ಬ್ರೇಕಿಂಗ್ ನ್ಯೂಸ್
25-04-21 06:52 pm Headline Karnataka News Network ದೇಶ - ವಿದೇಶ
ಕುವೈತ್ ಸಿಟಿ, ಎ.25: ಕುವೈಟಿಗೆ ತೆರಳುವ ಪ್ರಯಾಣಿಕರು ಅಲ್ಲಿನ ಸರಕಾರದ ಅಂಗೀಕೃತ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದರೆ, ಕ್ವಾರಂಟೈನ್ ನಿಯಮದಲ್ಲಿ ರಿಯಾಯ್ತಿ ಪಡೆಯಲಿದ್ದಾರೆ. ಕುವೈತ್ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಡಾ. ಮುಸ್ತಫಾ ರೇಡಾ ಈ ಕುರಿತು ಘೋಷಣೆ ಮಾಡಿದ್ದಾರೆ.
ಕುವೈಟ್ ಸರಕಾರ ಅಂಗೀಕೃತ ಎಂದು ಪರಿಗಣಿಸಿರುವ ಫೈಝರ್ ಬಯೋನಿಕ್, ಆಸ್ಟ್ರಾ ಝೆನೆಕಾ ಆಕ್ಸ್ ಫರ್ಡ್, ಮಾಡೆರ್ನಾ ಮತ್ತು ಜಾನ್ಸನ್ ಎಂಡ್ ಜಾನ್ಸನ್ ಕಂಪನಿಗಳ ಕೋವಿಡ್ ಲಸಿಕೆಯನ್ನು ಅಲ್ಲಿನ ಜನರು ಈಗಾಗ್ಲೇ ತೆಗೆದುಕೊಳ್ಳುತ್ತಿದ್ದಾರೆ. ಇದೇ ಕಂಪನಿಗಳ ಲಸಿಕೆಯನ್ನು ತನ್ನಲ್ಲಿಗೆ ಬರುವ ಪ್ರಯಾಣಿಕರು ಹಾಕಿಸಿಕೊಂಡಿದ್ದರೆ, ಸಾಂಸ್ಥಿಕ ಕ್ವಾರಂಟೈನ್ ಇರಬೇಕೆಂದಿಲ್ಲ. 14 ದಿನಗಳ ಹೋಮ್ ಕ್ವಾರಂಟೈನ್ ಇದ್ದರೆ ಸಾಕು ಎನ್ನುವ ನೆಲೆಯಲ್ಲಿ ರಿಯಾಯಿತಿ ಪ್ರಕಟಿಸಲಾಗಿದೆ.

ಆದರೆ, ಈ ರಿಯಾಯ್ತಿ ಪಡೆಯಲು ಕುವೈತ್ ಸರಕಾರ ಹೊರಡಿಸಿರುವ ಕೆಲವು ಮಾನದಂಡಗಳನ್ನು ಪಾಲನೆ ಮಾಡಿರಬೇಕು. ಅಂಗೀಕೃತ ಲಸಿಕೆಯ ಒಂದು ಡೋಸ್ ಪಡೆದಿದ್ದರೆ, ಡೋಸ್ ಪಡೆದು ಐದು ವಾರ ಕಳೆದಿರಬೇಕು.
ಯಾವುದೇ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದರೆ, ಕೊನೆಯ ಡೋಸ್ ಪಡೆದು ಎರಡು ವಾರ ಕಳೆದಿರಬೇಕು. ಕೊರೊನಾ ಸೋಂಕು ಆಗಿ ರಿಕವರಿ ಆದಬಳಿಕ ನಿಗದಿತ ಲಸಿಕೆಯ ಮೊದಲ ಡೋಸ್ ಪಡೆದಿದ್ದರೆ, ಎರಡು ವಾರದ ಸಮಯ ಪೂರೈಸಿರಬೇಕು.

ಲಸಿಕೆ ಪಡೆದಿರುವ ಬಗ್ಗೆ ಸರ್ಟಿಫಿಕೇಟ್ ಹೊಂದಿರಬೇಕು. ಇದರ ಜೊತೆಗೆ ಯಾವುದೇ ಪ್ರಯಾಣಿಕರು 72 ಗಂಟೆಗಳ ಒಳಗೆ ಪಡೆದಿರುವ ಆರ್ ಟಿ ಪಿಸಿಆರ್ ಟೆಸ್ಟ್ ರಿಪೋರ್ಟ್ ಪಡೆದಿರಬೇಕು. ಹೋಮ್ ಕ್ವಾರಂಟೈನ್ ಬಳಿಕವೂ ಹೊರ ಪ್ರವೇಶಕ್ಕೆ 72 ಗಂಟೆಗಳ ಒಳಗಿನ ನೆಗೆಟಿವ್ ವರದಿ ಕಡ್ಡಾಯ ಆಗಿರುತ್ತದೆ. ಕುವೈಟ್ ಪ್ರಜೆಗಳು ಅವರ ಜೊತೆಗೆ ಹತ್ತಿರದ ಸಂಬಂಧಿಕರು ( ಪತಿ, ಪತ್ನಿ ಮತ್ತು ಮಕ್ಕಳು) ಮತ್ತು ಅವರ ಖಾಸಗಿ ಕೆಲಸದಾರರ ಪ್ರವೇಶಕ್ಕೆ ಕುವೈತ್ ಸರಕಾರ ಅನುಮತಿ ನೀಡಿದೆ.
ಇದೇ ವೇಳೆ, ಕೆಲವು ನಿಗದಿತ ರಾಷ್ಟ್ರಗಳ ಜೊತೆ ವಿಮಾನ ಯಾನವನ್ನು ಪುನರಾರಂಭಿಸಲು ಕುವೈಟ್ ಸರಕಾರ ನಿರ್ಧರಿಸಿದ್ದು ಇದರ ಲಾಭ ವಿದ್ಯಾರ್ಥಿಗಳು ಮತ್ತು ನಿಗದಿತ ಗುಂಪುಗಳಿಗೆ ಮಾತ್ರ ಸಿಗಲಿದೆ. ಯುಕೆಯಿಂದ ನೇರ ವಿಮಾನ ಸಂಚಾರಕ್ಕೆ ಭಾರೀ ಒತ್ತಾಯ ಕೇಳಿಬಂದಿದೆ. ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಮನಗಂಡ ಕುವೈಟ್ ಸರಕಾರ, ಭಾರತದ ಜೊತೆ ನೇರ ವಿಮಾನ ಸಂಪರ್ಕವನ್ನು ಕಳೆದ ಶುಕ್ರವಾರದಿಂದ ಸ್ಥಗಿತಗೊಳಿಸಿತ್ತು.
Passengers to Kuwait Vaccination certificate will be mandatory for all arrivals. The Undersecretary of the Ministry of Health, Dr. Mustafa Reda stated those who are vaccinated will be exempted from institutional quarantine and are satisfied with only home quarantine for those arrivals who have been vaccinated by state approved vaccines such as Pfizer Bionic, AstraZeneca Oxford, Moderna, and Johnson and Johnson which are currently being used to vaccine citizens and expats in the country.
01-03-26 09:20 pm
HK News Staffer
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
ರಾಜ್ಯ ಮುಸ್ಲಿಮರಿಗೆ ಸ್ವರ್ಗ, ಹಿಂದುಗಳಿಗೆ ನರಕವಾಗಿದ...
01-03-26 04:56 pm
ಖಮೇನಿ ಹತ್ಯೆ ಖಂಡನೀಯ, ಇರಾನ್ ಮೇಲಿನ ಅಮೆರಿಕ ಯುದ್ಧ...
01-03-26 04:51 pm
01-03-26 09:52 am
HK News Staffer
ದುಬೈ, ಅಬುಧಾಬಿ ಮೇಲೆ ಇರಾನ್ ಮಿಸೈಲ್ ದಾಳಿ ; ಜಗತ್ತಿ...
28-02-26 10:54 pm
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರ ವ್ಯತ್ಯಯ ; ಏರ್...
28-02-26 07:17 pm
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
01-03-26 08:37 pm
HK News Staffer
PSI Nasir Hussain: ಉಡುಪಿ ; ಮ್ಯಾರಥಾನಲ್ಲಿ ಪಾಲ್ಗ...
01-03-26 04:07 pm
ಹುಲಿಕಲ್ ಘಾಟಿಯಲ್ಲಿ ದುರ್ಗಾಂಬಾ ಬಸ್ ಗೆ ಬೆಂಕಿ ; ಕು...
28-02-26 08:53 pm
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm