಯಾಹೂ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಈ ಮೂರೂ ಕಂಪನಿಯಲ್ಲಿ ರಿಸರ್ಚ್ ವಿಭಾಗದಲ್ಲಿ ಕೆಲಸ ಮಾಡಿದ್ದ ಪರಾಗ್, ಟ್ವಿಟರ್ ಕಂಪನಿಯಲ್ಲಿ ಜಾಹೀರಾತು ಆಧರಿತ ಉತ್ಪಾದನಾ ಕ್ಷೇತ್ರದಲ್ಲಿ ಕೆಲಸ ಆರಂಭಿಸಿದ್ದರು. ಆದರೆ, ಪರಾಗ್ ತನ್ನದೇ ಆದ ನೈಪುಣ್ಯತೆಯಿಂದ ಟ್ವಿಟರ್ ನಲ್ಲಿ ಜಾಹೀರಾತು ಆಕರ್ಷಿಸಿ, ಕಂಪನಿಗೆ ಹೆಚ್ಚಿನ ರೆವಿನ್ಯೂ ತಂದುಕೊಟ್ಟಿದ್ದರು.
ನಿರ್ಗಮಿತ ಸಿಇಓ ಜಾಕ್ ಡೋರ್ಸೆ ಕೂಡ ಪರಾಗ್ ಬಗ್ಗೆ ತುಂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಆಡಳಿತ ಮಂಡಳಿ ಪರಾಗ್ ಅವರನ್ನೇ ಮುಂದಿನ ಸಿಇಓ ಆಗಿ ನೇಮಿಸುತ್ತದೆ ಅನ್ನುವ ವಿಶ್ವಾಸವಿದೆ. ನನ್ನ ಆಯ್ಕೆಯೂ ಪರಾಗ್. ಕಂಪನಿ ಮತ್ತು ಅದರ ಅಗತ್ಯಗಳನ್ನು ಪರಾಗ್ ಹೆಚ್ಚು ತಿಳಿದುಕೊಂಡಿದ್ದಾರೆ. ಕಂಪನಿ ತೆಗೆದುಕೊಳ್ಳುವ ಪ್ರತೀ ಕಠಿಣ ನಿರ್ಧಾರಗಳ ಹಿಂದೆ ಪರಾಗ್ ನಮ್ಮ ಜೊತೆಗಿದ್ದರು. ತುಂಬ ಕ್ರಿಯೇಟಿವ್, ಹಂಬಲ್ ಮತ್ತು ಆತ್ಮವಿಶ್ವಾಸ ಉಳ್ಳ ವ್ಯಕ್ತಿ. ಎಲ್ಲರ ಹೃದಯ ಗೆಲ್ಲುವ ಗುಣಗಳಿಂದ ಅವರು ಈ ಕಂಪನಿಯನ್ನು ಒಳ್ಳೆಯದಾಗಿ ಮುನ್ನಡೆಸಲಿದ್ದಾರೆ ಎಂದು ಡೋರ್ಸೆ ನಿರ್ಗಮನಕ್ಕೂ ಮುನ್ನ ತನ್ನ ತನ್ನ ಸಹೋದ್ಯೋಗಿಗಳನ್ನು ಉದ್ದೇಶಿಸಿ ಬರೆದುಕೊಂಡಿದ್ದಾರೆ.
ಅಂದಹಾಗೆ, ಟ್ವಿಟರ್ ಸಿಇಓ ಆಗಿರುವ ಪರಾಗ್ ಅಗರ್ವಾಲ್ ವಾರ್ಷಿಕ ಸಂಭಾವನೆ ರೂಪದಲ್ಲಿ ಒಂದು ಮಿಲಿಯನ್ ಡಾಲರ್ ಪಡೆಯಲಿದ್ದಾರೆ. ಅಲ್ಲದೆ, ಪರಾಗ್ ಟ್ವಿಟರ್ ಕಂಪನಿಯಲ್ಲಿರುವ ಟಾಪ್ ಇಂಜಿನಿಯರ್ ಗಳಲ್ಲಿ ಒಬ್ಬರು. ಕಂಪನಿಯ ಟಿಎಜಿ ಗ್ರೂಪ್ ಸೇರಿದ ಬಳಿಕ ಪರಾಗ್, ಕಂಪನಿಯ ಎಲ್ಲ ಹೊಸ ಪ್ರಾಡಕ್ಟ್ ಮತ್ತು ಟೆಕ್ನಾಲಜಿ ವಿಚಾರದಲ್ಲಿ ಕೈಯಾಡಿಸುತ್ತಿದ್ದರು. 2019ರಲ್ಲಿ ಜಾಕ್ ಡೋರ್ಸೆ, ಸೋಶಿಯಲ್ ಮೀಡಿಯಾದ ಹೊಸ ಪ್ರಾಜೆಕ್ಟ್ ಬ್ಲೂಸ್ಕೈ ಜಾರಿಗೆ ತಂದಿದ್ದರ ಹಿಂದಿದ್ದ ಶಕ್ತಿ ಪರಾಗ್ ಅವರದ್ದೇ ಆಗಿತ್ತು.
ಇದಲ್ಲದೆ, ಅತ್ಯಂತ ಕಡಿಮೆ ವಯಸ್ಸಿನಲ್ಲಿ ದೈತ್ಯ ಕಂಪನಿಯ ಸಿಇಓ ಪಟ್ಟಕ್ಕೇರಿದ ವ್ಯಕ್ತಿಯೂ ಪರಾಗ್ ಆಗಿದ್ದಾರೆ. ಫೇಸ್ಬುಕ್, ಟ್ವಿಟರ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಕೂಡ ಇದೇ 37ರ ವಯಸ್ಸಿನವರು. ಮುಂಬೈನಲ್ಲಿ ಹುಟ್ಟಿ ಬೆಳೆದ ವ್ಯಕ್ತಿ ಜಗತ್ತಿನ ದೈತ್ಯ ಕಂಪನಿಯೊಂದರ ಸಿಇಓ ಆಗಿದ್ದು ಮುಂಬೈ ಮೂಲದವರಲ್ಲಿ ಹರ್ಷ ಹುಟ್ಟಿಸಿದೆ. ಬಾಲಿವುಡ್ ಸಿಂಗರ್ ಶ್ರೇಯಾ ಘೋಷಾಲ್ ಅವರ ಬಾಲ್ಯದ ಗೆಳೆಯನಾಗಿದ್ದ ಪರಾಗ್ ಬಗ್ಗೆ, ಶ್ರೇಯಾ ಟ್ವಿಟರ್ ನಲ್ಲಿ ತುಂಬ ಮೆಚ್ಚುಗೆ ಸೂಚಿಸಿ ಬರೆದಿದ್ದಾರೆ. ಕಂಗ್ರಾಟ್ಸ್ ಪರಾಗ್, ಸೋ ಪ್ರೌಡ್ ಆಫ್ ಯು ಪರಾಗ್, ಬಿಗ್ ಡೇ ಆಫ್ ಅಸ್, ಸಿಲೆಬ್ರೇಟಿಂಗ್ ದಿಸ್ ನ್ಯೂಸ್ (ನಾವು ತುಂಬ ಹೆಮ್ಮೆ ಪಡುತ್ತಿದ್ದೇವೆ. ನಮಗೆಲ್ಲ ತುಂಬ ಸಂತಸದ ದಿನ. ಈ ಸುದ್ದಿ ಕೇಳಿ ಹರ್ಷಾಚರಣೆ ಮಾಡುತ್ತೇವೆ) ಎಂದು ಶ್ರೇಯಾ ಮೆಚ್ಚುಗೆ ಬರೆದಿದ್ದಾರೆ.
Parag Agrawal became Twitter CEO on Monday after Jack Dorsey announced his resignation. The move was apparently months in the making. There were rumours that the Twitter board was looking to replace Jack Dorsey with someone else. The search, it seems, finally ended with an in-house candidate. Parag, who until now was Twitter's CTO, is assuming the role as the company CEO immediately.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm