ಬ್ರೇಕಿಂಗ್ ನ್ಯೂಸ್
18-11-21 10:54 pm HK News Desk ದೇಶ - ವಿದೇಶ
ಮುಂಬೈ, ನ.18: ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿರುವ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್, ಪ್ರಕರಣದಲ್ಲಿ ತನ್ನನ್ನು ಬಂಧಿಸಬಾರದೆಂದು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ನೀವು ಮೊದಲು ಎಲ್ಲಿದ್ದೀರಿ ಎಂಬುದನ್ನು ಹೇಳಿ. ಭಾರತದಲ್ಲೇ ಇದ್ದೀರಾ.. ವಿದೇಶಕ್ಕೆ ಪಲಾಯನ ಆಗಿದ್ದೀರಾ ಎಂಬುದನ್ನು ಹೇಳಿ. ಆನಂತರ ಅರ್ಜಿಯನ್ನು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ.
ಮುಂಬೈ ಸೇರಿದಂತೆ ಮಹಾರಾಷ್ಟ್ರದ ವಿವಿಧ ಕಡೆ ಪರಮ್ ಬೀರ್ ಸಿಂಗ್ ವಿರುದ್ಧ ಐದಕ್ಕಿಂತಲೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ನಡುವೆ, ಕಳೆದ ಸೆಪ್ಟಂಬರ್ ತಿಂಗಳಿನಿಂದ ಪರಮ್ ಬೀರ್ ಸಿಂಗ್ ನಾಪತ್ತೆಯಾಗಿದ್ದು ಇದೀಗ ಸುಪ್ರೀಂ ಕೋರ್ಟಿಗೆ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ತನ್ನನ್ನು ಬಂಧಿಸದಂತೆ ಮುಂಬೈ ಪೊಲೀಸರಿಗೆ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಅರ್ಜಿ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್, ಪರಮ್ ಬೀರ್ ಸಿಂಗ್ ಎಲ್ಲಿ..? ಇಲ್ಲಿ ತನಕ ಅವರು ಪೊಲೀಸರ ವಿಚಾರಣೆಗೆ ಹಾಜರಾಗಿಲ್ಲ. ಅವರು ಎಲ್ಲಿದ್ದಾರೆಂದು ಯಾರಿಗೂ ಗೊತ್ತಿಲ್ಲ. ಅವರೊಬ್ಬ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದು ಹೀಗೆ ಮಾಡುತ್ತಿರೋದು ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ತೋರಿಸುತ್ತದೆ. ನೀವು ವಿದೇಶದಲ್ಲಿದ್ದು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರೆ ನಾವದನ್ನು ಪರಿಗಣಿಸಲು ಸಾಧ್ಯವಿಲ್ಲ. ನೀವು ವಿದೇಶದಲ್ಲಿದ್ದರೆ ಮೊದಲು ಭಾರತಕ್ಕೆ ಬನ್ನಿ. ಆನಂತರ ಅರ್ಜಿ ಪರಿಗಣನೆ ಮಾಡಬಹುದು ಎಂದು ಹೇಳಿದ್ದಾರೆ.
ಪರಮ್ ಬೀರ್ ಸಿಂಗ್ ಪರ ವಕೀಲರು ಹೆಚ್ಚುವರಿ ಕಾಲಾವಕಾಶ ಕೇಳಿದ್ದು, ಅದರಂತೆ ಕೋರ್ಟ್ ಅರ್ಜಿಯನ್ನು ನ.22ಕ್ಕೆ ಮುಂದೂಡಿಕೆ ಮಾಡಿದೆ. ಪರಮ್ ಬೀರ್ ಸಿಂಗ್ ಕಳೆದ ಸೆಪ್ಟಂಬರ್ ತಿಂಗಳಿನಿಂದ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು, ಸಿಂಗ್ ವಿದೇಶಕ್ಕೆ ಪಲಾಯನ ಮಾಡಿದ್ದಾರೆಂಬ ಅನುಮಾನ ವ್ಯಕ್ತಪಡಿಸಿ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ, ಕರ್ತವ್ಯದಿಂದ ಅಮಾನತುಗೊಂಡಿರುವ ಪರಮ್ ಬೀರ್ ಸಿಂಗ್ ಅವರನ್ನು ಕೋರ್ಟ್ ಘೋಷಿತ ಅಪರಾಧಿ ಎಂದು ಘೋಷಿಸಿದೆ. ಇದರ ಬೆನ್ನಲ್ಲೇ ಸಿಂಗ್ ಪರ ವಕೀಲರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.
ಪರಮ್ ವಿರುದ್ಧ ಏನಿದು ಪ್ರಕರಣ ?
ಪರಮ್ ಬೀರ್ ಸಿಂಗ್ ವಿರುದ್ಧ ಗೋರೆಗಾಂವ್ ನಗರದ ಬಿಲ್ಡರ್, ಹೊಟೇಲ್ ಉದ್ಯಮಿ ಬಿಮಲ್ ಅಗರ್ವಾಲ್ ದೂರು ಸಲ್ಲಿಸಿದ್ದರು. ತನ್ನಲ್ಲಿ ಬಾರ್ ಮತ್ತು ಹೊಟೇಲಿಗೆ ಪೊಲೀಸ್ ದಾಳಿ ನಡೆಸದಂತಿರಲು 9 ಲಕ್ಷ ರೂಪಾಯಿ ಕೇಳಿದ್ದರು. ಅಲ್ಲದೆ, 2.92 ಲಕ್ಷ ಮೌಲ್ಯದ ಎರಡು ಮೊಬೈಲ್ ಫೋನ್ ತೆಗೆದುಕೊಡುವಂತೆ ಪರಮ್ ಬೀರ್ ಸಿಂಗ್ ಒತ್ತಾಯಿಸಿದ್ದರು. 2020 ಜನವರಿಯಿಂದ 2021 ಮಾರ್ಚ್ ನಡುವೆ ಹಣಕ್ಕಾಗಿ ಪೀಡಿಸಿದ್ದರು ಎಂದು ಗೋರೆಗಾಂವ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣದಲ್ಲಿ ಅಮಾನತುಗೊಂಡಿರುವ ಇನ್ನೊಬ್ಬ ಪೊಲೀಸ್ ಅಧಿಕಾರಿ ಸಚಿನ್ ವಝೆ, ಸುಮಿತ್ ಸಿಂಗ್ ಅಲಿಯಾಸ್ ಚಿಂಟು, ಅಲ್ಪೇಶ್ ಪಟೇಲ್, ವಿನಯ್ ಸಿಂಗ್ ಅಲಿಯಾಸ್ ಬಬ್ಲೂ ಮತ್ತು ರಿಯಾಜ್ ಭಾಟಿ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
ಇದಲ್ಲದೆ, ಗೃಹ ಸಚಿವ ಅನಿಲ್ ದೇಶಮುಖ್, ಪೊಲೀಸ್ ಅಧಿಕಾರಿ ಸಚಿನ್ ವಝೆ ಮೂಲಕ ಪ್ರತಿ ತಿಂಗಳು ಮುಂಬೈನಲ್ಲಿ ಹೊಟೇಲ್, ಬಾರ್ ಮಾಲಕರಿಂದ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಟಾರ್ಗೆಟ್ ಕೊಟ್ಟಿದ್ದಾರೆಂದು ಪರಮ್ ಬೀರ್ ಸಿಂಗ್ ಆರೋಪಿಸಿ ಮಾಧ್ಯಮದ ಗಮನ ಸೆಳೆದಿದ್ದರು. ಈ ಆರೋಪವನ್ನು ಸಚಿವ ಅನಿಲ್ ದೇಶಮುಖ್ ನಿರಾಕರಿಸಿದ್ದರು.
Param Bir Singh, declared an ‘absconding accused’ on November 17 in an extortion case, is a 1988-batch IPS officer who took over as Police Commissioner of Mumbai from Sanjay Barve in February 2020. He was transferred as Director General of Maharashtra Home Guard in March 2021.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm