ಬ್ರೇಕಿಂಗ್ ನ್ಯೂಸ್
31-08-21 04:17 pm Headline Karnataka News Network ದೇಶ - ವಿದೇಶ
ಕಾಬೂಲ್, ಆಗಸ್ಟ್ 31: 20 ವರ್ಷಗಳ ಸುದೀರ್ಘ ಅವಧಿಯ ಬಳಿಕ ಅಫ್ಘಾನಿಸ್ತಾನದ ನಂಟನ್ನು ಅಮೆರಿಕ ತೊರೆದಿದ್ದು, ಸೋಮವಾರ ಕಾಬೂಲ್ ಏರ್ಪೋರ್ಟ್ ನಿಂದ ಕೊನೆಯ ವಿಮಾನದಲ್ಲಿ ಸೇನಾಪಡೆ ಗಂಟು ಮೂಟೆ ಕಟ್ಟಿದೆ. ಆದರೆ, ಅಫ್ಘಾನಿಸ್ತಾನವನ್ನು ಬಿಟ್ಟು ತೆರಳುವ ಮೊದಲು ತನ್ನಲ್ಲಿ ಉಳಿದುಕೊಂಡಿದ್ದ ಅಮೆರಿಕ ನಿರ್ಮಿತ ಅತ್ಯಾಧುನಿಕ ಹೆಲಿಕಾಪ್ಟರ್, ಶಸ್ತ್ರಾಸ್ತ್ರಗಳು, ಇನ್ನಿತರ ಶಸ್ತ್ರ ಒಯ್ಯಬಲ್ಲ ಯುದ್ಧ ಟ್ಯಾಂಕರ್ ಗಳನ್ನು ನಿಷ್ಕ್ರಿಯ ಮಾಡಿದೆ.
ಎಎಫ್ ಪಿ ಸುದ್ದಿಸಂಸ್ಥೆಯ ವರದಿ ಪ್ರಕಾರ, ಅಮೆರಿಕವು 73 ಹೆಲಿಕಾಪ್ಟರ್, ಹೈಟೆಕ್ ರಾಕೆಟ್ ಡಿಫೆನ್ಸ್ ಸಿಸ್ಟಮ್ ಮತ್ತು ಹಲವಾರು ಯುದ್ಧ ಟ್ಯಾಂಕರ್ ಗಳನ್ನು ನಿಷ್ಕ್ರಿಯ ಮಾಡಿದೆ. ಅಮೆರಿಕನ್ನರು ಏರ್ಪೋರ್ಟ್ ಬಿಟ್ಟು ತೆರಳಿದ ಕೂಡಲೇ ತಾಲಿಬಾನಿ ಸೈನಿಕರು ಒಳನುಗ್ಗಿ ಚಿನ್ ಹುಕ್ ಹೆಲಿಕಾಪ್ಟರ್ ಗಳನ್ನು ಪರಿಶೀಲಿಸುತ್ತಿರುವ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ.
ಅಲ್ಲಿರುವ ಯಾವುದೇ ಹೆಲಿಕಾಪ್ಟರ್ ಗಳು ಮತ್ತೆ ಹಾರಲಾರವು. ಯಾರಿಂದಲೂ ಅದನ್ನು ಮತ್ತೆ ಆಪರೇಟ್ ಮಾಡಲು ಸಾಧ್ಯವಿಲ್ಲ. ಹೆಚ್ಚಿನವು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಮಾನವ ರಹಿತ ಹಾರಾಟ ನಡೆಸಬಲ್ಲ ಕಾಪ್ಟರ್ ಗಳು. ಆದರೆ, ಅವು ಇನ್ಯಾವತ್ತೂ ಹಾರಲು ಸಾಧ್ಯವಿಲ್ಲ ಎಂದು ಅಮೆರಿಕದಿಂದ ಅಫ್ಘಾನಿಸ್ತಾನದಲ್ಲಿ ನಿಯೋಜಿತರಾಗಿದ್ದ ಸೆಂಟ್ರಲ್ ಕಮಾಂಡ್ ಹೆಡ್ ಜನರಲ್ ಕೆನ್ನೆತ್ ಮೆಕಂಝಿ ಹೇಳಿದ್ದಾರೆ.
ಅಮೆರಿಕದ ಸೇನಾಪಡೆ ಕೊನೆಯ ಬಾರಿಗೆ ನಿಷ್ಕ್ರಿಯ ಮಾಡಿದ್ದು ಏಂಟಿ ರಾಕೆಟ್ ಸಿಸ್ಟಮ್. ಅಫ್ಘಾನಿಸ್ತಾನ ಬಿಟ್ಟು ತೆರಳುವ ಅಂತಿಮ ಕ್ಷಣದ ವರೆಗೂ ಐಸಿಸ್ ಬಾಂಬರ್ ಗಳ ವಿರುದ್ಧ ಅದೇ ವೆಪನ್ ಸಿಸ್ಟಮ್ ಮೂಲಕ ರಾಕೆಟ್ ದಾಳಿ ನಡೆಸಲಾಗಿತ್ತು. ಅಮೆರಿಕನ್ ಸೇನಾಪಡೆ ಇದನ್ನು ಸಿ-ರಾಮ್ಸ್ ಎಂದು ಹೇಳುತ್ತದೆ. (ಕೌಂಟರ್ ರಾಕೆಟ್, ಆರ್ಟಿಲ್ಲರಿ ಮತ್ತು ಮಾರ್ಟರ್ ಸಿಸ್ಟಮ್). ಅಂತಿಮ ಫ್ಲೈಟ್ ಹತ್ತೋದಕ್ಕೂ ಮುನ್ನ ಇದರ ತಂತ್ರಜ್ಞಾನವನ್ನು ಬುಡಮೇಲು ಮಾಡುವ ಮೂಲಕ ಅಫ್ಘನ್ನರಾಗಲೀ, ತಾಲಿಬಾನ್ ಆಡಳಿತವಾಗಲೀ ಅದನ್ನು ಮುಂದೆಂದೂ ಆಪರೇಟ್ ಮಾಡದಂತೆ ಮಾಡಿದ್ದಾರೆ.
ಅಮೆರಿಕ ಬಿಟ್ಟು ತೆರಳುವಾಗ ಅಫ್ಘನ್ನಲ್ಲಿ 70 ಎಂಆರ್ ಎಪಿ ಶಸ್ತ್ರಸಜ್ಜಿತ ಯುದ್ಧ ಟ್ಯಾಂಕರ್ ಗಳಿದ್ದವು. ಈ ರೀತಿಯ ಒಂದು ಯುದ್ಧ ಟ್ಯಾಂಕರಿನ ಬೆಲೆ ಒಂದು ಮಿಲಿಯನ್ ಅಮೆರಿಕನ್ ಡಾಲರ್. ಅಮೆರಿಕದ ಸೇನಾಪಡೆ ಯೋಧರು ಅಂತಿಮವಾಗಿ ಸಿ-17 ಸಾರಿಗೆ ವಿಮಾನದಲ್ಲಿ ಅಫ್ಘನ್ ಬಿಟ್ಟು ತೆರಳಿದರು. ಇದೇ ವೇಳೆ, ನಾವು ಕೆಳಗಿರುವುದನ್ನೆಲ್ಲ ನಿಷ್ಕ್ರಿಯ ಮಾಡಿದ್ದೇವೆ. ಇನ್ನೇನಿದ್ದರೂ ಇಸ್ಲಾಮಿಕ್ ಸ್ಟೇಟ್ ಬೆದರಿಕೆಗಳನ್ನು ನಮ್ಮ ವಾಯುಪಡೆ ನೋಡಿಕೊಳ್ಳಲಿದೆ ಎಂದು ಸೇನಾಪಡೆ ಕಮಾಂಡರ್ ಕೆನ್ನೆತ್ ಮೆಕೆಂಝಿ ಹೇಳಿದ್ದು, ಐಸಿಸ್ ಉಗ್ರರನ್ನು ಅಮೆರಿಕ ಹಾಗೇ ಬಿಡುವುದಿಲ್ಲ ಎಂದು ಎಚ್ಚರಿಸಿದಂತಿದೆ.
#Taliban fighters enter a hangar in #Kabul Airport and examine #chinook helicopters after #US leaves #Afghanistan. pic.twitter.com/flJx0cLf0p
— Nabih (@nabihbulos) August 30, 2021
Before leaving Afghanistan, the US military disabled 73 military aircraft, weapons systems, choppers and armoured vehicles at the Kabul airport hangar.
22-05-25 12:41 pm
HK News Desk
Ola News, Suicide, Bangalore: ಓಲಾ ಕಂಪನಿಯ ಎಐ ವ...
21-05-25 09:16 pm
CM Siddaramaiah, Rain, Visit: ಮಳೆ ಹಾನಿ ಪ್ರದೇಶ...
21-05-25 05:42 pm
Kumki elephants, Pawan Kalyan, Cm Siddaramaia...
21-05-25 02:35 pm
ED Raids, Parameshwar College, Ranya Rao: ಹೋಂ...
21-05-25 01:50 pm
21-05-25 12:57 pm
HK News Desk
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
21-05-25 11:09 pm
HK News Desk
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
Dr M A Saleem New DG&IGP: ಡಿಜಿಪಿ ಅಲೋಕ್ ಮೋಹನ್...
21-05-25 07:17 pm
Tiranga Yatra, Mangalore: ಮಂಗಳೂರಿನಲ್ಲಿ ತಿರಂಗಾ...
20-05-25 11:12 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm