ಬ್ರೇಕಿಂಗ್ ನ್ಯೂಸ್
02-05-21 11:53 am Headline Karnataka News Network ದೇಶ - ವಿದೇಶ
Photo credits : Vincent Pulickal, EPS
ಕಾಸರಗೋಡು, ಮೇ 2: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು ಯಾರು ಗದ್ದುಗೆ ಹಿಡಿಯುತ್ತಾರೆಂದು ಇಂದೇ ನಿರ್ಣಯ ಆಗಲಿದೆ. ಈ ನಡುವೆ, ಕೇರಳದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಸ್ಪಷ್ಟ ಮುನ್ನಡೆ ಕಾಯ್ದುಕೊಂಡಿದ್ದಾರೆ.
11 ಕ್ಕೆ ದೊರೆತ ಫಲಿತಾಂಶದ ಪ್ರಕಾರ ಸುರೇಂದ್ರನ್ ಹತ್ತು ಸುತ್ತುಗಳ ಬಳಿಕ 1700 ಮತಗಳಿಂದ ಮುನ್ನಡೆ ಗಳಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಮಂಜೇಶ್ವರದಲ್ಲಿ ಲೀಗ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಮತ್ತು ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಎರಡು ಅವಧಿಯಲ್ಲಿ ಲೀಗ್ ಅಭ್ಯರ್ಥಿ ಮಂಜೇಶ್ವರ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು.
2016ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಕೇವಲ 87 ಮತಗಳಿಂದ ಸೋತಿದ್ದರು. ಲೀಗ್ ಅಭ್ಯರ್ಥಿ ಅಬ್ದುಲ್ ರಜಾಕ್ ಗೆಲುವು ಕಂಡಿದ್ದರು. ಆದರೆ, ರಜಾಕ್ ನಿಧನದಿಂದ 2018 ರಲ್ಲಿ ಉಪ ಚುನಾವಣೆ ನಡೆದ ವೇಳೆ ಬಿಜೆಪಿ ಈ ಕ್ಷೇತ್ರದಲ್ಲಿ ಸುಮಾರು ಐದು ಸಾವಿರ ಮತಗಳಿಂದ ಸೋಲು ಕಂಡಿತ್ತು. ಆಗ ಬಿಜೆಪಿಯಲ್ಲಿ ಕುಂಟಾರು ರವೀಶ ತಂತ್ರಿ ಅಭ್ಯರ್ಥಿಯಾಗಿದ್ದರು.

ಬಿಜೆಪಿ ಈ ಬಾರಿ ಮತ್ತೆ ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದ್ದು ಗೆಲುವು ಸಿಗಲೇಬೇಕೆಂದು ಭಾರೀ ಕಸರತ್ತು ನಡೆಸಿದೆ. ಲೀಗ್ ಅಭ್ಯರ್ಥಿ ಕುರಿತ ಅಸಮಾಧಾನ ಮತ್ತು ಒಳಜಗಳ ಬಿಜೆಪಿಗೆ ಈ ಬಾರಿ ಲಾಭವಾಗಬಹುದೆಂಬ ಲೆಕ್ಕಾಚಾರ ಕೆಲವರದ್ದು.
ಈ ನಡುವೆ, ಇಲ್ಲಿ ಸಿಪಿಎಂ ಅಭ್ಯರ್ಥಿ ರಮೇಶನ್ ಎಷ್ಟರ ಮಟ್ಟಿಗೆ ಮತಗಳನ್ನು ಗಳಿಸುತ್ತಾರೆ ಅದು ಕೂಡ ಬಿಜೆಪಿ ಗೆಲುವನ್ನು ನಿರ್ಧರಿಸುತ್ತದೆ ಎನ್ನಲಾಗಿತ್ತು. ಅಂತಿಮ ಕ್ಷಣದಲ್ಲಿ ಯಾರೇ ಗೆದ್ದರೂ ಈ ಬಾರಿ ಅತ್ಯಂತ ಕಡಿಮೆ ಮತಗಳಿಂದ ಎನ್ನುವ ಸಮೀಕ್ಷೆಯ ಸತ್ಯವಾಗುವ ಸಾಧ್ಯತೆಯಿದೆ.
Indian Union Muslim League (IUML)’s AKM Ashraf is facing competition from Bharatiya Janata Party leader (BJP) K Surendran and Left Democratic Front (LDF)’s VV Rameshan.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
15-01-26 10:24 pm
Mangalore Correspondent
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ...
15-01-26 04:01 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm