ಬ್ರೇಕಿಂಗ್ ನ್ಯೂಸ್
23-07-21 04:13 pm Headline Karnataka News Network ದೇಶ - ವಿದೇಶ
ಬೀಜಿಂಗ್, ಜುಲೈ 23: ಮಾನವನ ಅತಿರೇಕಕ್ಕೆ ಪ್ರಕೃತಿ ಆಗಿಂದಾಗ್ಗೆ ಪ್ರತ್ಯುತ್ತರವನ್ನೂ ನೀಡುತ್ತಾ ಇರುತ್ತದೆ ಎನ್ನುವುದಕ್ಕೆ ಚೀನಾದಲ್ಲಿ ಆಗಿರುವ ವೈಪರೀತ್ಯ ಸಾಕ್ಷಿ. ಆನೆ ನಡೆದದ್ದೇ ದಾರಿ ಎನ್ನುವಂತೆ ಚೀನಾ ಏನೆಲ್ಲಾ ಅನಾಹುತಗಳನ್ನು ಮಾಡಿತ್ತು. ಸುತ್ತಮುತ್ತಲಿನ ದೇಶಗಳಿಗೆ ನೀರು ಕೊಡದೆ, ನದಿಯನ್ನೇ ತಡೆದು ಹಿಡಿದಿಡುತ್ತೇನೆಂದು ಕಳೆದ ಐದಾರು ವರ್ಷಗಳಲ್ಲಿ ಸಾವಿರಾರು ಡ್ಯಾಮ್ ಗಳನ್ನು ಕಟ್ಟಿ ನದಿಗಳ ಹರಿವನ್ನೇ ಸ್ಥಗಿತಗೊಳಿಸಿತ್ತು. ಆದರೆ, ಪ್ರಕೃತಿ ಮುನಿದರೆ ಹುಲು ಮಾನವ ತೃಣ ಸಮಾನ ಎನ್ನುವುದು ವೇದ್ಯವಾಗುತ್ತಿದೆ.
ರಣಭೀಕರ ಎನ್ನುವಂತೆ ಚೀನಾದಲ್ಲಿ ಮಳೆಯಾಗುತ್ತಿದ್ದು, ಜಲಾಶಯಗಳೆಲ್ಲ ನೀರು ತುಂಬಿಕೊಂಡು ಚೀನಾದ ಜನರು ಕಂಡು ಕೇಳರಿಯದ ರೀತಿ ವೈಪರೀತ್ಯಗಳನ್ನು ತಂದಪ್ಪಳಿಸಿದೆ. ರಾಜಧಾನಿ ಬೀಜಿಂಗ್ ನಿಂದ 650 ಕಿಮೀ ದೂರದಲ್ಲಿರುವ ನಮ್ಮ ಬೆಂಗಳೂರಿನಷ್ಟು ದೊಡ್ಡದು ಮತ್ತು ಅದಕ್ಕಿಂತಲೂ ಹೆಚ್ಚು ಆಧುನಿಕತೆಗೆ ತೆರೆದುಕೊಂಡಿದ್ದ ನಗರ ಝೆಂಗ್ ಝು (ಜನಸಂಖ್ಯೆ ಸುಮಾರು 1.2 ಕೋಟಿ) ರಣಭೀಕರ ಮಳೆರಾಯನ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ. ರಸ್ತೆಯಲ್ಲಿದ್ದ ಕಾರು, ಬಸ್, ಇನ್ನಿತರ ವಾಹನಗಳೆಲ್ಲ ನೀರಿನ ಪ್ರವಾಹಕ್ಕೆ ತೇಲುತ್ತಿದ್ದರೆ, ನಗರ ಮಧ್ಯದ ಹೊಟೇಲು, ರೆಸ್ಟೋರೆಂಟುಗಳು ನೀರಿನಲ್ಲಿ ಮುಳುಗಿ ಹೋಗಿವೆ. ವಿಚಿತ್ರ ಅಂದ್ರೆ, ಅದರ ನಡುವೆ ಮೆಟ್ರೋ ರೈಲೊಂದು ನೀರಿನಲ್ಲಿ ಸಿಕ್ಕಿಹಾಕ್ಕೊಂಡಿದ್ದು, ಅದರೊಳಗಿದ್ದವರು ಎದೆಮಟ್ಟದ ನೀರಿನಲ್ಲಿ ತೇಲುತ್ತಾ ಪ್ರಾಣ ಉಳಿಸಿಕೊಳ್ಳಲು ಎದೆ ಬಡಿದುಕೊಳ್ಳುತ್ತಿದ್ದಾರೆ.
ಟ್ವಿಟರ್ ಇನ್ನಿತರ ಜಾಲತಾಣಗಳಲ್ಲಿ ಬರುತ್ತಿರುವ ಅಲ್ಲಿನ ವಿಡಿಯೋಗಳನ್ನು ನೋಡಿದರೆ ಎದೆ ಝಲ್ಲೆನ್ನುತ್ತದೆ. ಮಳೆಯ ಮಾತ್ರಕ್ಕೆ ಈ ರೀತಿಯ ವೈಪರೀತ್ಯಗಳು ಆಗುತ್ತಾ ಅನ್ನುವ ಪ್ರಶ್ನೆಗಳು ಏಳುತ್ತವೆ. ಅಲ್ಲಿನ ಮಾಧ್ಯಮಗಳ ವರದಿ ಪ್ರಕಾರ, ಕಳೆದ ಶನಿವಾರದಿಂದ ಮಂಗಳವಾರದ ವರೆಗೆ ಇತಿಹಾಸದಲ್ಲೇ ಕಂಡುಕೇಳರಿಯದಷ್ಟು ಮಳೆಯಾಗಿದ್ಯಂತೆ. ಮೂರು ದಿನಗಳಲ್ಲಿ ಝೆಂಗ್ ಝು ನಗರದ ವ್ಯಾಪ್ತಿಯಲ್ಲಿ 617 ಮಿಮೀ ಮಳೆಯಾಗಿತ್ತು. ವಾರ್ಷಿಕವಾಗಿ ಕೇವಲ 640 ಮಿಮೀ ಮಳೆಯಾಗುವ ಪ್ರದೇಶದಲ್ಲಿ ಮೂರೇ ದಿನಗಳಲ್ಲಿ ಈ ಪರಿ ಮಳೆ ಬಿದ್ದರೆ ತಡೆದುಕೊಳ್ಳಲು ಸಾಧ್ಯವೇ ? ಸದ್ಯಕ್ಕೆ ಎಷ್ಟು ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಝೆಂಗ್ ಝು ಪ್ರವಾಹದ ನಡುವೆ ಸಿಕ್ಕಿಬಿದ್ದಿದ್ದ 1.60 ಲಕ್ಷ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಲಾಗಿದೆ. ಮೂರು ಮಿಲಿಯನ್ ಜನರು ಪ್ರವಾಹದಲ್ಲಿ ಮನೆ ಕಳಕೊಂಡು ಸಮಸ್ಯೆಗೀಡಾಗಿದ್ದಾರೆ.
ಉಕ್ಕೇರಿತ್ತು ಯೆಲ್ಲೋ ರಿವರ್, ಝೆಂಗ್ ಝು ಸರ್ವನಾಶ
ಝೆಂಗ್ ಝು ನಗರ ಇರುವುದೇ ಚೀನಾದ ಎರಡೇ ಅತಿದೊಡ್ಡ ನದಿ ಎನಿಸಿಕೊಂಡಿರುವ ಯೆಲ್ಲೋ ರಿವರ್ ಬದಿಯಲ್ಲಿ. ಕಳೆದ ಒಂದೆರಡು ದಶಕದಲ್ಲಿ ಈ ನಗರ ಯಾವ ರೀತಿ ಬೆಳೆದು ನಿಂತಿತ್ತು ಎಂದರೆ, ಸಿಂಗಾಪುರದ ರೀತಿ ಝಗಮಗಿಸಿತ್ತು. ಕಾಂಕ್ರೀಟ್ ರೋಡುಗಳು ತುಂಬಿಕೊಂಡು ನೀರಿನ ಸಹಜ ಹರಿಯುವಿಕೆ, ಇಂಗುವಿಕೆಯನ್ನು ನುಂಗಿ ಹಾಕಿತ್ತು. ಅಷ್ಟೇ ಅಲ್ಲ, ಈ ನಗರದ ಬಳಿಯಲ್ಲೇ ಜಗತ್ತಿನಲ್ಲೇ ಅತಿದೊಡ್ಡ ಎನಿಸಿರುವ (ತ್ರೀ ಜೋರ್ಜಸ್ ಡ್ಯಾಮ್) ಜಲವಿದ್ಯುತ್ ಘಟಕವನ್ನೂ ಸ್ಥಾಪನೆ ಮಾಡಲಾಗಿತ್ತು. ಅದಕ್ಕಾಗಿ ಯಾಂಗ್ ಝೇ ನದಿಗೆ ಬೃಹತ್ ಅಣೆಕಟ್ಟಗಳನ್ನು ಕಟ್ಟಿ ಜಲಾಶಯ ನಿರ್ಮಿಸಲಾಗಿತ್ತು. ಈಗ ಒಂದೇ ಸಮನೆ ಸುರಿದ ಮಳೆಗೆ ಜಲಾಶಯಗಳು ತುಂಬಿಕೊಂಡು ನೀರು ಎಲ್ಲೆಂದರತ್ತ ಹರಿದು ಇಡೀ ನಗರವನ್ನು ಮುಳುಗಿಸಿ ಹಾಕಿದೆ.
ಮಂಗಳವಾರ ರಾತ್ರಿ ಮಿಲಿಟರಿ ಅಧಿಕಾರಿಗಳು ಒಂದು ಜಲಾಶಯವನ್ನು ಒಡೆದು ಹಾಕಿದ್ದಾರೆ ಎನ್ನಲಾಗುತ್ತಿದೆ. ಇಡೀ ನಗರವನ್ನು ಸುತ್ತುವರಿದಿರುವ ಪ್ರವಾಹದ ಬಗ್ಗೆ ಆತಂಕಗೊಂಡು ಅಧಿಕಾರಿಗಳು ಈ ಕೆಲಸ ಮಾಡಿದ್ದಾರೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಎನ್ನುವ ಪತ್ರಿಕೆ, ಈ ಪರಿಯ ಮಳೆಗೆ ಇನ್ ಫಾ ಎನ್ನುವ ಚಂಡಮಾರುತ ಕಾರಣ ಎಂದು ವರದಿ ಮಾಡಿದೆ. ಆದರೆ, ಚೀನಾದಲ್ಲಿ ಅತಿ ಭೀಕರ ಮಳೆಯಾಗುತ್ತಿರುವುದು ಇದು ಮೊದಲೇನಲ್ಲ. ಕಳೆದ ವರ್ಷವೂ ಮಳೆಯಿಂದ ಪ್ರವಾಹ ಉಂಟಾಗಿ ಅಪಾರ ನಷ್ಟ ಆಗಿತ್ತು. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದರು. 25 ಮಿಲಿಯನ್ ಡಾಲರ್ ನಷ್ಟ ಆಗಿತ್ತು ಎಂದು ಹೇಳಲಾಗಿತ್ತು.
ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಭಾರೀ ಮಳೆಯಾಗಿದ್ದು, ಹಲವಾರು ನಗರ ಪ್ರದೇಶಗಳು ವೈಪರೀತ್ಯಕ್ಕೆ ತುತ್ತಾಗಿವೆ. ಲೋಯಾಂಗ್ ಸಿಟಿ ಬಳಿಯ ಯಿಹತಾನ್ ಡ್ಯಾಮ್ ನಲ್ಲಿ 20 ಮೀಟರ್ ಎತ್ತರಕ್ಕೆ ನೀರು ಹರಿಯುತ್ತಿದ್ದು ಯಾವುದೇ ಕ್ಷಣದಲ್ಲಿ ಡ್ಯಾಮ್ ಒಡೆದು ಹೋಗಬಹುದು ಎನ್ನುವ ಆತಂಕವನ್ನು ಅಲ್ಲಿನ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆ ಭಾಗದಲ್ಲಿಯೂ ಜನರನ್ನು ಸ್ಥಳಾಂತರ ಮಾಡಲು ಮಿಲಿಟರಿ ಪಡೆ ಹರಸಾಹಸದಲ್ಲಿ ತೊಡಗಿವೆ.
ಗ್ಲೋಬಲ್ ವಾರ್ಮಿಂಗ್, ಎಚ್ಚರಿಕೆ ಗಂಟೆ
ಇದೇ ವೇಳೆ, ಪರಿಸರ ತಜ್ಞರು ಚೀನಾದ ಈವತ್ತಿನ ವೈಪರೀತ್ಯಕ್ಕೆ ಗ್ಲೋಬಲ್ ವಾರ್ಮಿಂಗ್ ಕಾರಣ ಎಂದು ಎಚ್ಚರಿಕೆ ನೀಡಿದ್ದಾರೆ. ಗ್ರೀನ್ ಪೀಸ್ ಈಸ್ಟ್ ಏಶ್ಯಾ ಸಂಘಟನೆಯ ಪರಿಸರ ಅಧ್ಯಯನಕಾರ ಲೀನ್ ಶೂ ಪ್ರಕಾರ, ಇದು ಚೀನಾ ಪಾಲಿಗೆ ಎಚ್ಚರಿಕೆಯ ಕರೆ ಗಂಟೆ. ಪರಿಸರ ಅಸಮತೋಲನ, ತೀವ್ರವಾಗಿ ಆಗುತ್ತಿರುವ ಮಾಲಿನ್ಯ, ಹೆಚ್ಚುತ್ತಿರುವ ತಾಪಮಾನ ಈ ರೀತಿಯ ಅವಢಕ್ಕೆ ಕಾರಣ ಎಂದು ಹೇಳಿದ್ದಾರೆ. ಸಿಂಗಾಪುರದ ಭೂವಿಜ್ಞಾನಿ ಬೆಂಜಮಿನ್ ಹಾರ್ಟನ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ಗ್ಲೋಬಲ್ ವಾರ್ಮಿಂಗ್ ಪರಿಣಾಮ ಭೂಮಿಯ ವಾತಾವರಣದಲ್ಲಿ ನೀರಿನಂಶ ಹೆಚ್ಚುತ್ತಿದ್ದು ವಿಪರೀತ ಮಳೆಗೆ ಸಾಕ್ಷಿಯಾಗುತ್ತಿದೆ ಎಂದಿದ್ದಾರೆ.
This white-shirt man,
— Tong Bingxue 仝冰雪 (@tongbingxue) July 23, 2021
rescued five people Tuesday
at the entrance of a tunnel in Zhengzhou, central China,
after heavy rains and floods.
His name is Yang Junkui杨俊魁,a 45-year old retired Commando. pic.twitter.com/QR7parbJRM
ಜಗತ್ತಿನಲ್ಲೇ ಅಲ್ಲೋಲ ಕಲ್ಲೋಲ !
ಗ್ಲೋಬಲ್ ವಾರ್ಮಿಂಗ್, ವಾತಾವರಣದ ಮಾಲಿನ್ಯ ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ಕಳೆದ 3-4 ವರ್ಷಗಳಲ್ಲಿ ಇದರ ಭೀಕರ ಪರಿಣಾಮಗಳು ಗೋಚರಿಸುತ್ತಿದ್ದು, ಅಮೆರಿಕ, ಕೆನಡಾದಲ್ಲಿ ಉಷ್ಣ ಮಾರುತಗಳು ಅಲ್ಲಿನ ಜನರನ್ನು ಕಂಗೆಡಿಸಿದೆ. ಆಗಿಂದಾಗ್ಗೆ ಬೀಸುವ ಬಿಸಿಗಾಳಿ, ಭೀಕರ ಬಿಸಿಲ ಝಳ ಸಾವಿರಾರು ಜನರನ್ನು ಆಹುತಿ ತೆಗೆದುಕೊಂಡಿದೆ. ಇದೇ ವೇಳೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಕೋಬಾಬಾದ್ ಎನ್ನುವ ಪ್ರದೇಶದಲ್ಲಿ ಬಿಸಿಗಾಳಿ ಎದ್ದಿದೆ. ಮಾನವ ಬದುಕುವುದಕ್ಕಿಂತ ಹೆಚ್ಚು ಉಷ್ಣತೆಯನ್ನು ತೋರಿಸಿದ್ದು, 52 ಡಿಗ್ರಿ ಸೆಲ್ಸಿಯಸ್ ದಾಖಲು ಮಾಡಿದೆ.
ಜರ್ಮನಿ ಸೇರಿದಂತೆ ಯುರೋಪ್ ರಾಷ್ಟ್ರಗಳಲ್ಲಿಯೂ ಪ್ರವಾಹ ಎದುರಾಗುತ್ತಿದೆ. ಅಲ್ಲಿನ ನಗರಗಳು ಮಳೆರಾಯನ ಪ್ರಕೋಪಕ್ಕೆ ನಲುಗುತ್ತಿವೆ. ಈಗೀಗ ಭಾರತದಲ್ಲಿಯೂ ಇಂಥಹದ್ದೇ ವೈಪರೀತ್ಯ ಕಾಣಿಸಿಕೊಂಡಿದ್ದನ್ನು ನಾವು ಸ್ಮರಿಸಬಹುದು. ಈ ಬಾರಿ ತೌಕ್ತೆ ಮತ್ತು ಯಾಸ್ ಎನ್ನುವ ಎರಡೆರಡು ಚಂಡಮಾರುತ ಕಾಣಿಸಿಕೊಂಡು ಪಶ್ಚಿಮ ಮತ್ತು ಪೂರ್ವ ಕರಾವಳಿ ಉದ್ದಕ್ಕೂ ನಾಶ-ನಷ್ಟ ಮಾಡಿತ್ತು. ಪೂರ್ವ, ಪಶ್ಚಿಮದಲ್ಲಿ ಮಳೆ, ಪ್ರವಾಹ ಎದುರಾಗಿದ್ದರೆ, ಭಾರತದ ಮಧ್ಯಭಾಗದಲ್ಲಿ ಉಷ್ಣ ಹವೆ ಎದ್ದಿದೆ. ಯಾವತ್ತೂ ಶೀತದಿಂದ ಕೂಡಿದ್ದ ಪಂಜಾಬ್, ಹರ್ಯಾಣ, ದೆಹಲಿ ಉಷ್ಣ ಹವೆಗೆ ನಲುಗಿದ್ದು, ಇನ್ನೂ ಅಲ್ಲಿ ಮಾನ್ಸೂನ್ ತಲುಪಿಯೇ ಇಲ್ಲ. ಪರಿಸರ ತಜ್ಞರ ಪ್ರಕಾರ, ಭವಿಷ್ಯದಲ್ಲಿ ಭಾರತದಲ್ಲಿಯೂ ಮಾನ್ಸೂನ್ ಭೀಕರ ವೈಪರೀತ್ಯಗಳಿಗೆ ಸಾಕ್ಷಿಯಾಗಲಿದೆ.
Video:
150 kids and teachers of a kindergarten in Zhengzhou rescued pic.twitter.com/lKDxvvtmrI
— CGTN (@CGTNOfficial) July 21, 2021
Passengers were trapped on a metro line in Zhengzhou, China after downpours hit the city. Rescue efforts have been underway. #GLOBALink pic.twitter.com/im4nvAfhv0
— China Xinhua News (@XHNews) July 20, 2021
At least 33 people have died and eight remain missing in central China, as authorities ramp up rescue and recovery efforts following devastating floods that submerged entire neighborhoods, trapped passengers in subway cars, caused landslides and overwhelmed dams and rivers.
15-04-25 08:44 pm
Bangalore Correspondent
Kannada Journalist S K Shyamsundar Death: ಹಿರ...
15-04-25 12:51 pm
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
15-04-25 04:40 pm
HK News Desk
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
16-04-25 02:02 pm
Mangalore Correspondent
Panambur Bike Accident, Mangalore: ಪಣಂಬೂರಿನಲ್...
16-04-25 01:29 pm
NIA, Praveen Nettaru: ಪ್ರವೀಣ್ ನೆಟ್ಟಾರು ಕೊಲೆ ಪ...
15-04-25 09:57 pm
Drowning, Surathkal Beach, Mangalore, News: ಮ...
15-04-25 09:21 pm
ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ...
14-04-25 09:20 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm