ಬ್ರೇಕಿಂಗ್ ನ್ಯೂಸ್
01-08-20 06:55 am Headline Karnataka News Network ದೇಶ - ವಿದೇಶ
ಅಲಾಸ್ಕ, ಆ 01: ವಿಮಾನಗಳೆರಡರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಶಾಸಕ ಸೇರಿ ಏಳು ಮಂದಿ ಮೃತಪಟ್ಟಿರುವ ಘಟನೆ ಶುಕ್ರವಾರ ಅಮೆರಿಕದ ಅಲಾಸ್ಕದ ಕೆನೈ ಪೆನಿನ್ಸುಲಾದ ಸೋಲ್ಡೊಟ್ನಾ ನಗರದ ವಿಮಾನ ನಿಲ್ದಾಣದ ಸಮೀಪದಲ್ಲಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನ ಪತನದಲ್ಲಿ ಮೃತಪಟ್ಟವರನ್ನು ಶಾಸಕ ಗ್ಯಾರಿ ನೂಪ್, ಪೈಲಟ್ ಗ್ರೆಗೋರಿ ಬೆಲ್ (67), ಗೈಡ್ ಡೇವಿಡ್ ರೋಜರ್ಸ್ (40) ಮತ್ತು ಸೌಥ್ ಕರೊಲಿನಾ ಪ್ರವಾಸಿಗರಾದ ಕಲೆಬ್ ಹಸ್ಲಿ (26), ಹೆದರ್ ಹಸ್ಲಿ (25), ಮೆಕಾಯ್ ಹಸ್ಲಿ (24) ಮತ್ತು ಕ್ರಿಸ್ಟಿ ರೈಟ್ (23) ಎಂದು ಗುರುತಿಸಲಾಗಿದೆ.
ಎರಡು ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಯಾರೂ ಕೂಡಾ ಬದುಕುಳಿದಿಲ್ಲ. ಅಲಾಸ್ಕಾ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ಶಾಸಕ ಗ್ಯಾರಿ ನೂಪ್ ವಿಮಾನವೊಂದರಲ್ಲಿ ಏಕಾಂಗಿಯಾಗಿ ವಾಪಾಸ್ಸಾಗುತ್ತಿದ್ದರು. ಇನ್ನೊಂದು ವಿಮಾನವು ಅಲಾಸ್ಕಾ ಕಡೆಗೆ ಸೌಥ್ ಕರೊನಾದಿಂದ ಬರುತ್ತಿದ್ದು, ಈ ವಿಮಾನದಲ್ಲಿ ನಾಲ್ಕು ಪ್ರವಾಸಿಗರು ಸೇರಿದಂತೆ ಓರ್ವ ಗೈಡ್ ಮತ್ತು ಪೈಲಟ್ ಇದ್ದರು.
ಮಾಯು ಮಾರ್ಗದ ನಡುವೆ ಎರಡು ವಿಮಾನಗಳ ಮುಖಾಮುಖಿ ಡಿಕ್ಕಿಯ ಪರಿಣಾಮ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಓರ್ವನನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಮೃತ ಶಾಸಕ ಗ್ಯಾರಿ ನೂಪ್ ಅವರು ಓರ್ವ ರಿಪಬ್ಲಿಕನ್ ಹಾಗೂ ರಾಜ್ಯ ಸದನದ ಉಭಯ ಪಕ್ಷೀಯ ಬಹುಮತದ ಸದಸ್ಯರಾಗಿದ್ದರು. ಇವರ ಈ ದುರಂತ ಸಾವಿಗೆ ಹಲವಾರ ಸಹೋದ್ಯೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇವರು ತಮ್ಮ ಪ್ರದೇಶದ ಅಭಿವೃದ್ದಿಗಾಗಿ ದುಡಿಯುತ್ತಿದ್ದು, ಇಂತಹ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸಹೋದ್ಯೋಗಿಗಳು ದುಃಖಿತರಾಗಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ.
2019ರ ಮೇ ತಿಂಗಳಿನಲ್ಲಿ ಕೆಟ್ಟಿಕನ್ ಬಳಿ ವಿಮಾನಗಳ ಡಿಕ್ಕಿ ಸಂಭವಿಸಿದ್ದು, 6 ಮಂದಿ ಸಾವನ್ನಪ್ಪಿದ್ದು, 10 ಜನರು ಪ್ರಾಣಾಪಾಯದಿಂದ ಪಾರಾಗಿದ್ದರು.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm