ಬ್ರೇಕಿಂಗ್ ನ್ಯೂಸ್
07-04-21 05:48 pm Headline Karnataka News Network ದೇಶ - ವಿದೇಶ
ಬ್ರೆಜಿಲ್,ಎ.7: ಜಗತ್ತಿನಾದ್ಯಂತ ಕೊರೊನಾ ಸೋಂಕು ಮತ್ತೊಮ್ಮೆ ತನ್ನ ಉಗ್ರ ಸ್ವರೂಪವನ್ನ ಪ್ರದರ್ಶಿಸುತ್ತಿದೆ. ಕೆಲವು ದೇಶಗಳಲ್ಲಿ ಕೊರೊನಾದ ಎರಡನೇ ಅಲೆ ಪ್ರಾರಂಭವಾಗಿದ್ದರೆ ಇನ್ನೂ ಕೆಲವು ದೇಶಗಳಲ್ಲಿ ಈಗಾಗಲೇ ಮೂರು ಮತ್ತು ನಾಲ್ಕನೇ ಕೊರೊನಾ ಅಲೆಗೆ ತತ್ತರಿಸುತ್ತಿವೆ. ಈ ಪೈಕಿ ಬ್ರೆಜಿಲ್ ಕೂಡ ಒಂದು.
ಬ್ರೆಜಿಲ್ನಲ್ಲಿ ಕಳೆದ 24 ಗಂಟೆಗಳಲ್ಲಿ 4 ಸಾವಿರಕ್ಕೂ ಹೆಚ್ಚು ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬ್ರೆಜಿಲ್ನಲ್ಲಿ ಇಷ್ಟು ಮಂದಿ ಸೋಂಕಿನಿಂದ ಒಂದೇ ದಿನಕ್ಕೆ ಸಾವನ್ನಪ್ಪಿರುವುದು ಇದೇ ಮೊದಲು. ಈ ಮೂಲಕ ಈವರೆಗೆ ಬ್ರೆಜಿಲ್ನಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 3,37,364ಕ್ಕೆ ಏರಿಕೆಯಾಗಿದೆ. ಕೊರೊನಾದಿಂದ ಹೆಚ್ಚು ಜನರು ಬಲಿಯಾದ ದೇಶಗಳ ಪೈಕಿ ಬ್ರೆಜಿಲ್ ಈಗ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಯುನೈಟೆಡ್ ಸ್ಟೇಟ್ಸ್ ಇದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರೆಜಿಲ್ನ ಎಪಿಡೆಮಿಯೊಲೊಜಿಸ್ಟ್ ಎಥೆಲ್ ಮೆಸಿಯೆಲ್.. ನಮ್ಮಿಂದ ದೇಶದ 10 ಪರ್ಸೆಂಟ್ ಜನರಿಗಷ್ಟೇ ಈವರೆಗೆ ವ್ಯಾಕ್ಸಿನ್ ನೀಡಲಾಗಿದೆ. ಇಷ್ಟು ವೇಗವಾಗಿ ಹರಡುತ್ತಿರುವ ಸೋಂಕನ್ನು ತಡೆಹಿಡಿಯಲು ಇರುವ ಏಕೈಕ ಮಾರ್ಗ ಕನಿಷ್ಟ 20 ದಿನಗಳ ಕಾಲ ಲಾಕ್ಡೌನ್ ಮಾಡುವುದು ಎಂದು ಹೇಳಿದ್ದಾರೆ.

ಅಲ್ಲದೇ ದುರಾದೃಷ್ಟಕರ ವಿಚಾರ ಎಂದರೆ ಇಲ್ಲಿನ ರಾಜಕೀಯ ನಮ್ಮನ್ನು ಇಂದು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಇಷ್ಟೊಂದು ಮಂದಿ ಸಾವನ್ನಪ್ಪಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಮರುಗಿದ್ದಾರೆ. ವರ್ಲ್ಡ್ಡೋಮೀಟರ್ ಪ್ರಕಾರ ಜಗತ್ತಿನಾದ್ಯಂತ ಅತಿಹೆಚ್ಚು ಸೋಂಕಿತರನ್ನ ಹೊಂದಿದ ದೇಶಗಳ ಪಟ್ಟಿಯಲ್ಲೂ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಇಲ್ಲಿವರೆಗೆ ಬ್ರೆಜಿಲ್ನಲ್ಲಿ 1,31,06,058 ಜನರು ಸೋಂಕಿಗೊಳಗಾಗಿದ್ದಾರೆ. ಸೋಂಕಿನಿಂದ 3,37,364 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 1,15,58,784 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ ಸಕ್ರಿಯ ಸೋಂಕಿತರ ಸಂಖ್ಯೆ 12,09,910 ಕ್ಕೆ ಏರಿದೆ.
For the first time since the start of the COVID-19 pandemic, Brazil has recorded more than 4,000 coronavirus deaths in a single day, a new grim milestone for the country as President Jair Bolsonaro continues to reject public health restrictions
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:44 pm
HK News Staffer
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
15-07-26 07:40 pm
HK News Staffer
ಉಡುಪಿ ; ಹೆದ್ದಾರಿ ಮಧ್ಯದಲ್ಲೇ ಟೇಬಲ್ ಹಾಕಿ ಟಿವಿ, ಮ...
15-07-26 07:02 pm
ಮುಕ್ಕ ಶ್ರೀನಿವಾಸ್ ಕಾಲೇಜು ಎಂಬಿಬಿಎಸ್ ವಿದ್ಯಾರ್ಥಿನ...
15-07-26 01:17 pm
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm