ಬ್ರೇಕಿಂಗ್ ನ್ಯೂಸ್
11-09-20 10:55 am Headline Karnataka News Network ದೇಶ - ವಿದೇಶ
ವಾಷಿಂಗ್ಟನ್, ಸೆ.11: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿರುವ ಅಮೆರಿಕದ ಕಮರ್ಷಿಯಲ್ ಕಾರ್ಗೊ ಬಾಹ್ಯಾಕಾಶ ನೌಕೆಗೆ ನಾಸಾದ ಬಾಹ್ಯಾಕಾಶಯಾನಿ ದಿವಂಗತ ಕಲ್ಪನಾ ಚಾವ್ಲಾ ಅವರ ಹೆಸರು ಇಡಲಾಗಿದೆ. ಚಾವ್ಲಾ, ಬಾಹ್ಯಾಕಾಶ ಪ್ರವೇಶಿಸಿದ ಮೊಟ್ಟಮೊದಲ ಭಾರತೀಯ ಸಂಜಾತೆ. ಬಾಹ್ಯಾಕಾಶ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಕೊಡುಗೆಯನ್ನು ಗುರುತಿಸಿ ಬಾಹ್ಯಾಕಾಶ ನೌಕೆಗೆ ಇವರ ಹೆಸರು ಇಡಲಾಗಿದೆ.
ಮುಂದಿನ ಸೈಗ್ನಸ್ ಕ್ಯಾಪ್ಸೂಲ್ಗೆ "ಎಸ್.ಎಸ್.ಕಲ್ಪನಾ ಚಾವ್ಲಾ" ಬಾಹ್ಯಾಕಾಶ ನೌಕೆ ಎಂದು ಹೆಸರಿಸಲಾಗುವುದು ಎಂದು ಅಮೆರಿಕದ ಜಾಗತಿಕ ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನ ಕಂಪನಿಯಾದ ನಾರ್ಥ್ರಾಪ್ ಗ್ರೂಮನ್ ಪ್ರಕಟಿಸಿದೆ. 2003ರಲ್ಲಿ ಆರು ಮಂದಿ ತಂತ್ರಜ್ಞರ ಜತೆ ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿ ಮೃತಪಟ್ಟ ಕಲ್ಪನಾ ಚಾವ್ಲಾ ಅವರ ಸ್ಮರಣಾರ್ಥವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.
"ಇತಿಹಾಸ ಸೃಷ್ಟಿಸಿದ, ಭಾರತೀಯ ಮೂಲದ ಮೊಟ್ಟಮೊದಲ ಮಹಿಳಾ ಬಾಹ್ಯಾಕಾಶ ಯಾನಿ ಕಲ್ಪನಾ ಚಾವ್ಲಾ ಅವರನ್ನು ನಾವಿಂದು ಗೌರವಿಸುತ್ತಿದ್ದೇವೆ. ಮನುಷ್ಯ ಸಹಿತ ಬಾಹ್ಯಾಕಾಶ ನೌಕೆ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಕೊಡುಗೆ ಅವಿಸ್ಮರಣೀಯ" ಎಂದು ಕಂಪನಿ ಟ್ವೀಟ್ ಮಾಡಿದೆ.
ಬಾಹ್ಯಾಕಾಶ ಯೋಜನೆಗೆ ಕಲ್ಪನಾ ಚಾವ್ಲಾ ಮಾಡಿದ ತ್ಯಾಗ ಅವಿಸ್ಮರಣೀಯ. ಅವರ ಪರಂಪರೆ ಸಹ ಬಾಹ್ಯಾಕಾಶ ಯಾನಿಗಳ ಮೂಲಕ ಮುಂದುವರಿದಿದ್ದು, ಅವರ ಹೆಜ್ಜೆ ಗುರುತನ್ನು ಅನುಸರಿಸುವಂತೆ ಅವರು ಸ್ಫೂರ್ತಿ ತುಂಬಿದಿದ್ದಾರೆ ಎಂದು ಅವರ ಸಾಧನೆಯನ್ನು ಬಣ್ಣಿಸಿದೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm