ಬ್ರೇಕಿಂಗ್ ನ್ಯೂಸ್
10-06-21 09:36 pm Headline Karnataka News Network ದೇಶ - ವಿದೇಶ
ಕೊಚ್ಚಿ, ಜೂನ್ 10: ಮರಳಿ ಬರುತ್ತೇನೆಂದು ಆತ ಕನಸಿನಲ್ಲೂ ಎಣಿಸಿರಲಿಲ್ಲ. ಗಲ್ಫ್ ರಾಷ್ಟ್ರದಲ್ಲಿ ಗಲ್ಲು ಶಿಕ್ಷೆಯಾದರೆ, ಅಲ್ಲಿನ ಪ್ರಜೆಯೇ ಆದರೂ ಬದುಕಿ ಬರುವುದು ಕನಸಿನ ಮಾತು. ಅಂಥದ್ರಲ್ಲಿ ಭಾರತೀಯ ಪ್ರಜೆ ಮರಳಿ ಬರುವುದುಂಟೇ.. ಆದರೆ, ಕೇರಳ ಮೂಲದ 45ರ ಯುವಕ ಗಲ್ಪ್ ಉದ್ಯಮಿಯೊಬ್ಬರ ಕೃಪೆಯಿಂದ ಕೊನೆಗೂ ಬದುಕಿ ಬಂದಿದ್ದಾನೆ.
ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬೆಕ್ಸ್ ಕೃಷ್ಣನ್ ಬಾಯಲ್ಲಿ ಉದುರಿದ್ದು ಒಂದೇ ಮಾತು. ಇದು ನನಗೆ ಪುನರ್ಜನ್ಮ. ನನ್ನ ಪಾಲಿಗೆ ಇದು ಜೀವನದ ಹೊಸ ಅಧ್ಯಾಯ. ಯೂಸುಫ್ ಆಲಿಯವರ ಕೃಪೆಯಿಂದಾಗಿ ಬದುಕಿ ಬಂದಿದ್ದೇನೆ. ನಾನು ನನ್ನ ಕುಟುಂಬವನ್ನು ಮರಳಿ ನೋಡುತ್ತೇನೆಂಬ ಯಾವ ಭರವಸೆಯೂ ಇರಲಿಲ್ಲ ಎಂದು ಹೇಳಿದರು.


ಅಬುಧಾಬಿಯ ಕಂಪನಿಯೊಂದರಲ್ಲಿ ಚಾಲಕ ವೃತ್ತಿಯಲ್ಲಿದ್ದ ಕೃಷ್ಣನ್, 2012ರಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅಪಘಾತ ನಡೆದು ಸುಡಾನ್ ಮೂಲದ ಬಾಲಕ ಮೃತಪಟ್ಟಿದ್ದ. ಇದಕ್ಕೆ ಸಿಸಿಟಿವಿಯೂ ಲಭ್ಯವಾಗಿದ್ದರಿಂದ ಅಲ್ಲಿನ ಕೋರ್ಟ್, ಚಾಲಕನ ತಪ್ಪನ್ನು ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಿತ್ತು. ಅಬುಧಾಬಿಯ ಸುಪ್ರೀಂ ಕೋರ್ಟ್ ಶಿಕ್ಷೆ ನೀಡಿದ ಮೇಲೆ ಏನೂ ಮಾಡುವಂತಿರಲಿಲ್ಲ.


ಈ ನಡುವೆ, ಕೃಷ್ಣನ್ ಕುಟುಂಬಸ್ಥರು ಹಲವರ ಬಳಿಗೆ ಹೋಗಿ ಯುವಕನನ್ನು ಕಾಪಾಡುವಂತೆ ಕೇಳಿಕೊಂಡಿದ್ದರು. ಕೇರಳ ಮೂಲದ ದುಬೈ ಉದ್ಯಮಿ, ಲುಲು ಮಾರ್ಕೆಟ್ ಮಾಲೀಕ ಯೂಸುಫ್ ಆಲಿಯವರನ್ನೂ ಸಂಪರ್ಕಿಸಿ, ಸಹಾಯ ಕೇಳಿದ್ದರು. ಈ ವೇಳೆ, ದುಬೈ ಕಾನೂನಿನ ಪ್ರಕಾರ ಗಲ್ಲು ಶಿಕ್ಷೆಯಾದರೆ ಅದನ್ನು ರದ್ದುಪಡಿಸುವಂತಿಲ್ಲ. ಆದರೆ, ದೂರು ನೀಡಿದವರೇ ನಿಮ್ಮನ್ನು ಕಾಯಬೇಕು. ಅವರೊಂದ್ವೇಳೆ ದೂರು ಹಿಂಪಡೆದರೆ ಗಲ್ಲು ರದ್ದು ಆಗಬಹುದು ಎಂದಿದ್ದರು.

ಅದರಂತೆ, ಕೃಷ್ಣನ್ ಕುಟುಂಬಸ್ಥರನ್ನು ಅಬುಧಾಬಿಗೆ ಕರೆಸಿಕೊಳ್ಳಲು ಸ್ವತಃ ಯೂಸುಫ್ ಆಲಿಯವರೇ ವ್ಯವಸ್ಥೆ ಮಾಡಿದ್ದರು. ಮೃತ ಬಾಲಕನ ಕುಟುಂಬವನ್ನು ಭೇಟಿಯಾಗಿ ಕೃಷ್ಣನ್ ಕುಟುಂಬ ತಪ್ಪು ಕೇಳಿಕೊಂಡಿದ್ದರು. ಅಚಾನಕ್ ತಪ್ಪಿನಿಂದಾದ ಪ್ರಮಾದಕ್ಕೆ ಕ್ಷಮೆ ಕೊಡಿ ಎಂದು ಅಂಗಲಾಚಿದರು. ಯೂಸುಫ್ ಆಲಿಯವರು ಕೂಡ ಕೃಷ್ಣನ್ ಕುಟುಂಬದ ಪರವಾಗಿ ಕ್ಷಮೆ ನೀಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಬದಲಾಗಿ, ಉದ್ಯಮಿ ಯೂಸುಫ್ ಆಲಿಯವರು ಕುಟುಂಬಕ್ಕೆ ಹಣದ ಪರಿಹಾರ ನೀಡುವ ಭರವಸೆ ನೀಡಿದ್ದರು. ಅದರಂತೆ, ಸುಡಾನ್ ಕುಟುಂಬ ಎರಡು ತಿಂಗಳ ಹಿಂದೆ ಕೊನೆಗೂ ದೂರನ್ನು ಹಿಂಪಡೆದಿತ್ತು. ಪ್ರತಿಯಾಗಿ ಸುಡಾನ್ ಮೂಲದ ಬಾಲಕನ ಕುಟುಂಬಕ್ಕೆ 5 ಲಕ್ಷ ದಿರ್ಹಮ್ (ಒಂದು ಕೋಟಿ ರೂ.) ಯೂಸುಫ್ ಆಲಿಯವರು ಬ್ಲಡ್ ಮನಿ ರೂಪದಲ್ಲಿ ಪರಿಹಾರದ ಮೊತ್ತ ನೀಡಿದ್ದರು.

ಕಳೆದ ಜನವರಿಯಲ್ಲಿ ಯೂಸುಫ್ ಆಲಿಯವರು ಅಲ್ಲಿನ ಕೋರ್ಟಿನಲ್ಲಿ ಹಣವನ್ನು ಡಿಪಾಸಿಟ್ ಮಾಡಿದ್ದರು. ಕೋರ್ಟ್ ಪರಿಹಾರದ ಮೊತ್ತವನ್ನು ಸಂತ್ರಸ್ತ ಕುಟುಂಬದ ಹೆಸರಲ್ಲಿ ಡಿಪಾಸಿಟ್ ಮಾಡಿದ ಬಳಿಕ, ಆರೋಪಿಯನ್ನು ಬಿಡುಗಡೆ ಮಾಡಿತ್ತು. ಅದರಂತೆ, ಜೈಲಿನ ಪ್ರಕ್ರಿಯೆ ನಡೆದು ಮೊನ್ನೆ ಜೂನ್ 3ರಂದು ಅಬುಧಾಬಿ ಜೈಲಿನಿಂದ ಕೃಷ್ಣನ್ ಬಿಡುಗಡೆಯಾಗಿದ್ದ. ಆನಂತರ, ಪಾಸ್ಪೋರ್ಟ್ ರೆಡಿ ಮಾಡಿಸಿ, ಯೂಸುಫ್ ಆಲಿಯವರೇ ಇಂದು ಕೊಚ್ಚಿಗೆ ತಲುಪಿಸಿದ್ದಾರೆ. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪತ್ನಿ ವೀಣಾ ಮತ್ತು ಹತ್ತು ವರ್ಷದ ಮಗ, ಪುನರ್ಜನ್ಮ ಎತ್ತಿ ಬಂದ ಕೃಷ್ಣನ್ ಅವರನ್ನು ಸ್ವಾಗತಿಸಿದ್ದು ಭಾವುಕ ಕ್ಷಣಗಳನ್ನು ಸೃಷ್ಟಿಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯೂಸುಫ್ ಆಲಿ, ಇದು ಮಾನವೀಯತೆಯ ಪ್ರಶ್ನೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ ಅಷ್ಟೇ. ದುರದೃಷ್ಟಕ್ಕೆ ಬಿದ್ದು ಕಷ್ಟದಲ್ಲಿ ಸಿಲುಕಿದ್ದವನಿಗೆ ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.
Abu Dhabi A 45-year-old Keralite, who was on death row in the United Arab Emirates for killing a young Sudanese boy in a road accident in 2012, can't believe that he will be a free man and can return to the country to be with his family.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 12:19 pm
HK News Staffer
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm