ಬ್ರೇಕಿಂಗ್ ನ್ಯೂಸ್
01-09-20 04:54 pm Headline Karnataka News Network ದೇಶ - ವಿದೇಶ
ಹೊಸದಿಲ್ಲಿ , ಸೆಪ್ಟೆಂಬರ್ 1: ದೇಶದ ಮೊಟ್ಟಮೊದಲ ಹೃದಯ ರೋಗ ತಜ್ಞೆಯಾಗಿದ್ದ ಪದ್ಮಾವತಿ ಅಯ್ಯರ್ ತಮ್ಮ 103ನೇ ವಯಸ್ಸಿನಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಮ್ಯಾನ್ಮಾರ್ನಲ್ಲಿ ಜನಿಸಿದ ಪದ್ಮಾವತಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಸೇನೆ ದಾಳಿ ನಡೆಸಿದ ಕಾರಣಕ್ಕೆ ಭಾರತಕ್ಕೆ ಬಂದು ನೆಲೆಸಿದ್ದರು. ದೇಶದ ಪ್ರಪ್ರಥಮ ಮಹಿಳಾ ಹೃದ್ರೋಗ ತಜ್ಞೆ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದರು.
ಹನ್ನೊಂದು ದಿನಗಳ ಹಿಂದೆ ಕೋವಿಡ್-19 ಸೋಂಕು ಕಂಡುಬಂದ ಇವರನ್ನು ದೆಹಲಿಯ ನ್ಯಾಷನಲ್ ಹಾರ್ಟ್ ಇನ್ಸ್ಟಿಟ್ಯೂಟ್ (ಎನ್ಎಚ್ಐ)ಗೆ ದಾಖಲಿಸಲಾಗಿತ್ತು. 1981ರಲ್ಲಿ ಈ ಸಂಸ್ಥೆಯನ್ನು ಸ್ವತಃ ಇವರೇ ಆರಂಭಿಸಿದ್ದರು.
ಕಳೆದ ಐದು ವರ್ಷಗಳಿಂದ ವ್ಹೀಲ್ಚೇರ್ ನೆರವಿನಲ್ಲಿ ಆಚೀಚೆ ಹೋಗುತ್ತಿದ್ದರೂ, ಮಾನಸಿಕವಾಗಿ ಸ್ಥಿರತೆ ಕಾಯ್ದುಕೊಂಡಿದ್ದರು. ಹೃದಯ ರೋಗದ ಬಗ್ಗೆ, ತಾವು ಸ್ಥಾಪಿಸಿದ ಹಾರ್ಟ್ ಇನ್ಸ್ಟಿಟ್ಯೂಟ್ ಬಗ್ಗೆ ಸ್ಪಷ್ಟ ಮಾಹಿತಿಗಳು ಅವರಲ್ಲಿದ್ದವು ಎಂದು ಎನ್ಎಚ್ಐ ಸಿಇಓ ಡಾ.ಓ.ಪಿ. ಯಾದವ್ ಹೇಳಿದ್ದಾರೆ.
"ಹೃದ್ರೋಗಶಾಸ್ತ್ರದ ಅಜ್ಜಿ" ಎಂದೇ ಗುರುತಿಸಲ್ಪಟ್ಟಿದ್ದ ಪದ್ಮಾವತಿ ಅಯ್ಯರ್, ಸೋಂಕಿಗೆ ಹೃದಯ ಕವಾಟ ಹಾನಿಗೀಡಾಗುವ ರುಮೇಟಿಕ್ ಹೃದ್ರೋಗ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಕೈಗೊಂಡಿದ್ದರು. ರಂಗೂಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದ ಪದ್ಮಾವತಿ, ಸ್ಟಾಕ್ಹೋಂನ ಸೋದೆರ್ಶ್ಚೂಸೆಟ್ ಆಸ್ಪತ್ರೆ, ಅಮೆರಿಕದ ಜಾನ್ ಹಾಕಿನ್ಸ್ ಮತ್ತು ಹಾರ್ವಡ್ ಮೆಡಿಕಲ್ ಸ್ಕೂಲ್ನಲ್ಲಿ ತರಬೇತಿ ಪಡೆದಿದ್ದರು. ಇವರು ಲಂಡನ್ನ ರಾಯಲ್ ಕಾಲೇಜ್ ಆಫ್ ಫಿಸೀಶಿಯನ್ಸ್ನ ಫೆಲೋ ಕೂಡ ಆಗಿದ್ದರು. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm