ಬ್ರೇಕಿಂಗ್ ನ್ಯೂಸ್
31-08-20 12:36 pm Headline Karnataka News Network ದೇಶ - ವಿದೇಶ
ಹೊಸದಿಲ್ಲಿ, ಆಗಸ್ಟ್ 31: ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡೇ ಸ್ಥಾನದಲ್ಲಿರುವ ಭಾರತದಲ್ಲಿ ಕೊರೋನಾ ಸೋಂಕು ದಾಖಲೆಯ ಪ್ರಮಾಣದಲ್ಲಿ ಏರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ 80 ಸಾವಿರಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ರವಿವಾರ ವರದಿಯಾಗಿದ್ದು, ವಿಶ್ವದ ಯಾವುದೇ ದೇಶದಲ್ಲೂ ಒಂದೇ ದಿನ ಕೊರೊನದ ಇಷ್ಟೊಂದು ಪ್ರಕರಣಗಳು ಪತ್ತೆಯಾದ ನಿದರ್ಶನ ಇಲ್ಲ.
ಅಲ್ಪ ಇಳಿಕೆಯ ಬಳಿಕ ಪ್ರಗತಿ ದರ ಹಾಗೂ ಸೋಂಕಿತರ ಪೈಕಿ ಸಾವಿಗೀಡಾದವರ ದರ ಹೆಚ್ಚಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ದರ ದುಪ್ಪಟ್ಟಾಗಿದೆ. ಶನಿವಾರ ದೇಶಾದ್ಯಂತ 80,0092 ಪ್ರಕರಣಗಳು ದೃಢಪಟ್ಟಿದ್ದು, ವಾರಾಂತ್ಯದಲ್ಲಿ ಕಡಿಮೆ ತಪಾಸಣೆ ನಡೆಯುವ ಹಿನ್ನೆಲೆಯಲ್ಲಿ ಕಡಿಮೆ ಪ್ರಕರಣಗಳು ವರದಿಯಾಗುತ್ತಿದ್ದವು. ಇದುವರೆಗೆ ವಾರಾಂತ್ಯದಲ್ಲಿ ಗರಿಷ್ಠ ಅಂದರೆ 63,851 ಪ್ರಕರಣಗಳು ಆಗಸ್ಟ್ 9ರಂದು ವರದಿಯಾಗಿದ್ದವು.

ಆತಂಕಕಾರಿ ವಿಚಾರವೆಂದರೆ ತಿಂಗಳ ಮೊದಲ ವಾರಗಳಲ್ಲಿ ಹೊಸ ಪ್ರಕರಣಗಳು ಹಾಗೂ ಪ್ರಗತಿ ದರ ಇಳಿಕೆ ಕಂಡುಬಂದಿದ್ದರೂ, ಕೊನೆಯ ವಾರ ಏರಿಕೆಯಾಗಿದೆ. ದೇಶದಲ್ಲಿ ಸತತ ಐದು ದಿನಗಳಿಂದ 76 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದು, ವಾರದಲ್ಲಿ ಪ್ರಗತಿ ದರ 13.1% ಇದೆ. ಹಿಂದಿನ ವಾರ ದಾಖಲಾಗಿದ್ದ 4.7%ಕ್ಕೆ ಹೋಲಿಸಿದರೆ ಇದು ಮೂರು ಪಟ್ಟು. ಅದಕ್ಕಿಂತ ಹಿಂದಿನ ವಾರ 5.9% ಹಾಗೂ ಆಗಸ್ಟ್ ಮೊದಲ ವಾರ 10.9% ಪ್ರಗತಿದರ ದಾಖಲಾಗಿತ್ತು. ಅಂತೆಯೇ ಸತತ ನಾಲ್ಕನೇ ದಿನ ಸಾವಿರಕ್ಕೂ ಅಧಿಕ ಸಾವು ಸಂಭವಿಸಿದೆ. ಈ ವಾರ ಸಾವಿನ ಏರಿಕೆ ದರ ಶೇಕಡ 3.9ರಷ್ಟಿದ್ದು, ಹಿಂದಿನ ವಾರ ದಾಖಲಾದ ಶೇಕಡ 1.7ಕ್ಕೆ ಹೋಲಿಸಿದರೆ ಇದು ದ್ವಿಗುಣಗೊಂಡಿದೆ.
ಮಹಾರಾಷ್ಟ್ರ ಸತತ ಎರಡನೇ ದಿನ 16 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಕಂಡಿದೆ. 16,408 ಮಂದಿಗೆ ಶನಿವಾರ ಸೋಂಕು ದೃಢಪಟ್ಟಿದ್ದು, ಉಳಿದಂತೆ ಉತ್ತರ ಪ್ರದೇಶ (6,233), ರಾಜಸ್ಥಾನ (1,450), ಮಧ್ಯಪ್ರದೇಶ (1,558), ಛತ್ತೀಸ್ಗಢ (1,471) ಮತ್ತು ಜಮ್ಮು ಮತ್ತು ಕಾಶ್ಮೀರ (786) ಹೀಗೆ ಐದು ರಾಜ್ಯಗಳು ಶನಿವಾರ ಇದುವರೆಗಿನ ಗರಿಷ್ಠ ಪ್ರಕರಣಗಳನ್ನು ದಾಖಲಿಸಿವೆ. ದೇಶದಲ್ಲಿ ರವಿವಾರ 970 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಬಲಿಯಾದವರ ಸಂಖ್ಯೆ 64,550ಕ್ಕೇರಿದೆ.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm