ಬ್ರೇಕಿಂಗ್ ನ್ಯೂಸ್
24-08-21 05:34 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 24: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಟ್ಟಹಾಸ ಮಾಡುತ್ತಿದ್ದರೆ, ಸಿರಿಯಾ ಮೂಲದ ಐಸಿಸ್ ಉಗ್ರರು, ಪಾಕಿಸ್ತಾನದ ಉಗ್ರರೆಲ್ಲ ಸೇರಿ ಬೆಂಬಲ ಘೋಷಿಸಿದ್ದಾರೆ. ಮಾನವ ಕುಲದ ಅತ್ಯಂತ ಕ್ರೂರ ನಡೆಯನ್ನು ತಾಲಿಬಾನಿ ಉಗ್ರರು ತಮ್ಮದೇ ನೆಲದಲ್ಲಿ ತೋರುತ್ತಿದ್ದಾರೆ. ಆದರೆ, ಯಾವುದಕ್ಕೂ ಒಂದು ಮಿತಿ ಇರುತ್ತದೆ. ಮಿತಿ ಮೀರಿದರೆ, ಪ್ರಕೃತಿಯೇ ಅದಕ್ಕೆ ಉತ್ತರ ಕೊಡುತ್ತದೆ ಎನ್ನುವುದು ವಾಸ್ತವ. ಇದೀಗ ಮಾನವನ ಕ್ರೌರ್ಯದ ಪರಮಾವಧಿಗೆ ಪ್ರಕೃತಿಯೇ ಉತ್ತರ ಕೊಡಲು ಮುಂದಾಗಿದ್ದಾಳೋ ಎನ್ನುವಂತೆ ಸಿರಿಯಾದಲ್ಲಿ ಅತ್ಯಂತ ಬರ ಎದುರಾಗಲಿದೆ ಎನ್ನುವ ಮುನ್ಸೂಚನೆಯನ್ನು ವಿಜ್ಞಾನಿಗಳು ನೀಡಿದ್ದಾರೆ.
ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳ ಎನ್ ಜಿಓ ಸಂಘಟನೆಗಳ ಅಧ್ಯಯನ ಪ್ರಕಾರ, ಹವಾಮಾನ ವೈಪರೀತ್ಯದ ಪರಿಣಾಮ ಇರಾಕ್, ಸಿರಿಯಾ ಮತ್ತು ಅಫ್ಘಾನಿಸ್ತಾನದ ಭಾಗಗಳು ಅತ್ಯಂತ ಕೆಟ್ಟ ರೀತಿಯ ಬರಕ್ಕೆ ತುತ್ತಾಗಲಿದೆ. ಕುಡಿಯುವುದಕ್ಕೆ ನೀರು ಸಿಗದೆ ಜನರು ಸಾಯಲಿದ್ದಾರೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. 13 ವಿವಿಧ ದೇಶಗಳ ಸಂಘಟನೆಗಳು ಹವಾಮಾನ ವೈಪರೀತ್ಯದ ಅಧ್ಯಯನ ಕೈಗೊಂಡು ವರದಿ ನೀಡಿದ್ದು, ಇರಾಕ್ ಮತ್ತು ಸಿರಿಯಾ ಭಾಗದ 12 ಮಿಲಿಯನ್ ಜನರು ನೀರು, ಆಹಾರಕ್ಕಾಗಿ ಪರದಾಟ ಅನುಭವಿಸಲಿದ್ದಾರೆ ಎಂದಿವೆ.
ಸಿರಿಯಾದಲ್ಲಿ ಭಾರೀ ಬರ ಎದುರಾಗುವುದರಿಂದ ನದಿಗಳು ಬತ್ತಿ ಹೋಗಿ, ನದಿ ನೀರನ್ನೇ ಕುಡಿಯಲು ಆಶ್ರಯಿಸಿರುವ 5 ಮಿಲಿಯನ್ ಜನರು ಕಷ್ಟಕ್ಕೆ ಸಿಲುಕಲಿದ್ದಾರೆ. ಇರಾಕ್ ನಲ್ಲಿಯೂ ನದಿಗಳು ಬತ್ತುವುದರಿಂದ ಏಳು ಮಿಲಿಯ ಜನರು ಕಷ್ಟಕ್ಕೀಡಾಗಲಿದ್ದಾರೆ. ಸಿರಿಯಾ ಭಾಗದಲ್ಲಿ 400 ಕಿಮೀ ವಿಸ್ತೀರ್ಣದಲ್ಲಿ ಭಾರೀ ಬರ ತಲೆದೋರಲಿದ್ದು, ಉತ್ತರ ಸಿರಿಯಾದಲ್ಲಿ ಎರಡು ಡ್ಯಾಮ್ ಗಳಲ್ಲಿ ನೀರು ಬತ್ತುವುದರಿಂದ ವಿದ್ಯುತ್ ಸಮಸ್ಯೆ, ಕೃಷಿಗೆ ನೀರಿಲ್ಲದೆ ತೊಂದರೆ ಎದುರಾಗಲಿದೆ. ನೀರು ಮತ್ತು ಆಹಾರೋತ್ಪನ್ನಗಳು ಸಿಗದೆ ಲಕ್ಷಾಂತರ ಜನರು ಸಮಸ್ಯೆಗೆ ಸಿಲುಕಲಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ. ಅಮೆರಿಕದ ವರದಿ ಪ್ರಕಾರ, ಸಿರಿಯಾ ಕಳೆದ 70 ವರ್ಷಗಳಲ್ಲಿ ಅತ್ಯಂತ ಕೆಟ್ಟ ಬರದ ದಿನಗಳನ್ನು ನೋಡುತ್ತಿದೆ. ಭವಿಷ್ಯದಲ್ಲಿ ಇದರ ತೀವ್ರತೆ ಇನ್ನೂ ಹೆಚ್ಚಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಜಾಗತಿಕ ತಾಪಮಾನ ಹೆಚ್ಚಳ, ಹವಾಮಾನ ಮಾಲಿನ್ಯದಿಂದಾಗಿ 2019ರಿಂದ ಜಗತ್ತಿನಲ್ಲಿ ಭಾರೀ ವೈಪರೀತ್ಯಗಳು ಎದುರಾಗಿದ್ದು, ಬರ, ನೆರೆಯಂತಹ ವಿಕೋಪ ಪರಿಸ್ಥಿತಿ ಜಗತ್ತಿನ ಹಲವೆಡೆ ಉದ್ಘವ ಆಗಿದೆ. ಇದರಿಂದಾಗಿ ಹವಾಮಾನ ಮಾಲಿನ್ಯ ತಡೆಗೆ ತೀವ್ರ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾವಿರಾರು ಸಂಶೋಧಕ ವಿಜ್ಞಾನಿಗಳು ಆಗ್ರಹಿಸಿದ್ದಾರೆ. ಸಂಶೋಧನಾ ನಿರತ 14 ಸಾವಿರ ವಿಜ್ಞಾನಿಗಳು ಈ ಕುರಿತು ಜಾಗತಿಕ ಹವಾಮಾನ ತುರ್ತುಸ್ಥಿತಿ ಎಂದು ವಿಶ್ವ ಸಂಸ್ಥೆ ಘೋಷಣೆ ಮಾಡುವಂತೆ ಸಹಿ ಅಭಿಯಾನ ನಡೆಸಿದ್ದಾರೆ.
Iraq and Syria, which have been battered by humanitarian crises, are on the brink of another catastrophe as they face critical water shortage. 13 aid groups working in the region warned that over 12 million people in Syria and Iraq are losing access to water, food and electricity calling for quick action to tackle the imminent water crisis emerging from climate change.
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 05:34 pm
Mangalore Correspondent
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm