ಬ್ರೇಕಿಂಗ್ ನ್ಯೂಸ್
26-07-21 02:58 pm Headline Karnataka News Network ದೇಶ - ವಿದೇಶ
ಪುಣೆ, ಜುಲೈ 26: ಎಟಿಎಂ ಮೆಷಿನನ್ನು ಐಇಡಿ ಮಾದರಿಯ ಸುಧಾರಿತ ಸ್ಫೋಟಕ ಬಳಸಿ ಬ್ಲಾಸ್ಟ್ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದ್ದು, ಅದರಲ್ಲಿದ್ದ 29 ಲಕ್ಷ ರೂಪಾಯಿ ನಗದನ್ನು ದರೋಡೆ ಮಾಡಿದ್ದಾರೆ. ನಗರದಿಂದ 40 ಕಿಮೀ ದೂರದ ಚಾಕನ್ – ಶಿವೆ ರಸ್ತೆಯ ಬಾಂಬೋಲಿ ಎಂಬಲ್ಲಿ ಘಟನೆ ನಡೆದಿದೆ.
ಎಟಿಎಂ ಮೆಷಿನಲ್ಲಿ 40 ಲಕ್ಷ ಇತ್ತೆಂದು ಮಾಹಿತಿಗಳಿವೆ. ಇನ್ನೊಂದು ಟ್ರೇಯಲ್ಲಿ 10.93 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಅದನ್ನು ಕಳ್ಳರು ಬಿಟ್ಟು ಹೋಗಿದ್ದಾರೆ ಎಂದು ಪಿಂಪ್ರಿ ಇಚ್ವಾಡ್ ಭಾಗದ ಡೆಪ್ಯುಟಿ ಕಮಿಷನರ್ ಮಂಚಕ್ ಇಪ್ಪರ್ ಮಾಹಿತಿ ನೀಡಿದ್ದಾರೆ. ಎಟಿಎಂ ನೋಡಿಕೊಳ್ಳುತ್ತಿದ್ದ ಕಂಪನಿಯ ವಿರುದ್ಧ ನಾವು ಏಕ್ಷನ್ ತಗೊಳ್ತೀವಿ. ಆರ್ ಬಿಐ ಗೈಡ್ ಲೈನ್ಸ್ ಪ್ರಕಾರ, ಎಟಿಎಂ ಮೆಷಿನ್ ಆವರಣದಲ್ಲಿ ಸೂಕ್ತ ಭದ್ರತೆ, ಇನ್ನಿತರ ಮಾರ್ಗಸೂಚಿಗಳಿದ್ದು ಅದನ್ನು ಪಾಲನೆ ಮಾಡದ ಬಗ್ಗೆ ಕ್ರಮ ತೆಗೆದುಕೊಳ್ತೀವಿ ಎಂದಿದ್ದಾರೆ.
ಸಿಸಿಟಿವಿ ಫೂಟೇಜ್ ಸಿಕ್ಕಿದ್ದು, ಅದರಲ್ಲಿ ಆಗಂತುಕನ ಚಹರೆ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯಲ್ಲಿ ಎಟಿಎಂ ಸ್ಟೀಲ್ ಬಾಕ್ಸ್ ಒಡೆಯಲು ಟ್ರಿನಿಟ್ರೋ ಗ್ಲಿಸರಿನ್ ಬಳಸಿದ್ದಾರೆ. ಮೇಲ್ನೋಟಕ್ಕೆ ಕೃತ್ಯದ ಹಿಂದೆ ಯಾವುದೇ ಉಗ್ರರ ಅಥವಾ ಮಾವೋಯಿಸ್ಟ್ ಕೈವಾಡ ಇರುವುದು ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ಸಿಸಿಟಿವಿಯಲ್ಲಿ ಇಬ್ಬರು ಮೋಟರ್ ಸೈಕಲ್ ನಲ್ಲಿ ಬಂದು ಕಳವು ನಡೆಸಿರುವುದು ಕಂಡುಬಂದಿದೆ. ಕಳ್ಳರ ಪತ್ತೆಗೆ ಚಿಂಚ್ವಾಡ್ ಪೊಲೀಸರ ಜೊತೆಗೆ ಎಟಿಎಸ್, ಬಾಂಬ್ ಪತ್ತೆ ದಳ, ಐಇಡಿ ಬಗ್ಗೆ ಮಾಹಿತಿ ಇರುವ ಸಿಆರ್ ಪಿಎಫ್ ಪಡೆಯ ನೆರವು ಪಡೆಯಲಾಗಿದೆ. ಕೆಲವು ಕೈಗಾರಿಕೆಗಳಲ್ಲಿ ಜಿಲೆಟಿನ್, ಐಇಡಿ ಸ್ಫೋಟಕಗಳನ್ನು ಬಳಕೆ ಮಾಡುತ್ತಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಎಟಿಎಂ ಮೆಷಿನನ್ನು ಸ್ಫೋಟಕ ಬಳಸಿ ಬ್ಲಾಸ್ಟ್ ಮಾಡಿ, ನಗದು ದರೋಡೆ ಮಾಡುವುದು ಕಳ್ಳರ ಹೊಸ ಟ್ರೆಂಡ್. ಎರಡು ದಿನಗಳ ಹಿಂದೆ ಪುಣೆ ಗ್ರಾಮಾಂತರ ಭಾಗದ ರಾಜ್ ಗಾಂವ್ ಎಂಬಲ್ಲಿ ಇದೇ ರೀತಿ ಎಟಿಎಂ ಕಳವು ಯತ್ನ ನಡೆದಿತ್ತು. ಆದರೆ, ಅಲ್ಲಿ ನಗದು ಕಳವು ಮಾಡಲು ಆಗಿರಲಿಲ್ಲ ಎಂದು ಪಿಂಪ್ರಿ ಚಿಂಚ್ವಾಡ್ ಕಮಿಷನರ್ ಕೃಷ್ಣ ಪ್ರಕಾಶ್ ಹೇಳಿದ್ದಾರೆ.
ಬ್ಲಾಸ್ಟ್ ಆದ ಸದ್ದು ಕೇಳಿ ಎಟಿಎಂ ಇರುವ ಕಟ್ಟಡದ ಮಾಲಕ ಸೋಮನಾಥ್ ಪಿಂಜನ್ ಸ್ಥಳಕ್ಕೆ ಓಡಿ ಬಂದಿದ್ದರು. ಆದರೆ, ಲ್ಲಿದ್ದ ಒಬ್ಬಾತ ಗನ್ ತೋರಿಸಿ ಬೆದರಿಸಿದ್ದಾನೆ. ಬಳಿಕ ಇಬ್ಬರೂ ಪರಾರಿಯಾಗಿದ್ದಾರೆ ಎಂದು ಸೋಮನಾಥ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಬಹುತೇಕ ಎಟಿಎಂಗಳನ್ನು ರಾತ್ರಿ ವೇಳೆ ಬಂದ್ ಮಾಡಲಾಗುತ್ತದೆ. ಈ ಎಟಿಎಂ ಕೇಂದ್ರವನ್ನೂ ರಾತ್ರಿ ಎಂಟರ ನಂತರ ಬಂದ್ ಮಾಡಿ ಶಟರ್ ಎಳೆಯಲಾಗಿತ್ತು ಎಂದಿದ್ದಾರೆ. ನಸುಕಿನಲ್ಲಿ ಬ್ಲಾಸ್ಟ್ ಆದ ಬಗ್ಗೆ ಏನೋ ಸದ್ದು ಕೇಳಿತ್ತು. ಭಾರೀ ಮಳೆ, ಗಾಳಿ ಇದ್ದುದರಿಂದ ಸದ್ದು ಏನೋ ಅಸ್ಪಷ್ಟ ಇತ್ತು. ಹೆದ್ದಾರಿಯಲ್ಲಿ ಏನೋ ಅಪಘಾತ ಆಗಿರಬೇಕು ಎಂದುಕೊಂಡಿದ್ದೆ. ಬಳಿಕ 4.30ರ ವೇಳೆಗೆ ಸೋಮನಾಥ್ ಫೋನ್ ಮಾಡಿ, ಘಟನೆ ಬಗ್ಗೆ ಮಾಹಿತಿ ನೀಡಿದರು ಎಂದು ಸ್ಥಳೀಯ ಇನ್ನೊಬ್ಬ ಮಚ್ಚಿಂದ್ರ ಎಂಬವರು ಮಾಹಿತಿ ನೀಡಿದ್ರು.
Two persons triggered a blast using an improvised explosive device at a cash dispensing machine of a non-banking entity and fled with Rs 29 lakh in the early hours of Wednesday at Bhamboli Phata on Chakan-Shive Road, about 40km from the city.
15-04-25 08:44 pm
Bangalore Correspondent
Kannada Journalist S K Shyamsundar Death: ಹಿರ...
15-04-25 12:51 pm
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
15-04-25 04:40 pm
HK News Desk
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
16-04-25 02:02 pm
Mangalore Correspondent
Panambur Bike Accident, Mangalore: ಪಣಂಬೂರಿನಲ್...
16-04-25 01:29 pm
NIA, Praveen Nettaru: ಪ್ರವೀಣ್ ನೆಟ್ಟಾರು ಕೊಲೆ ಪ...
15-04-25 09:57 pm
Drowning, Surathkal Beach, Mangalore, News: ಮ...
15-04-25 09:21 pm
ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ...
14-04-25 09:20 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm