ಬ್ರೇಕಿಂಗ್ ನ್ಯೂಸ್
25-10-21 05:12 pm Headline Karnataka News Desk ದೇಶ - ವಿದೇಶ
ಮುಂಬೈ, ಅ.25: ಪೆಟ್ರೋಲ್ ರೇಟ್ ಸಾರ್ವಕಾಲಿಕ ದಾಖಲೆಯತ್ತ ಮುನ್ನುಗ್ಗಿದೆ. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವು ನಾಗಾಲೋಟದಲ್ಲಿದ್ದು, ಕಳೆದ ವಾರ ದಿನವೂ ಪೈಸೆ ಲೆಕ್ಕದಲ್ಲಿ ಏರಿಕೆಯಾಗಿತ್ತು. ಭಾನುವಾರ ಕೂಡ ಪೆಟ್ರೋಲ್ ದರ ಲೀಟರಿಗೆ 35 ಪೈಸೆ ಹೆಚ್ಚಳವಾಗಿತ್ತು. ಇದರಿಂದಾಗಿ ದೇಶಾದ್ಯಂತ ಆಯಾ ರಾಜ್ಯಗಳ ತೆರಿಗೆ ಆಧರಿಸಿ, ದರವೂ ವಿಭಿನ್ನವಾಗಿದೆ.
ಸೋಮವಾರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 107.59 ರೂಪಾಯಿ ಮತ್ತು ಡೀಸೆಲ್ ಬೆಲೆ 96.32 ರೂ. ಆಗಿದೆ. ಇದೇ ವೇಳೆ, ದೇಶದ ವಾಣಿಜ್ಯ ರಾಜಧಾನಿಯೆಂದು ಕರೆಸಿಕೊಳ್ಳುವ ಮುಂಬೈನಲ್ಲಿ ಪೆಟ್ರೋಲ್ ರೇಟ್ 113.46 ರೂ. ಆಗಿದ್ದು, ಡೀಸೆಲ್ ದರವು 104 ರೂಪಾಯಿ ಆಗಿದೆ. ಭೋಪಾಲ್ ನಲ್ಲಿ ಪೆಟ್ರೋಲ್ ದರ ಅತ್ಯಧಿಕ ಅಂದರೆ, 116.26 ರೂ. ಆಗಿದ್ದರೆ, ಡೀಸೆಲ್ ದರವು 105.54 ರೂಪಾಯಿಗೆ ಏರಿಕೆಯಾಗಿದೆ.
ಇದೇ ವೇಳೆ, ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್ ದರ 104.52 ಆಗಿದ್ದರೆ, ಡೀಸೆಲ್ ದರ 100.59 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರಿಗೆ 111.38 ರೂ. ಆಗಿದ್ದು, ಡೀಸೆಲ್ ದರವು 102.23 ರೂ.ಗೆ ಏರಿದೆ. ಪಶ್ಚಿಮ ಬಂಗಾಳದ ಕೊಲ್ಕೊತ್ತಾದಲ್ಲಿ 108.11 ರೂ. ಆಗಿದೆ. ಡೀಸೆಲ್ ಬೆಲೆಯು 99.43 ಆಗಿದ್ದು ನೂರರ ಗಡಿಗೆ ಹತ್ತಿರ ತಲುಪಿದೆ. ಆಯಾ ರಾಜ್ಯಗಳ ತೆರಿಗೆ ಆಧರಿಸಿ, ಪೆಟ್ರೋಲ್, ಡೀಸೆಲ್ ದರವೂ ಹೆಚ್ಚು ಕಡಿಮೆ ಇರಲಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಮೇಲಿನ ದರ ಏರಿಕೆ ಆಧರಿಸಿ, ದೇಶದಲ್ಲಿ ಪೆಟ್ರೋಲಿಯಂ ಕಂಪನಿಗಳು ದರವನ್ನು ಏರಿಕೆ ಮಾಡುತ್ತದೆ. ಇದರ ನೇರ ಹೊರೆಯು ಜನರ ಮೇಲೆ ಬೀಳುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲಿಗೆ 85.79 ಡಾಲರ್ ಇದೆ. ಕೋವಿಡ್ ನಂತರದಲ್ಲಿ ಒಂದೇ ಸಮನೆ ಜಗತ್ತಿನಾದ್ಯಂತ ಪೆಟ್ರೋಲಿಯಂ ತೈಲಕ್ಕೆ ಬೇಡಿಕೆ ಹೆಚ್ಚಿದ್ದರಿಂದ ಮಾರುಕಟ್ಟೆಯಲ್ಲಿ ತೈಲ ದರವೂ ಏರಿಕೆಯಾಗಿದೆ. ಅಮೆರಿಕದಲ್ಲಿಯೂ ಏಳು ವರ್ಷಗಳಲ್ಲಿ ಅತ್ಯಧಿಕ ದರಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ತೈಲ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಮತ್ತು ಇದರ ನಿಯಂತ್ರಣಕ್ಕೆ ಕೇಂದ್ರ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಕಾಂಗ್ರೆಸ್, ನವೆಂಬರ್ ತಿಂಗಳಲ್ಲಿ ದೇಶಾದ್ಯಂತ ಸರಣಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ನವೆಂಬರ್ ತಿಂಗಳ 14ರಿಂದ 29ರ ವರೆಗೆ ದೇಶದ ಎಲ್ಲ ಭಾಗದಲ್ಲಿಯೂ ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
Petrol and diesel prices across India on Monday, October 25, broke the five-day streak of going up till Sunday and remained unchanged. However, the prices remained at an all time high. According to a fuel price notification from the Oil Marketing Companies (OMCs), the last revision in petrol and diesel rates was done on October 24, that is, on Sunday. On this day, petrol and diesel prices went up by 35 paise a litre. In the national capital of Delhi, petrol can be bought at Rs 107.59 per litre. Similarly, the cost of one litre of diesel was fixed at Rs 96.32, according to the price notification by the OMCs.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm