ಬ್ರೇಕಿಂಗ್ ನ್ಯೂಸ್
06-09-21 01:12 pm Headline Karnataka News Network ದೇಶ - ವಿದೇಶ
ಕಾಬೂಲ್, ಸೆ.6: ತಾಲಿಬಾನ್ ಪಡೆಗಳಿಗೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ಪಂಜ್ ಶೀರ್ ಯೋಧರ ಮೇಲೆ ಪಾಕಿಸ್ಥಾನದ ವಾಯುಪಡೆ ಯೋಧರು ಎರಗಿದ್ದಾರೆ. ತಾಲಿಬಾನ್ ಮತ್ತು ಪಾಕಿಸ್ಥಾನಿ ಪಡೆಗಳ ಜಂಟಿ ದಾಳಿಯಿಂದಾಗಿ ಪಂಜ್ ಶೀರ್ ಮೇಲೆ ನಿಯಂತ್ರಣ ಸಾಧಿಸುವತ್ತ ಮುನ್ನುಗ್ಗಿದ್ದಾರೆ. ಇದೇ ವೇಳೆ, ಪಂಜ್ ಶೀರ್ ನಲ್ಲಿ ಪ್ರತಿರೋಧ ಪಡೆಗಳ ನೇತೃತ್ವ ವಹಿಸಿದ್ದ ಮಹಮ್ಮದ್ ಸಲೇ ಅವರನ್ನು ಕೊಂದು ಹಾಕಿರುವುದಾಗಿ ತಾಲಿಬಾನಿಗಳು ಹೇಳಿಕೊಂಡಿದ್ದಾರೆ.
ಭಾನುವಾರದಿಂದ ಪಂಜ್ ಶೀರ್ ನಲ್ಲಿ ಪಾಕ್ ವಾಯುಪಡೆ ಯೋಧರು ಡ್ರೋಣ್ ದಾಳಿ ಆರಂಭಿಸಿದ್ದರು. ಒಂದೆಡೆ ವಾಯುಪಡೆ ದಾಳಿ, ಇನ್ನೊಂದೆಡೆ ತಾಲಿಬಾನಿ ಪಡೆಗಳ ದಾಳಿಯಿಂದಾಗಿ ಪಂಜ್ ಶೀರ್ ಪ್ರಾಂತ್ಯದ ಪ್ರತಿರೋಧ ಪಡೆಗಳು ತೀವ್ರ ಕಂಗೆಟ್ಟಿದ್ದವು. ನಿನ್ನೆ ರಾತ್ರಿಯೂ ದಾಳಿ ಕಾರ್ಯಾಚರಣೆ ಮುಂದುವರಿದಿತ್ತು ಎನ್ನಲಾಗುತ್ತಿದ್ದು ಇಂದು ಬೆಳಗ್ಗೆ ತಾಲಿಬಾನಿಗಳು ಪಂಜ್ ಶೀರ್ ಪ್ರಾಂತ್ಯವನ್ನು ಪೂರ್ತಿಯಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಪಂಜ್ ಶೀರ್ ಪ್ರತಿರೋಧ ಪಡೆಯ ಸದಸ್ಯರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ.
ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಈ ಬಗ್ಗೆ ಹೇಳಿಕೆ ನೀಡಿದ್ದು, ಪಂಜ್ ಶೀರ್ ಪ್ರಾಂತ್ಯವನ್ನು ಸಂಪೂರ್ಣ ನಮ್ಮ ಹತೋಟಿಗೆ ತಂದಿದ್ದೇವೆ. ಅಲ್ಲಿನ ಜನರು ಕೂಡ ನಮ್ಮ ಸೋದರರೇ. ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ. ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಹೇಳಿದ್ದಾರೆ. ಫಾಹಿಮ್ ದಶ್ತಿ, ಅಹಮ್ಮದ್ ಮಸೂದ್ ಸೇರಿದಂತೆ ಪಂಜ್ ಶೀರ್ ಪ್ರಾಂತದ ಹಲವು ನಾಯಕರು ಸತ್ತಿದ್ದಾಗಿ ಹೇಳಲಾಗಿತ್ತು.
ಆದರೆ ಇದೇ ವೇಳೆ, ತಾಲಿಬಾನ್ ಪಡೆಗಳ ಹೇಳಿಕೆಯನ್ನು ಪಂಜ್ ಶೀರ್ ಪ್ರಾಂತ್ಯದ ಮುಂಚೂಣಿ ನಾಯಕ ಮಹಮ್ಮದ್ ಸಲೇ ನಿರಾಕರಿಸಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ತಾಲಿಬಾನ್ ಪಡೆಗಳು ಮತ್ತು ಪಾಕಿಸ್ಧಾನದ ಕಾಪ್ಟರ್ ಗಳು ಪರ್ವತ ಶ್ರೇಣಿಯ ತುದಿಯಲ್ಲಿ ನಿಂತು ಈ ಹೇಳಿಕೆ ನೀಡಿವೆ. ಆದರೆ ತಾಲಿಬಾನ್ ವಿರುದ್ಧ ನಮ್ಮ ಹೋರಾಟ ಮುಂದುವರಿದಿದೆ ಎಂದು ಸಲೇ ಹೇಳಿಕೆ ನೀಡಿದ್ದಾಗಿ ಇಂಡಿಯಾ ಟುಡೇ ಹೇಳಿದೆ. ಹೀಗಾಗಿ ಅಲ್ಲಿನ ವಾಸ್ತವ ಚಿತ್ರಣ ಮುಚ್ಚಿಡಲು ತಾಲಿಬಾನಿಗಳು ಸುಳ್ಳು ಹೇಳಿಕೆ ನೀಡುತ್ತಿರುವ ಬಗ್ಗೆ ಸಂಶಯ ಉಂಟಾಗಿದೆ.
The Taliban have claimed that Panjshir province was "completely conquered", adding that the country was now finally out of the vortex of war. However, the resistance forces have denied their claim.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm