ಬ್ರೇಕಿಂಗ್ ನ್ಯೂಸ್
06-06-21 01:53 pm Headline Karnataka News Network ದೇಶ - ವಿದೇಶ
ಬೆಂಗಳೂರು, ಜೂನ್ 6: ಕರ್ನಾಟಕದ ಧ್ವಜ ಮತ್ತು ಲಾಂಛನವುಳ್ಳ ಮಹಿಳೆಯರ ಬಿಕಿನಿ ಉಡುಪನ್ನು ಮಾರಾಟಕ್ಕಿಟ್ಟು ವಿವಾದಕ್ಕೀಡಾಗಿದ್ದ ಅಮೆಜಾನ್ ಸಂಸ್ಥೆ, ಕನ್ನಡಿಗರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಕಿನಿ ಫೋಟೋವನ್ನು ತೆಗೆದುಹಾಕಿದೆ. ಎರಡು ದಿನಗಳ ಹಿಂದಷ್ಟೇ ಗೂಗಲ್ ಸಂಸ್ಥೆ ಕನ್ನಡವನ್ನು ಕೊಳಕು ಎನ್ನುವ ಮೂಲಕ ವಿವಾದ ಮೈಗೆಳೆದುಕೊಂಡಿತ್ತು.
ತೀವ್ರ ಆಕ್ರೋಶ ಕೇಳಿಬರುತ್ತಿದ್ದಂತೆ ಗೂಗಲ್ ಕನ್ನಡಿಗರ ಕ್ಷಮೆಯನ್ನೂ ಕೋರಿತ್ತು. ಇದೀಗ ಅಮೆಜಾನ್ ಸಂಸ್ಥೆ ಕೆನಡಾದಲ್ಲಿರುವ ತನ್ನ ಆನ್ಲೈನ್ ಪುಟದಲ್ಲಿ ಕರ್ನಾಟಕ ಧ್ವಜದ ಬಣ್ಣದ ಒಳ ಉಡುಪನ್ನು ಮಾರಾಟಕ್ಕಿಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಬಿಕಿನಿಯ ಜೊತೆಗೆ ಕರ್ನಾಟಕ ಧ್ವಜ ಎಂಬ ಹೆಸರನ್ನೂ ಬಳಸಲಾಗಿತ್ತು.


ಇದರ ಚಿತ್ರಗಳನ್ನು ಷೇರ್ ಮಾಡಿ ಜಾಲತಾಣದಲ್ಲಿ ಲಕ್ಷಾಂತರ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಂತೆಯೇ ವಿವಾದಿತ ಒಳ ಉಡುಪಿನ ಫೋಟೋವನ್ನು ಡಿಲೀಟ್ ಮಾಡಿದೆ. ಬೇರೆ ಬಿಕಿನಿ ಫೋಟೋವನ್ನು ಜಾಹಿರಾತಿನಲ್ಲಿ ಬಳಸಿದ್ದು ಬ್ರಾಂಡ್ ವಿವರಣೆಯಲ್ಲಿ ಮಾತ್ರ Flag of Karnataka ಎಂದು ಉಳಿದುಕೊಂಡಿದೆ. ಈ ರೀತಿಯ ಬರಹ ಉಳಿದುಕೊಂಡಿರುವ ಬಗ್ಗೆಯೂ ಲಕ್ಷಾಂತರ ಜನ ಟ್ವೀಟ್ ಮಾಡಿ, ಅಮೆಜಾನ್ ಸಂಸ್ಥೆಯ ಗಮನ ಸೆಳೆದಿದ್ದಾರೆ.
Minister of Kannada and Culture Aravind Limbavali on Saturday slammed e-commerce giant Amazon for selling a bikini with the Karnataka flag's colours and emblem. The minister asked the company to issue a formal apology and threatened legal action. The product, which was put on sale on Amazon's Canadian website under the brand name BKDMHHH, has now been removed. However, people took screenshots of the yellow and red coloured bikini and circulated it online, asking the e-commerce giant to apologise to Kannadigas.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 12:19 pm
HK News Staffer
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
Raghupathi Bhat: 'ಕಾಂಗ್ರೆಸ್ನಿಂದ ಬುಲಾವ್, ಬಿಜೆ...
14-10-26 02:00 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm