ಬ್ರೇಕಿಂಗ್ ನ್ಯೂಸ್
16-08-21 05:45 pm Headline Karnataka News Network ದೇಶ - ವಿದೇಶ
ಇಸ್ತಾಂಬುಲ್, ಆ.16: ಟರ್ಕಿಯ ಕಪ್ಪು ಸಮುದ್ರದ ಪ್ರಾಂತ್ಯಗಳಲ್ಲಿರುವ ಪಟ್ಟಣಗಳಲ್ಲಿ ಉಂಟಾದ ಪ್ರವಾಹದಿಂದಾಗಿ 70 ಮಂದಿ ಸಾವನ್ನಪ್ಪಿದ್ದು ಇನ್ನೂ 47 ಮಂದಿ ನಾಪತ್ತೆಯಾಗಿದ್ದಾರೆ. ತುರ್ತು ಪರಿಹಾರ ಕಾರ್ಯಾಚರಣೆ ತಂಡ ನಾಪತ್ತೆಯಾದವರಿಗಾಗಿ ಶೋಧ ಮುಂದುವರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಸ್ತಮೋನು ಪ್ರಾಂತ್ಯದಲ್ಲಿ ಪ್ರವಾಹದಿಂದಾಗಿ 60 ಜನರು ಸಾವನ್ನಪ್ಪಿದ್ದಾರೆ. ಸಿನೋಪ್ನಲ್ಲಿ ಇನ್ನೂ ಒಂಬತ್ತು ಜನರು ಮತ್ತು ಬಾರ್ಟಿನ್ ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ಮತ್ತು ತುರ್ತು ನಿರ್ವಹಣಾ ನಿರ್ದೇಶನಾಲಯ ಹೇಳಿದೆ. ಕಸ್ತಮೋನು ಮತ್ತು ಸಿನೋಪ್ನಲ್ಲಿ ನಲವತ್ತೇಳು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಕಳೆದ ವಾರ ಸಂಭವಿಸಿದ ಪ್ರವಾಹದ ರಭಸಕ್ಕೆ ಕಟ್ಟಡಗಳು ಮತ್ತು ಸೇತುವೆಗಳು ನೆಲಕಚ್ಚಿದವು. ರಸ್ತೆಯಲ್ಲಿದ್ದ ಕಾರು ಮತ್ತಿತರ ವಾಹನಗಳು ಮಣ್ಣಿನ ಅವಶೇಷಗಳಡಿ ಸಿಲುಕಿದವು. ರಸ್ತೆಗಳು ಬಂದ್ ಆದವು. ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳಿಗೆ ಹಾನಿಯಾಗಿತ್ತು.
ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ದೃಶ್ಯಗಳಲ್ಲಿ ಕಸ್ತಮೋನು ಪ್ರಾಂತ್ಯದ ಬೋಜ್ಕುರ್ಟ್ ಪಟ್ಟಣದಲ್ಲಿ ಭಾರಿ ಹಾನಿ ಉಂಟಾಗಿರುವುದು ಕಾಣುತ್ತಿದೆ. ಪಾಳುಬಿದ್ದ ಕಟ್ಟಡಗಳಲ್ಲಿ ರಕ್ಷಣಾ ತಂಡಗಳು ಶೋಧಕಾರ್ಯ ನಡೆಸುತ್ತಿದ್ದಾರೆ.
ಕಸ್ತಮೋನು, ಸಿನೋಪ್ ಮತ್ತು ಬಾರ್ಟಿನ್ ಪ್ರಾಂತ್ಯಗಳ ಜನರನ್ನು ಹೆಲಿಕಾಪ್ಟರ್, ಹಡಗು, ಬೋಟ್ಗಳು ಹಾಗೂ ಇತರ ವಾಹನಗಳ ಮೂಲಕ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಸಾವಿರಾರು ಮನೆಗಳು, 454 ಬೃಹತ್ ಕಟ್ಟಡಗಳು, ಹಲವಾರು ಸೇತುವೆಗಳು ನೆಲಸಮವಾಗಿದೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ಅನೇಕರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟರ್ಕಿಯ ಆಂತರಿಕ ವ್ಯವಹಾರಗಳ ಸಚಿವ ಸುಲೇಮಾನ್ ಸೊಯ್ಲು ಹೇಳಿದ್ದಾರೆ.
ರಸ್ತೆ, ವಿದ್ಯುತ್ ಸಂಪರ್ಕ ಕಡಿತಗೊಂಡ ಗ್ರಾಮಗಳಿಗೆ ಹೆಲಿಕಾಪ್ಟರ್ ಮೂಲಕ ಆಹಾರ ಪೂರೈಸಲಾಗುತ್ತಿದೆ. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಸಂಸ್ಥೆಯ 8,000ಕ್ಕೂ ಹೆಚ್ಚು ಸಿಬ್ಬಂದಿ ಹಗಲು-ರಾತ್ರಿಯೆನ್ನದೇ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.ಟರ್ಕಿಯಲ್ಲಿ ಸಂಭವಿಸಿರುವ ಜೀವ ಮತ್ತು ಆಸ್ತಿ ಹಾನಿಗೆ ವಿಶ್ವಸಂಸ್ಥೆಯ ಪ್ರಧಾನಿ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಟರ್ಕಿ ಗಣರಾಜ್ಯದ ಸರ್ಕಾರ ಮತ್ತು ಅಲ್ಲಿನ ಜನರ ಬೆಂಬಲಕ್ಕೆ ವಿಶ್ವಸಂಸ್ಥೆ ನಿಲ್ಲುವುದಾಗಿ ಅಭಯ ನೀಡಿದ್ದಾರೆ. ಟರ್ಕಿ ಸಹಾಯಕ್ಕೆ ಬಂದಿರುವ ಇಸ್ರೇಲ್ ತನ್ನ ರಕ್ಷಣಾ ಪಡೆಯನ್ನು ಕಳುಹಿಸಿರುವುದಾಗಿ ತಿಳಿಸಿದೆ.
The floods that hit Turkey last week has brought chaos as torrents of water tossed dozens of cars and heaps of debris along streets. It has destroyed several buildings and bridges, closed roads and has also damaged electricity infrastructure.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm