ಬ್ರೇಕಿಂಗ್ ನ್ಯೂಸ್
17-09-21 02:34 pm Headline Karnataka News Network ದೇಶ - ವಿದೇಶ
ಲಕ್ನೋ, ಸೆ.17: ಬಹುನಿರೀಕ್ಷಿತ ಜಿಎಸ್ ಟಿ ಮಂಡಳಿ ಸಭೆಯು ಇಂದು ಲಕ್ನೋದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯಲಿದೆ. ಸಭೆಯಲ್ಲಿ ಪ್ರಮುಖವಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ಸೇರ್ಪಡೆ ಮಾಡಿಕೊಳ್ಳಲಾಗುತ್ತೆ ಎನ್ನುವ ಬಗ್ಗೆ ಸುದ್ದಿಗಳು ಬರುತ್ತಿವೆ. ಆದರೆ, ವಾಸ್ತವದಲ್ಲಿ ಜಿಎಸ್ ಟಿ ಅಡಿಯಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರದಂತೆ ಕೇಂದ್ರಕ್ಕೆ ರಾಜ್ಯಗಳೇ ಒತ್ತಡ ಹೇರಿವೆ ಎನ್ನೋದನ್ನು ಇಂಡಿಯಾ ಟುಡೇ ವರದಿ ಮಾಡಿದೆ.
ಸಭೆಯಲ್ಲಿ 28 ರಾಜ್ಯಗಳ ಪ್ರತಿನಿಧಿಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಜಿಎಸ್ಟಿ ಮಂಡಳಿಯಲ್ಲಿ ಜಿಎಸ್ಟಿ ಸೆಸ್ ಪರಿಹಾರದಲ್ಲಿ ತಮ್ಮ ಪಾಲಿನ ಹಕ್ಕನ್ನು ಕೇಳುವುದಕ್ಕಾಗಿ ರಾಜ್ಯಗಳ ಪ್ರತಿನಿಧಿಗಳು ಒತ್ತಡ ಹೇರಿದ್ದಾರೆ. ಕೇಂದ್ರ ಸರಕಾರ ಸೇವೆಗಳು ಮತ್ತು ವಿವಿಧ ಮಾದರಿಯ 50 ವಸ್ತುಗಳನ್ನು ಜಿಎಸ್ ಟಿ ತೆರಿಗೆ ವ್ಯಾಪ್ತಿಯಲ್ಲಿ ತರಲು ಮುಂದಾಗಿದೆ ಎನ್ನಲಾಗುತ್ತಿದೆ. ಕಳೆದ ಬಾರಿ 2017ರ ಜುಲೈನಲ್ಲಿ ಜಿಎಸ್ ಟಿ ತೆರಿಗೆಯನ್ನು ದೇಶಾದ್ಯಂತ ಜಾರಿಗೆ ತರಲಾಗಿತ್ತು. ಐದು ವರ್ಷಗಳ ಒಳಗೆ ಜಿಎಸ್ಟಿ ಪಾಲಿನ ಮೊತ್ತವನ್ನು ಆಯಾ ರಾಜ್ಯಗಳಿಗೆ ಹಸ್ತಾಂತರ ಮಾಡುವುದಾಗಿಯೂ ಕೇಂದ್ರ ಭರವಸೆ ನೀಡಿತ್ತು.
ಆದರೆ, ಕರ್ನಾಟಕ ಸೇರಿದಂತೆ ಹೆಚ್ಚಿನ ರಾಜ್ಯಗಳು ಕೇಂದ್ರದ ಪಾಲಿನ ಜಿಎಸ್ಟಿ ಪರಿಹಾರವನ್ನು ಪಡೆದಿಲ್ಲ. ಈ ಬಗ್ಗೆ ವಿಪಕ್ಷಗಳು ಒತ್ತಡ ಹಾಕುತ್ತಿದ್ದರೂ, ಕಳೆದ ಬಾರಿ ಯಡಿಯೂರಪ್ಪ ಸರಕಾರ ಇದ್ದಾಗ ಕೇಂದ್ರ ಸರಕಾರ ಅದನ್ನು ನೀಡಿರಲಿಲ್ಲ. ಇಂದಿನ ಸಭೆಯಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುತ್ತಿಲ್ಲ. ಅವರ ಬದಲಿಗೆ, ರಾಜ್ಯದ ಪ್ರತಿನಿಧಿಯಾಗಿ ಕಮರ್ಶಿಯಲ್ ಟ್ಯಾಕ್ಸ್ ಕಮಿಷನರ್ ಸಿ. ಶಿಖಾ ಅವರನ್ನು ಕಳುಹಿಸಿ ಕೊಡಲಾಗಿದೆ. ಕಳೆದ ಬಾರಿ 2020ರ ಕೊರೊನಾ ಲಾಕ್ಡೌನ್ ಎದುರಾದ ಬಳಿಕ ಇದೇ ಮೊದಲ ಬಾರಿಗೆ ಎಲ್ಲ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ಜಿಎಸ್ಟಿ ಮಂಡಳಿಯ ಸಭೆಯನ್ನು ನಡೆಸಲಾಗುತ್ತಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ, ದಕ್ಷಿಣದ ಮುಂದುವರಿದ ರಾಜ್ಯಗಳಲ್ಲಿ ಜಿಎಸ್ಟಿ ತೆರಿಗೆ ಸಂಗ್ರಹ ಕಡಿಮೆ. ಬಿಹಾರ, ಅಸ್ಸಾಮ್, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶದಲ್ಲಿ ಜಿಎಸ್ಟಿ ಸಂಗ್ರಹ ಹೆಚ್ಚಿದ್ದರೆ, ಮುಂದುವರಿದ ರಾಜ್ಯಗಳಾದ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ದೆಹಲಿಯಲ್ಲಿ ಜಿಎಸ್ಟಿ ಸಂಗ್ರಹ ಆಗಿದ್ದು ಕಡಿಮೆ. ಈ ಭಾಗಗಳಲ್ಲಿ ಜಿಎಎಸ್ಟಿ ಸಂಗ್ರಹ ಕಡಿಮೆಯಾಗಿರುವುದು ಜನರಿಗೆ ಹೊರೆಯಾಗಿರುವುದರ ಸೂಚನೆ ಎನ್ನುವ ಹಿನ್ನೆಲೆಯಲ್ಲಿ ಈ ಬಾರಿಯ ಜಿಎಸ್ಟಿ ಮಂಡಳಿ ಸಭೆಯಲ್ಲಿ 50ಕ್ಕೂ ಹೆಚ್ಚು ಉತ್ಪನ್ನಗಳ ತೆರಿಗೆಯನ್ನು 14ರಿಂದ 5 ಶೇಕಡಾಕ್ಕೆ ಇಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಂತೆ, ಟೆಕ್ಸ್ ಟೈಲ್ಸ್, ಚಪ್ಪಲಿಗಳು, ವಿವಿಧ ಮಾದರಿಯ ಔಷಧಿಗಳು ಸೇರಿದಂತೆ ಕೆಲವು ಸೇವಾ ಕ್ಷೇತ್ರಗಳಲ್ಲಿಯೂ ಜಿಎಸ್ಟಿ ತೆರಿಗೆ ಇಳಿಕೆಯಾಗಲಿದೆ. ಆದರೆ, ಇದೇ ವೇಳೆ, 5 ವರ್ಷದ ಒಳಗೆ ಜಿಎಸ್ಟಿ ಬಾಕಿಯನ್ನು ರಾಜ್ಯಗಳಿಗೆ ಕೊಡಬೇಕೆಂಬ ನೀತಿಯನ್ನು ಸಡಿಲಿಸುವ ಸಾಧ್ಯತೆಯೂ ಇದೆ ಎನ್ನುವ ಮಾಹಿತಿಗಳಿವೆ.
ಪೆಟ್ರೋಲಿಯಂ ಉತ್ಪನ್ನ ಜಿಎಸ್ಟಿಗೆ ತರಲು ವಿರೋಧ
ಆದರೆ, ಇದೇ ವೇಳೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ಅಡಿಗೆ ತರುವುದಕ್ಕೆ ಮಾತ್ರ ಬಿಜೆಪಿ ಆಡಳಿತದಲ್ಲಿರುವ ಸೇರಿದಂತೆ ಬಹುತೇಕ ರಾಜ್ಯಗಳು ಬಲವಾಗಿ ವಿರೋಧಿಸಿವೆ. ಕಳೆದ ನಾಲ್ಕು ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ದರ ವಿಪರೀತ ಏರಿಕೆಯಾಗಿದ್ದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಪೆಟ್ರೋಲ್, ಡೀಸೆಲನ್ನು ಯಾಕೆ ಜಿಎಸ್ಟಿ ವ್ಯಾಪ್ತಿಗೆ ತರಲಾಗಿಲ್ಲ ಎಂದು ಜಿಎಸ್ಟಿ ಮಂಡಳಿಯನ್ನು ಪ್ರಶ್ನೆ ಮಾಡಿತ್ತು. ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಜಿಎಸ್ಟಿ ಮಂಡಳಿ ಆರು ವಾರಗಳ ಸಮಯ ಕೇಳಿತ್ತು. ಜೂನ್ ತಿಂಗಳಲ್ಲಿ ಹೈಕೋರ್ಟ್ ಸೂಚನೆ ಬಂದಿದ್ದರಿಂದ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಮಂಡಳಿಗೆ ಅನಿವಾರ್ಯ ಆಗಿದ್ದರೂ, ರಾಜ್ಯಗಳು ಈ ಪ್ರಸ್ತಾವಕ್ಕೆ ವಿರೋಧ ಸೂಚಿಸಿವೆ.
ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕ ಸರಕಾರಗಳು ಈ ಬಗ್ಗೆ ಪ್ರಬಲ ಆಕ್ಷೇಪ ಎತ್ತಿವೆ. ಪೆಟ್ರೋಲ್, ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ಬಂದಲ್ಲಿ ಕೇರಳ ಸರಕಾರ ವಾರ್ಷಿಕ 8 ಸಾವಿರ ಕೋಟಿ ರೂ. ನಷ್ಟ ಎದುರಿಸಲಿದೆ ಎಂದು ಅಲ್ಲಿನ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಹೇಳಿದ್ದಾರೆ. ಹೀಗಾಗಿ ಈ ರೀತಿಯ ಪ್ರಸ್ತಾವಕ್ಕೆ ಪ್ರಬಲ ವಿರೋಧವನ್ನೂ ತಿಳಿಸಿದ್ದಾರೆ. ಕರ್ನಾಟಕದ ಕಡೆಯಿಂದಲೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಕಳೆದ ಎರಡು ವರ್ಷಗಳಿಂದ ಬಾಕಿಯಿರುವ ಜಿಎಸ್ಟಿ ಸೆಸ್ ಅನ್ನು ಪಡೆಯುವುದಕ್ಕಾಗಿ ಮಾತ್ರ ಒತ್ತಡ ಹೇರಲು ಸೂಚಿಸಲಾಗಿದೆ. ಮಹಾರಾಷ್ಟ್ರ ಸರಕಾರದ ಡಿಸಿಎಂ ಅಜಿತ್ ಪವಾರ್, ರಾಜ್ಯದ ತೆರಿಗೆ ವ್ಯಾಪ್ತಿಯನ್ನು ಕೇಂದ್ರ ಸರಕಾರ ಮುಟ್ಟಲು ಬರಬಾರದು. ಅದರಿಂದ ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದಿದ್ದಾರೆ. ಆದರೆ, ಪೆಟ್ರೋಲ್, ಡೀಸೆಲ್ ಲೀಟರ್ ದರದಲ್ಲಿ 60 ಶೇಕಡ ತೆರಿಗೆ ಇರುವುದರಿಂದ ಜನರಿಗೆ ಭಾರೀ ಹೊರೆಯಾಗುತ್ತಿದೆ ಎನ್ನುವ ಟೀಕೆ ವ್ಯಕ್ತವಾಗಿದ್ದರಿಂದ ಒಂದೋ ತೆರಿಗೆ ಇಳಿಸಬೇಕು ಅಥವಾ ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂಬ ಅಭಿಪ್ರಾಯ ಕೇಂದ್ರದ ಮುಂದಿದೆ.
ಇದೇ ವೇಳೆ, ಆಹಾರ ವಸ್ತುಗಳನ್ನು ವಿತರಣೆ ಮಾಡುವಲ್ಲಿ ಮನೆಮಾತಾಗಿರುವ ಝೊಮೆಟೋ ಮತ್ತು ಸ್ವಿಗ್ಗಿ ಏಪ್ ಗಳನ್ನೂ ಜಿಎಸ್ಟಿಗೆ ತರಲು ಕೇಂದ್ರ ಸರಕಾರ ಮುಂದಾಗಿದೆ. ಅದೀಗ ಸರಕಾರಿ ಮಾನದಂಡ ಪ್ರಕಾರ ರಿಜಿಸ್ಟರ್ ಆಗಿದ್ದರೂ, ಜಿಎಸ್ಟಿ ವ್ಯಾಪ್ತಿಯ ತೆರಿಗೆಯನ್ನು ಹೊಂದಿಲ್ಲ. ಜೊತೆಗೆ, ಜಿಎಸ್ಟಿ ವ್ಯಾಪ್ತಿಯಲ್ಲಿರುವ ರೆಸ್ಟೋರೆಂಟ್ ಗಳಿಗೆ ಮಾತ್ರ ಅನ್ವಯ ಎಂಬ ಖಾತರಿ ಇರುವುದಿಲ್ಲ. ಹೀಗಾಗಿ ಈ ರೀತಿಯ ಏಪ್ ಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಮುಂದಾಗಿದೆ. ಫುಡ್ ಡೆಲಿವರಿ ಈಗ ಮಹಾನಗರಗಳಲ್ಲಿ ದೊಡ್ಡ ಬಿಸಿನೆಸ್ ಆಗಿರುವುದರಿಂದ ಈ ರೀತಿಯ ವ್ಯವಹಾರ ಜಿಎಸ್ಟಿ ವ್ಯಾಪ್ತಿಗೆ ತರದೇ ಇರುವುದರಿಂದ ಸರಕಾರಕ್ಕೆ ಎರಡು ಸಾವಿರ ಕೋಟಿಗೂ ಹೆಚ್ಚು ನಷ್ಟ ಆಗುತ್ತಿದೆಯೆಂಬ ಲೆಕ್ಕಾಚಾರ ಇದೆ.
For the first time since March 2020 when the Covid-19 pandemic hit India, the GST Council meeting on Friday in Lucknow will have all the members present physically. Finance Minister Nirmala Sitharaman will chair the meeting, and it will be attended by representatives of 28 states and three Union Territories to discuss items that may both reduce and increase the burden on consumers.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm