ಬ್ರೇಕಿಂಗ್ ನ್ಯೂಸ್
13-09-21 12:40 pm kannada drivespark ದೇಶ - ವಿದೇಶ
ಆರ್ಥಿಕ ಸಂಕಷ್ಟದಲ್ಲೂ ಆಟೋ ಉದ್ಯಮವು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಫೋರ್ಡ್ ಕಂಪನಿಯು ಭಾರತದಲ್ಲಿ ಉದ್ಯಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿದೆ. ಈ ವಾರದ ಸುದ್ದಿಗಳಲ್ಲಿ ಟಾಟಾ ಕಾರುಗಳ ಮಾರಾಟ ಮತ್ತು ಮಳಿಗೆಗಳ ಹೆಚ್ಚಳ ಕೂಡಾ ಪ್ರಮುಖ ಸುದ್ದಿಯಾಗಿದ್ದು, ಇವಿ ವಾಹನಗಳ ಶುಕ್ರದೆಸೆ ಆರಂಭವಾಗಿದೆ. ಇನ್ನುಳಿದ ವಾರದ ಪ್ರಮುಖ ಸುದ್ದಿಗಳನ್ನು ಕೆಳಗಿನ ಸ್ಲೈಡ್ಗಳಲ್ಲಿ ಒಂದೊಂದಾಗಿ ನೋಡೋಣ.
ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ Ford Motor
ಅಮೆರಿಕದ ಕಾರು ಕಂಪನಿ ಫೋರ್ಡ್ ಭಾರತದಲ್ಲಿ ಉದ್ಯಮ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದು, ಕಂಪನಿಯು ಸುಮಾರು 2 ಶತಕೋಟಿ ಡಾಲರ್ಗಳಷ್ಟು ನಷ್ಟವಾದ ಕಾರಣ ಹಾಗೂ ಮಾರಾಟವು ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿನ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಫೋರ್ಡ್ ಕಂಪನಿಯು ಭಾರತದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿದರೂ ಗ್ರಾಹಕರ ಸೇವೆಯನ್ನು ಮುಂದುವರಿಸಲಿದ್ದು, ಕಂಪನಿಯು ಭಾರತದಲ್ಲಿ ತನ್ನ ಮಸ್ಟಾಂಗ್ ಹಾಗೂ ಎಂಡಿವರ್ ಕಾರುಗಳ ಮಾರಾಟವನ್ನು ಸ್ಟಾಕ್ ಇರುವವರೆಗೂ ಮುಂದುವರೆಸುವುದಾಗಿ ತಿಳಿಸಿದೆ. ಕಂಪನಿಯು ಕಳೆದ ಒಂದೆರಡು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ 1 ಬಿಲಿಯನ್ ಡಾಲರ್ ನಿಂದ 1.5 ಬಿಲಿಯನ್ ಡಾಲರ್ಗಳಷ್ಟು ನಷ್ಟ ಅನುಭವಿಸಿದ್ದು, ಭವಿಷ್ಯದಲ್ಲಿ ಕಾರು ಮಾರಾಟಕ್ಕಾಗಿ ಸಿಬಿಯು ನೀತಿ ಅಡಿ ಕೆಲವು ಕೆಲವು ಕಾರುಗಳನ್ನು ಮಾತ್ರ ಮಾರಾಟ ಮಾಡಲಿದೆ.
ದಾಖಲೆ ಮಟ್ಟದ ಮಾರಾಟ ಕಂಡ Tata Nexon
ಟಾಟಾ ನೆಕ್ಸಾನ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಕಾಂಪ್ಯಾಕ್ಟ್ ಎಸ್ಯುವಿ ಮಾದರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಸ್ವದೇಶಿ ಕಾರು ತಯಾರಕರಾದ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷದಿಂದ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ನೆಕ್ಸಾನ್ ಕಾರು ಮಾದರಿಯು ಮೊದಲ ಬಾರಿ ಒಂದು ತಿಂಗಳ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಾಟಗೊಂಡಿದೆ.
ನೆಕ್ಸಾನ್ ಕಾರು ಅತಿ ಹೆಚ್ಚು ಮಾರಾಟವಾಗುವ ಸಬ್ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ ಒಂದಾಗಿದ್ದು, ಕಳೆದ ತಿಂಗಳು ನೆಕ್ಸಾನ್ ಕಾರು ಸುಮಾರು 10,006 ಯುನಿಟ್ಗಳ ಮಾರಾಟ ಕಂಡಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ನೆಕ್ಸಾನ್ ಮಾದರಿಯ 5,179 ಯುನಿಟ್ಗಳನ್ನು ಮಾರಾಟಗೊಳಿಸಿತ್ತು. ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.93.20 ಬೆಳವಣಿಗೆಯನ್ನು ಸಾಧಿಸಿದೆ.
ಅರೆನಾ ಕಾರು ಮಾದರಿಗಳಿಗೂ 'Suzuki Connect' ಫೀಚರ್ಸ್
ದೇಶದ ಅಗ್ರಗಣ್ಯ ಕಾರು ಉತ್ಪಾದನಾ ಮತ್ತು ಮಾರಾಟ ಕಂಪನಿಯಾಗಿರುವ ಮಾರುತಿ ಸುಜುಕಿ(Maruti Suzuki) ತನ್ನ ಅರೆನಾ ಕಾರು ಮಾದರಿಗಳನ್ನು ಕಾರ್ ಕನೆಕ್ಟ್ ಫೀಚರ್ಸ್ಗಳನ್ನು ಪರಿಚಯಿಸಿದ್ದು, ಹೊಸ ಕಾರು ಮಾದರಿಗಳ ಜೊತೆಗೆ ಅಸ್ತಿತ್ವದಲ್ಲಿರುವ ಕಾರು ಮಾದರಿಗಳಿಗೂ ಹೊಸ ಫೀಚರ್ಸ್ ಬಿಡುಗಡೆ ಮಾಡಿದೆ.
ಹೊಸದಾಗಿ ಬಿಡುಗಡೆಯಾಗುವ ಕಾರುಗಳಲ್ಲಿ ಹೊಸ ಕಾರ್ ಕನೆಕ್ಟ್ ತಂತ್ರಜ್ಞಾನವು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗುತ್ತಿದ್ದು, ಈಗಾಗಲೇ ಅಸ್ತಿತ್ವ ಕಾರು ಮಾದರಿಗಳಿಗೆ ಹೊಸ ಟೆಲಿಮ್ಯಾಟ್ರಿಕ್ಸ್ ಕಂಟ್ರೊಲ್ ಯುನಿಟ್(TCU) ಅನ್ನು ಆಕ್ಸೆಸರಿಸ್ ಪ್ಯಾಕೇಜ್ನಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ ಮಾರುತಿ ಸುಜುಕಿ ಬಳಕೆದಾರರು ದೇಶದಾದ್ಯಂತ ಇರುವ 2800ಕ್ಕೂ ಹೆಚ್ಚು ಶೋರೂಮ್ಗಳಲ್ಲಿ ಟೆಲಿಮ್ಯಾಟ್ರಿಕ್ಸ್ ಕಂಟ್ರೊಲ್ ಯುನಿಟ್ ಖರೀದಿಗೆ ಲಭ್ಯವಿದ್ದು, ರೂ 11,900ಕ್ಕೆ(ತೆರಿಗೆಗಳನ್ನು ಒಳಗೊಂಡಂತೆ) ಹೊಸ ತಂತ್ರಜ್ಞಾನ ಸೌಲಭ್ಯವನ್ನು ಪರಿಚಯಿಸಲಾಗಿದೆ.
ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕಿಯಾ ಇಂಡಿಯಾ(Kia India) ಕಂಪನಿಯು ಸಹ ತನ್ನ ವಿವಿಧ ಕಾರು ಮಾದರಿಗಳ ಬೆಲೆ ಹೆಚ್ಚಿಸಿದೆ.
ಸೆಲ್ಟೊಸ್ ಮತ್ತು ಸೊನೆಟ್ ಕಾರುಗಳ ವಿವಿಧ ವೆರಿಯೆಂಟ್ಗಳಿಗೆ ಅನುಗುಣವಾಗಿ ರೂ.10 ಸಾವಿರದಿಂದ ರೂ. 20 ಸಾವಿರ ತನಕ ಬೆಲೆ ಹೆಚ್ಚಳ ಮಾಡಿದೆ. ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಕಳೆದ ಜನವರಿ, ಏಪ್ರಿಲ್ ಮತ್ತು ಜೂನ್ನಲ್ಲಿ ಬೆಲೆ ಏರಿಕೆ ಮಾಡಿದ ಕಿಯಾ ಇಂಡಿಯಾ ಕಂಪನಿಯು ಇದೀಗ ಮತ್ತೆ Seltos(ಸೆಲ್ಟೊಸ್) ಮತ್ತು Sonet(ಸೊನೆಟ್) ದರ ಹೆಚ್ಚಿಸಿದ್ದು, ಹೊಸ ದರ ಪಟ್ಟಿಯಲ್ಲಿ ಕಾರ್ನಿವಾಲ್(Carnival) ಮಾದರಿಯ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ.
ಬ್ಯಾಟರಿ ವಿನಿಮಯಕ್ಕಾಗಿ ಒಂದಾದ ಆಟೋ ದಿಗ್ಗಜ ಕಂಪನಿಗಳು
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಕಂಡು ಬರುತ್ತಿರುವ ಏರಿಕೆಯೇ ಇದಕ್ಕೆ ಸಾಕ್ಷಿ. ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಹಲವು ಭಾಗಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಉಂಟಾಗಿದೆ. ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂದೇ ಹೇಳಬಹುದು.
ಇದಕ್ಕಾಗಿ ನಾಲ್ಕು ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ KTM, Honda, Yamaha ಹಾಗೂ Piaggio ಕಂಪನಿಗಳು ಮೈತ್ರಿ ಮಾಡಿಕೊಂಡಿವೆ ಎಂದು ವರದಿಯಾಗಿದ್ದು, ಹೊಸ ಮೈತ್ರಿ ಯೋಜನೆ ಅಡಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ತೆರೆಯುವ ಯೋಜನೆಯಲ್ಲಿದೆ.
ಭಾರೀ ಪ್ರಮಾಣದ ಹೂಡಿಕೆ ಮಾಡಿದ Ultraviolette
ನಮ್ಮ ಬೆಂಗಳೂರಿನ ಆಲ್ಟ್ರಾವಯೊಲೆಟ್(Ultraviolette) ಆಟೋ ಕಂಪನಿಯು ಸಹ ಕಳೆದ ವರ್ಷ ಸುಧಾರಿತ ತಂತ್ರಜ್ಞಾನ ಪ್ರೇರಿತ ಎಫ್77(F77) ಸೂಪರ್ ಎಲೆಕ್ಟ್ರಿಕ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಆಲ್ಟ್ರಾವಯೊಲೆಟ್ ಎಲೆಕ್ಟ್ರಿಕ್ ಬೈಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಸಿದ್ದಪಡಿಸುತ್ತಿದ್ದು, ನಮ್ಮ ಬೆಂಗಳೂರಿನಲ್ಲೇ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಹೊಸ ವಾಹನ ಉತ್ಪಾದನಾ ಘಟಕಕ್ಕೂ ಚಾಲನೆ ನೀಡಿದೆ. ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಆಲ್ಟ್ರಾವಯೊಲೆಟ್ ಎಲೆಕ್ಟ್ರಿಕ್ ಬೈಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಸಿದ್ದಪಡಿಸುತ್ತಿದ್ದು, ನಮ್ಮ ಬೆಂಗಳೂರಿನಲ್ಲೇ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಹೊಸ ವಾಹನ ಉತ್ಪಾದನಾ ಘಟಕಕ್ಕೂ ಚಾಲನೆ ನೀಡಿದೆ.
ಯಮಹಾ ಮೈಲ್ಡ್ ಹೈಬ್ರಿಡ್ ಸ್ಕೂಟರ್ ಬಿಡುಗಡೆ
ಫ್ಯಾಸಿನೋ ಎಫ್ಐ(Fascino Fi) ಮಾದರಿಯನ್ನು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದ ಯಮಹಾ ಕಂಪನಿಯು ಇದೀಗ ರೇ ಜೆಡ್ಆರ್ ಎಫ್ಐ(RayZR Fi) ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ್ಯಾಲಿ ಎಫ್ಐ(RayZR Street Rally Fi) ಮಾದರಿಗಳಲ್ಲೂ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಿದೆ.
ನವೀಕೃತ ರೇ ಜೆಡ್ಆರ್ ಎಫ್ಐ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ್ಯಾಲಿ ಎಫ್ಐ ಹೈಬ್ರಿಡ್ ಸ್ಕೂಟರ್ ಮಾದರಿಗಳು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 76,830ಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 83,830 ಬೆಲೆ ಹೊಂದಿವೆ. 125 ಸಿಸಿ ಫ್ಯೂಲ್ ಇಂಜೆಕ್ಷೆಡ್ ಎಂಜಿನ್ನಲ್ಲಿ ಹೊಸದಾಗಿ ಜೋಡಣೆ ಮಾಡಲಾಗಿರುವ ಸ್ಟಾರ್ಟರ್ ಮೋಟಾರ್ ಜನರೇಟರ್ (ಎಸ್ಎಂಜಿ) ತಂತ್ರಜ್ಞಾನವು ಇಂಧನ ದಕ್ಷತೆಗೆ ಸಾಕಷ್ಟು ಸಹಕಾರಿಯಾಗಿದ್ದು, ಹೈಬ್ರಿಡ್ ತಂತ್ರಜ್ಞಾನವು ಸ್ಕೂಟರ್ ಚಾಲನೆಯ ಸಂದರ್ಭದಲ್ಲಿ ಪವರ್ ಅಸಿಸ್ಟ್ ಆಗಿ ಕಾರ್ಯನಿರ್ವಹಿಸಲಿದೆ.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm