ಬ್ರೇಕಿಂಗ್ ನ್ಯೂಸ್
17-09-21 10:06 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆ.17 : ಪೊಲೀಸ್ ಹೋಮ್ ಗಾರ್ಡ್ ಆಗಿದ್ದ 21 ವರ್ಷದ ಯುವತಿಯ ಭೀಕರ ಕೊಲೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಯುತ್ತಿದ್ದರೂ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಖಚಿತ ವಿವರಗಳು ಲಭ್ಯವಾಗಿಲ್ಲ. ಗ್ಯಾಂಗ್ ರೇಪ್ ಮಾಡಿ, ಕ್ರೂರವಾಗಿ ಹಿಂಸಿಸಿ ಕೊಲೆ ಮಾಡಲಾಗಿದೆ ಎನ್ನಲಾಗಿತ್ತು. ಆದರೆ, ದೆಹಲಿ ಪೊಲೀಸರು ಹೇಳುತ್ತಿರುವ ಪ್ರಕಾರ ಪೋಸ್ಟ್ ಮಾರ್ಟಂ ವರದಿಯಲ್ಲಿ ಯಾವುದೇ ಲೈಂಗಿಕ ಕಿರುಕುಳ ಆಗಿರುವ ಬಗ್ಗೆ ಮಾಹಿತಿ ಇಲ್ವಂತೆ.
ದೆಹಲಿಯ ಸಂಗಮ್ ನಗರದ ನಿವಾಸಿ, ಸಬಿಯಾ ಸೈಫಿ ಎನ್ನುವ 21 ವರ್ಷದ ಯುವತಿ ಆಗಸ್ಟ್ 26ರಂದು ಭೀಕರವಾಗಿ ಕೊಲೆಯಾಗಿದ್ದಳು. ಆಕೆಯ ಶವ ಹರ್ಯಾಣ ರಾಜ್ಯದ ಫರೀದಾಬಾದ್ ಎಂಬಲ್ಲಿ ರಸ್ತೆ ಬದಿಯ ಚರಂಡಿಯಲ್ಲಿ ಆಗಸ್ಟ್ 27ರಂದು ಪತ್ತೆಯಾಗಿತ್ತು. ಅದೇ ದಿನ, ಆಕೆಯ ಪತಿ ಎನ್ನಲಾದ ನಿಜಾಮುದ್ದೀನ್ ಎಂಬ ಯುವಕ ತಾನೇ ಕೃತ್ಯ ಎಸಗಿದ್ದಾಗಿ ಸ್ಥಳೀಯ ಸೂರಜ್ ಕುಂಡ್ ಠಾಣೆಗೆ ಶರಣಾಗಿದ್ದ. ಆದರೆ, ಸಬಿಯಾ ಹೆತ್ತವರು ಮಾತ್ರ ಇದ್ಯಾವುದನ್ನೂ ಒಪ್ಪಲು ರೆಡಿ ಇರಲಿಲ್ಲ.
ಸಬಿಯಾಗೆ ಮದುವೆಯೇ ಆಗಿರಲಿಲ್ಲ. ನಿಜಾಮುದ್ದೀನ್ ಯಾರೆಂದೇ ಗೊತ್ತಿಲ್ಲ ಎಂದು ಆಕೆಯ ತಂದೆ ಹೇಳಿದ್ದರು. ಅಲ್ಲದೆ, ಆಕೆಯ ಮೃತದೇಹವನ್ನು ಪಡೆದಿದ್ದಾಗ ದೇಹದಲ್ಲಿ ತೀವ್ರ ರೀತಿಯಲ್ಲಿ ಕೊಚ್ಚಿ ಕೊಚ್ಚಿ ಕೊಂದಿರುವುದು ಕಂಡುಬಂದಿತ್ತು. ಸ್ತನಗಳನ್ನು ಕೊಯ್ಯಲಾಗಿತ್ತು. ಬೆನ್ನು, ಹೊಟ್ಟೆ, ತೊಡೆ ಹೀಗೆ ಎಲ್ಲ ಕಡೆಯೂ ಕಡಿದ ಗಾಯಗಳಿದ್ದವು. ಒಬ್ಬನೇ ಈ ರೀತಿ ಮಾಡಿರಲು ಸಾಧ್ಯವಿಲ್ಲ. ಒಬ್ಬರಿಗಿಂತ ಹೆಚ್ಚು ಮಂದಿ ಸೇರಿ ಈ ಕೃತ್ಯ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಯುವತಿಯ ಭೀಕರ ಕೊಲೆಯ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ ಬಳಿಕ ಪ್ರಕರಣದ ತನಿಖೆಯನ್ನು ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರು ಕೈಗೆತ್ತಿಕೊಂಡಿದ್ದರು.
ಆರೋಪಿ ನಿಜಾಮುದ್ದೀನನ್ನು ವಿಚಾರಣೆ ನಡೆಸಿದಾಗ, ನಾವಿಬ್ಬರೂ ಜೂನ್ 11ರಂದು ಸಾಕೇತ್ ಕೋರ್ಟ್ ಆವರಣದಲ್ಲಿ ರಿಜಿಸ್ಟರ್ ಮದುವೆಯಾಗಿದ್ದೆವು. ಆದರೆ ಮದುವೆ ವಿಚಾರ ಆಕೆಯ ಮನೆಯವರಿಗೆ ತಿಳಿಯದ್ದರಿಂದ ಒಟ್ಟಿಗೇ ವಾಸ ಇರಲಿಲ್ಲ. ಒಂದೇ ಕಡೆ ಕೆಲಸ ಮಾಡುತ್ತಿದ್ದೆವು ಅಷ್ಟೇ ಎಂದು ಹೇಳಿದ್ದಾನೆ. ಆದರೆ, ಆಕೆಗೆ ನನ್ನ ಜೊತೆ ಮದುವೆಯಾಗಿದ್ದರೂ, ಬೇರೆಯವರ ಜೊತೆ ಸಂಬಂಧ ಇರಿಸಿಕೊಂಡಿದ್ದಳು. ಅದರ ಕೋಪದಲ್ಲಿ ಆಕೆಯನ್ನು ಬೈಕಿನಲ್ಲಿ ಕರೆದೊಯ್ದು ಕೊಲೆ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದ.
ಮತ್ತೊಂದು ಹೇಳಿಕೆಯಲ್ಲಿ ಸಬಿಯಾ ಸೋದರ, ನಿಜಾಮುದ್ದೀನ್ ಬಗ್ಗೆ ಗೊತ್ತು. ಆದರೆ ಆಕೆಗೆ ಮದುವೆಯಾಗಿದ್ದು ಗೊತ್ತಿಲ್ಲ. ಸಬಿಯಾಗೆ ಕೆಲಸ ಸಿಗಲು ಸಹಾಯ ಮಾಡಿದ್ದ ಅಷ್ಟೇ. ಆತ ಈ ರೀತಿ ಕ್ರೂರವಾಗಿ ಕೊಲೆ ಮಾಡಿದ್ದಾನೆ ಅನ್ನೋದನ್ನು ನಂಬಲು ಆಗುತ್ತಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಫರೀದಾಬಾದ್ ಡಿಸಿಪಿ ಡಾ.ಅನ್ಶು ಸಿಂಗ್ಲಾ ಈ ಬಗ್ಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದು, ಪೋಸ್ಟ್ ಮಾರ್ಟಂ ವರದಿಯಲ್ಲಿ ಯಾವುದೇ ಲೈಂಗಿಕ ಕಿರುಕುಳ ಆಗಿರುವ ಬಗ್ಗೆ ಉಲ್ಲೇಖ ಇಲ್ಲ. ಹರಿತ ಚೂರಿಯಿಂದ ದೇಹದ ಹಲವೆಡೆ ಕಡಿದ ಗಾಯಗಳಿದ್ದವು ಎಂದು ತಿಳಿಸಿದ್ದಾರೆ. ಈ ಕೃತ್ಯದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎನ್ನುವ ಬಗ್ಗೆ ದೆಹಲಿ ಮತ್ತು ಹರ್ಯಾಣ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ದಿ ಕ್ವಿಂಟ್ ಸೇರಿ ಕೆಲವೊಂದು ವೆಬ್ ಮೀಡಿಯಾಗಳು ಇದರ ಬಗ್ಗೆ ಸುದ್ದಿ ಮಾಡಿದ್ದು ಬಿಟ್ಟರೆ ಯಾವುದೇ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗದೇ ಇರುವುದರಿಂದ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ.
ರಾಜಧಾನಿ ದೆಹಲಿಯಲ್ಲಿ ನಿರ್ಭಯಾ ಮೀರಿಸಿದ ಘೋರ ಹತ್ಯೆ ; ಪೊಲೀಸ್ ಅಧಿಕಾರಿ ಸಬಿಯಾ ಸೈಫಿ ಗ್ಯಾಂಗ್ ರೇಪ್, ಮರ್ಡರ್ !
The brutal murder of a Delhi civil defence volunteer, Sabiya Saifi, is being claimed as a rape case by popular instagram accounts due to which it went viral and netizens have been demanding justice on the victims’s behalf however as per media and Police reports, there is no angle of rape. Nizamuddin, the alleged husband of Sabiya whom she married at a Delhi’s Saket court on June 11th murdered her on the night of 27th August in anger over her alleged relations with other men and later surrendered at a Faridabad Police station on 28th
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm