ಬ್ರೇಕಿಂಗ್ ನ್ಯೂಸ್
11-08-21 04:34 pm Headline Karnataka Political Bureau ದೇಶ - ವಿದೇಶ
Photo credits : Picture Alliance
ಕಾಬೂಲ್, ಆಗಸ್ಟ್ 11: ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿ ತಾಲಿಬಾನಿಗಳು ತಮ್ಮ ಪ್ರಾಬಲ್ಯ ಸ್ಥಾಪಿಸಿದ್ದಾರೆ. ಇದೇ ವೇಳೆ, ಕೆಲವರು ಸರಕಾರದ ಪರ ಇದ್ದಾರೆಂಬ ಗುಮಾನಿಯಲ್ಲಿ ಅಮಾಯಕ ಜನರ ಮೇಲೆ ಹಿಂಸೆ ನಡೆಸುತ್ತಿದ್ದಾರೆ. ಒಂದೆಡೆ ಜನಸಾಮಾನ್ಯರು ಗುಳೇ ಎದ್ದು ಊರಿಂದೂರಿಗೆ ತೆರಳುತ್ತಿದ್ದರೆ, ಆ ಪೈಕಿ ಹೆಣ್ಮಕ್ಕಳಿದ್ದರೆ ಅವರನ್ನು ಬಲವಂತದಿಂದ ಅಪಹರಿಸಿ ತಮ್ಮ ಕಾಮತೃಷೆ ತೀರಿಸಿಕೊಳ್ಳಲು ಬಳಸುತ್ತಿದ್ದಾರೆ. ಆಬಳಿಕ ತಾಲಿಬಾನಿಗಳು ತಮ್ಮ ಜೊತೆಗೇ ಇರುವಂತೆ ಹೆಣ್ಮಕ್ಕಳನ್ನು ಬಲವಂತ ಪಡಿಸುತ್ತಿದ್ದಾರೆ.
ಬೀದಿ ಬೀದಿಯಲ್ಲಿ ಹೆಣಗಳ ರಾಶಿ ಬಿದ್ದಿದೆ. ಹೆಣಗಳು ಕೊಳೆತು ಬಿದ್ದಿದ್ದರೆ, ನಾಯಿಗಳು ಅದನ್ನು ತಿನ್ನಲು ಕಾದು ಕುಳಿತಿರುವ ಸ್ಥಿತಿ ಎದುರಾಗಿದೆ. ಜೈಲಿನ ಹೊರಭಾಗದಲ್ಲಿ ಶವ ಬಿದ್ದುಕೊಂಡಿವೆ ಎಂದು 36 ವರ್ಷದ ವಿಧವೆ ಮಹಿಳೆ ತನ್ನ ಆರು ಮಕ್ಕಳ ಜೊತೆ ರಕ್ಷಣೆಗಾಗಿ ಗುಳೆ ಹೊರಟಿರುವ ಮಧ್ಯೆ ಎಎಫ್ ಪಿ ಸುದ್ದಿಸಂಸ್ಥೆಗೆ ಅಲವತ್ತುಕೊಂಡಿದ್ದಾಳೆ.
ಮೇ ತಿಂಗಳಲ್ಲಿ ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಿಂದ ಜಾಕ ಖಾಲಿ ಮಾಡುತ್ತಿದ್ದಂತೆ, ತಾಲಿಬಾನಿಗಳು ತಮ್ಮ ಕ್ರೌರ್ಯ ಆರಂಭಿಸಿದ್ದಾರೆ. ಒಂದೊಂದೇ ನಗರಗಳನ್ನು ತಮ್ಮ ಅಧಿಪತ್ಯಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಯಾರು ಸರಕಾರಿ ಕರ್ತವ್ಯದಲ್ಲಿದ್ದಾರೆ, ಅವರನ್ನು ಕೊಲ್ಲುತ್ತಿದ್ದಾರೆ. ಅವರ ಕುಟುಂಬದಲ್ಲಿರುವ ಹೆಣ್ಮಕ್ಕಳನ್ನು ಅಪಹರಿಸುತ್ತಿದ್ದಾರೆ.
ಕ್ಷೌರ ವೃತ್ತಿ ಮಾಡುವವರನ್ನು ಗುಂಡಿಟ್ಟು ಕೊಲ್ಲುತ್ತಿದ್ದಾರೆ. ಕ್ಷೌರ ಮಾಡುವ ಮಂದಿ ಸರಕಾರದ ಪರ ಇದ್ದಾರೆಂಬ ಭಾವನೆ ತಾಲಿಬಾನಿಗಳಲ್ಲಿದೆ. ಯಾಕಂದ್ರೆ, ಷರೀಯಾ ಕಾನೂನು ಜಾರಿಗೆ ತರುತ್ತಿರುವ ತಾಲಿಬಾನಿಗಳ ಪ್ರಕಾರ ಗಡ್ಡ ಬೋಳಿಸುವಂತಿಲ್ಲ. ನಾಲ್ಕೈದು ವರ್ಷಗಳ ಹಿಂದೆಯೇ ಸರಕಾರಿ ಕೆಲಸವನ್ನು ತ್ಯಜಿಸಿದ್ದರೂ, ತಾಲಿಬಾನಿಗಳು ಅಂಥವರನ್ನು ಕೂಡ ಕೊಲ್ಲುತ್ತಿದ್ದಾರೆ ಎಂದು ಕುಂದುಸ್ ಪ್ರಾಂತ್ಯದಿಂದ ಗುಳೇ ಹೊರಟಿರುವ ಅಬ್ದುಲ್ ಮನಾನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಂದಾಜು 3.50 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಮನೆ, ಗುಡಿಸಲು ಎಲ್ಲವನ್ನೂ ಬಿಟ್ಟು ಗುಳೇ ಹೊರಟಿದ್ದಾರೆ. ಅಫ್ಘಾನ್ ರಾಜಧಾನಿ ಕಾಬೂಲ್ ಭಾಗದಲ್ಲಿ ಪಾರ್ಕ್, ಮೈದಾನ, ಮರದಡಿಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಪೈಕಿ 25 ವರ್ಷದ ವಿಧವೆ ಮಹಿಳೆ ಒಬ್ಬಳು ಹೀಗೆ ಹೇಳುತ್ತಾಳೆ, ತನ್ನ 16 ವರ್ಷದ ತಂಗಿ ಜೊತೆಗಿದ್ದಳು. ತಾಲಿಬಾನಿ ಹೋರಾಟಗಾರರು ಬಲವಂತವಾಗಿ ತಂಗಿಯನ್ನು ಅಪಹರಿಸಿದ್ದು, ಹೋರಾಟಗಾರರಲ್ಲಿ ಒಬ್ಬನನ್ನು ಮದುವೆ ಮಾಡುವುದಾಗಿ ತಿಳಿಸಿದ್ದಾರೆ. ಅವಳಿಗೆ ಈ ಮೊದಲೇ ಎಂಗೇಜ್ ಆಗಿತ್ತು. ಫ್ರಾನ್ಸ್ ನಲ್ಲಿ ಉದ್ಯೋಗದಲ್ಲಿರುವ ಹುಡುಗನ ಜೊತೆ ಮದುವೆಯಾಗಲು ರೆಡಿ ಆಗಿತ್ತು. ನಮ್ಮ ಕುಟುಂಬದಲ್ಲಿ ನಾವು ಇಬ್ಬರು ಹೆಣ್ಣು ಮಕ್ಕಳು. ಇಬ್ಬರು ಹುಡುಗರು. ಒಬ್ಬ ಹುಡುಗನನ್ನೂ ಅಪಹರಿಸಿಕೊಂಡು ಒಯ್ದಿದ್ದು, ಹೋರಾಟಕ್ಕೆ ಬಳಸುತ್ತಾರಂತೆ. ನಾವು ಇನ್ನು ಎಲ್ಲಿ ಬದುಕಬೇಕು ಎಂದು ಕಣ್ಣೀರು ಹಾಕಿದಳು.
ಭಾರತೀಯರು ತಾಯ್ನಾಡಿಗೆ ಮರಳಲು ಸೂಚನೆ
ಇದೇ ವೇಳೆ, ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಮರಳುವಂತೆ ಸೂಚನೆ ನೀಡಲಾಗಿದೆ. ಅಧಿಕೃತವಾಗಿ ನೋಂದಣಿ ಮಾಡಿಕೊಂಡರೆ, ವಿಶೇಷ ವಿಮಾನದಲ್ಲಿ ಕಳಿಸಿ ಕೊಡಲಾಗುವುದು ಎಂದು ರಾಯಭಾರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಮಜರ್ ಇ- ಶರೀಫ್ ನಗರದ ದೂತಾವಾಸದ ಕಚೇರಿಯಲ್ಲಿ ನೋಂದಣಿ ಮಾಡಲಾಗುತ್ತಿದ್ದು, ಅಧಿಕಾರಿಗಳು, ಪತ್ರಕರ್ತರು, ಬೇರೆ ಬೇರೆ ಉದ್ಯೋಗದಲ್ಲಿರುವ ಭಾರತೀಯರನ್ನು ಏರ್ ಲಿಫ್ಟ್ ಮಾಡಲು ಭಾರತ ಸರಕಾರ ಸೂಚನೆ ನೀಡಿದೆ.
Afghan Kannada News. The Taliban has captured nine provincial capitals in Afghanistan in several days, including the cities of Sar-e-Pol, Sheberghan, Aybak, Kunduz, Taluqan, Pul-e-Khumri, Farah, Zaranj and most recently Faizabad. The Taliban had already gained vast parts of rural Afghanistan since launching a series of offensives in May to coincide with the start of the final withdrawal of foreign forces.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm