ಬ್ರೇಕಿಂಗ್ ನ್ಯೂಸ್
10-08-21 08:44 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 10: ಜಗತ್ತು ಕೊರೊನಾ ವೈರಸ್ ಮಾರಿಯಿಂದ ನಲುಗಿ ಹೋಗಿದ್ದರೆ, ಪಶ್ಚಿಮ ಆಫ್ರಿಕಾದಲ್ಲಿ ಹೊಸ ಮಾದರಿಯ ವೈರಸ್ ಸೋಂಕು ಕಾಣಿಸಿಕೊಂಡಿದೆ. ಮಾರ್ ಬರ್ಗ್ ಎನ್ನುವ ಹೆಸರಿನ ಈ ವೈರಸ್ ಸೋಂಕು ಮೊದಲ ಬಾರಿಗೆ ಮಾನವನಲ್ಲಿ ಕಾಣಿಸಿಕೊಂಡಿದ್ದು, ಸ್ಯಾಂಪಲ್ ಪರೀಕ್ಷೆಯಲ್ಲಿ ಸೋಂಕು ದೃಢಪಡುವ ಮೊದಲೇ ಆತ ಆಗಸ್ಟ್ 2ರಂದು ಸಾವು ಕಂಡಿದ್ದಾನೆ.
ಪಶ್ಚಿಮ ಆಫ್ರಿಕಾದ ಗುಯೆಕ್ಕೋಡು ಎನ್ನುವ ಪ್ರದೇಶದಲ್ಲಿ ಮಾರ್ ಬರ್ಗ್ ವೈರಸ್ ಸೋಂಕು ಮನುಷ್ಯನಿಗೆ ಹರಡಿದ್ದನ್ನು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ. ಬಾವಲಿಯಿಂದ ಹರಡುವ ವೈರಸ್ ಇದಾಗಿದ್ದು, ಎಬೋಲಾ ಮಾದರಿಯಲ್ಲೇ ಮತ್ತೊಂದು ರೀತಿಯ ವೈರಸ್ ಎನ್ನುವ ಮಾಹಿತಿಯನ್ನು ಡಬ್ಲ್ಯುಎಚ್ಓ ನೀಡಿದೆ. ಬಾವಲಿ ವಾಸ ಇರುವ ಗುಹೆಗಳು ಮತ್ತು ಮೈನಿಂಗ್ ಇರುವ ಪ್ರದೇಶಗಳಲ್ಲಿ ಮಾರ್ ಬರ್ಗ್ ವೈರಸ್ ಸಾಧ್ಯತೆ ಹೆಚ್ಚಿರುತ್ತದೆ ಎಂದಿದೆ.
ಮಾರ್ ಬರ್ಗ್ ವೈರಸ್ ಲಕ್ಷಣವೇನು ?
ಮಾರ್ ಬರ್ಗ್ ವೈರಸ್ ಒಂದು ಬಾರಿ ಮನುಷ್ಯನಲ್ಲಿ ಕಂಡುಬಂದ ಬಳಿಕ ಅದು ಮನುಷ್ಯನಿಂದ ಮನುಷ್ಯನಿಗೆ ನೇರ ಸಂಪರ್ಕದಿಂದ ಹರಡುತ್ತದೆ. ಸೋಂಕಿತನ ರಕ್ತ, ಬಾಯಿ, ಶರೀರದ ದ್ರವಗಳು ಇನ್ನೊಬ್ಬರಿಗೆ ತಾಗುವ ಮೂಲಕ ಈ ವೈರಸ್ ಮತ್ತೊಬ್ಬರಿಗೆ ಹರಡುತ್ತದೆ. ಮಾರ್ ಬರ್ಗ್ ಸೋಂಕು ಹರಡಿದ ವ್ಯಕ್ತಿಗೆ ತೀವ್ರ ಜ್ವರ, ತಲೆನೋವು, ಮೈಕೈ ನೋವು ಇರುತ್ತದೆ. ಮೂರು ದಿನ ಕಳೆದ ಬಳಿಕ ಹೊಟ್ಟೆನೋವು, ವಾಕರಿಕೆ ಬರುವುದು, ವಾಂತಿಯಾಗುವುದು ಕಂಡುಬರುತ್ತದೆ. ಇದೇ ರೀತಿಯ ಲಕ್ಷಣ ಒಂದು ವಾರದ ತನಕವೂ ಇರುತ್ತದೆ. ಈ ಸಂದರ್ಭದಲ್ಲಿ ಕಣ್ಣು ಒಳಗೆ ಹೋದಂತಾಗಿ ಸೋಂಕಿತನಲ್ಲಿ ಭಯದ ಛಾಯೆ ಆವರಿಸಿಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ವಾಂತಿಯ ಜೊತೆಗೆ ರಕ್ತ ಬರುತ್ತದೆ. ಮೂಗಿನಲ್ಲಿ ರಕ್ತ ಬರುವ ಸಾಧ್ಯತೆ ಇರುತ್ತದೆ. ರಕ್ತ ಚೆಲ್ಲುವ ಕಾರಣ ಮತ್ತು ಇದರಿಂದ ಮನುಷ್ಯ ಭಯಗೊಳ್ಳುವುದರಿಂದ ಸೂಕ್ತ ಚಿಕಿತ್ಸೆ ಸಿಗದೇ ಇದ್ದಲ್ಲಿ ಸಾಧಾರಣವಾಗಿ ಹತ್ತು ದಿನಗಳ ನಂತರ ಸಾವು ಸಂಭವಿಸುತ್ತದೆ.
ವೈರಸ್ ಪತ್ತೆ ಕಷ್ಟಸಾಧ್ಯ
ಮಲೇರಿಯಾ, ಟೈಫಾಯ್ಡ್ ಇನ್ನಿತರ ಜ್ವರಗಳ ನಡುವೆ ಮನುಷ್ಯನಲ್ಲಿ ಮಾರ್ ಬರ್ಗ್ ವೈರಸ್ ಸೋಂಕು ಆಗಿದ್ದನ್ನು ಪತ್ತೆ ಮಾಡುವುದು ಕಷ್ಟ ಎನ್ನುವುದನ್ನು ಡಬ್ಲ್ಯುಎಚ್ಓ ಅಧಿಕಾರಿಗಳು ಹೇಳುತ್ತಾರೆ. ಏಂಟಿಜೆನ್ ಟೆಸ್ಟ್, ವೈರಸ್ ಐಸೋಲೇಶನ್ ಅಥವಾ ಕೊರೊನಾ ರೀತಿಯಲ್ಲೇ ಆರ್ ಟಿಪಿಸಿಆರ್ ಟೆಸ್ಟ್ ಮೂಲಕ ಇದನ್ನು ಪತ್ತೆ ಮಾಡಬೇಕಾಗುತ್ತದೆ. ಸದ್ಯಕ್ಕೆ ಇಂಥದ್ದೇ ಚಿಕಿತ್ಸೆ ಅಥವಾ ವ್ಯಾಕ್ಸಿನ್ ಎಂದು ಯಾವುದು ಇರುವುದಿಲ್ಲ ಎಂದು ಡಬ್ಲ್ಯುಎಚ್ಓ ಹೇಳಿದೆ.
Guinea has ordered 155 people into quarantine after confirming West Africa’s first known case of the Marburg virus, a hemorrhagic fever known as Ebola’s cousin that has killed one person in the nation’s forested south. Health officials scrambled Tuesday to trace everyone who may have interacted with the patient, who had sought medical help in the town of Gueckedou near the high-traffic border with Liberia and Sierra Leone.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm