ಬ್ರೇಕಿಂಗ್ ನ್ಯೂಸ್
20-04-21 10:28 am Headline Karnataka News Network ದೇಶ - ವಿದೇಶ
ಮುಂಬೈ, ಎ.19: ಮುಂಬೈ ರೈಲ್ವೇ ನಿಲ್ದಾಣದಲ್ಲಿ ಮನಕಲಕುವ ಘಟನೆ ನಡೆದಿದೆ. ರೈಲು ಬರುತ್ತಿದ್ದಾಗ ಹಳಿಗೆ ಬಿದ್ದ ಮಗುವೊಂದನ್ನು ರೈಲ್ವೇ ಸಿಬ್ಬಂದಿ ದೂರದಿಂದ ಓಡಿ ಬಂದು ಕೂದಲೆಳೆಯ ಅಂತರದಲ್ಲಿ ಬದುಕಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಗುವನ್ನು ಕಾಪಾಡಿದ ವ್ಯಕ್ತಿಯನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.
ಓರ್ವ ಮಹಿಳೆ ಮತ್ತು ಮಗು ರೈಲ್ವೇ ನಿಲ್ದಾಣದ ಅಂಚಿನಲ್ಲಿ ನಡೆದು ಸಾಗುತ್ತಿದ್ದರು. ಅಚಾನಕ್ ಆಗಿ ಮಗು ನಿಲ್ದಾಣದಿಂದ ಹಳಿಗೆ ಬಿದ್ದು ಬಿಡುತ್ತದೆ. ಮಹಿಳೆ ನಿಲ್ದಾಣದ ಅಂಚಿನಲ್ಲಿ ಕೈ ಜೋಡಿಸಿ ಮಗುವನ್ನೇ ಕರೆಯುತ್ತಿರುತ್ತಾಳೆ. ಅಲ್ಲೆಲ್ಲೋ ದೂರದಿಂದ ಗಮನಿಸಿದ ಆ ವ್ಯಕ್ತಿ ಓಡೋಡಿ ಬಂದು ಮಗುವನ್ನು ಮೇಲೆತ್ತಿ ಹಾಕಿ ತಾನೂ ಹಳಿಯಿಂದ ಮೇಲೇರುತ್ತಾನೆ. ಸೆಕೆಂಡಿನ ಅಂತರದಲ್ಲಿ ಅದೇ ರೈಲು ಹಳಿಯಲ್ಲಿ ಸಾಗುತ್ತದೆ. ವಿಡಿಯೋ ಇಲ್ಲಿದೆ ನೋಡಿ.
A Good Samaritan:
— Ministry of Railways (@RailMinIndia) April 19, 2021
At Vangani station of Central Railway, Pointsman Mr. Mayur Shelkhe saved the life of a child just in the nick of the time. He risked his life to save the life of the child.
We salute his exemplary courage & utmost devotion to the duty. pic.twitter.com/V6QrxFIIY0
ವಿಡಿಯೋ ರೈಲ್ವೇ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರೈಲ್ವೇ ಸಚಿವಾಲಯವು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗುವನ್ನು ಕಾಪಾಡಿದ ಪಾಯಿಂಟ್ಸ್ ಮನ್ ಮಯೂರ ಶೆಲ್ಕೆ ಅವರ ಕರ್ತವ್ಯ ಪಾಲನೆಗೆ ಗೌರವ ಸೂಚಿಸಿದೆ. ಪುಟ್ಟ ಮಗುವನ್ನು ಕಾಪಾಡಿದ ಮಯೂರ ಶೆಲ್ಕೆ ಧೈರ್ಯ ಮತ್ತು ಆತನ ಕರ್ತವ್ಯವನ್ನು ಮೆಚ್ಚಲೇಬೇಕು ಎಂದು ಸಿಸಿಟಿವಿಯ ವಿಡಿಯೋವನ್ನು ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದೆ.
A railway official in Maharashtra risked his life to save a child who fell on the tracks as a train was approaching the platform. The incident took place in Vangani railway station on Saturday.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 10:50 pm
Mangalore Correspondent
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
ಕೊಲ್ಲೂರು ಮೂಕಾಂಬಿಕೆಗೆ ನಾಲ್ಕು ಕೋಟಿ ಮೌಲ್ಯದ ವಜ್ರ...
10-09-25 08:14 pm
Mangalore, Baikampady Fire, Aromazen: ಬೈಕಂಪಾಡ...
10-09-25 02:10 pm
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm