ಬ್ರೇಕಿಂಗ್ ನ್ಯೂಸ್
29-03-21 05:41 pm Headline Karnataka News Network ದೇಶ - ವಿದೇಶ
ನವದೆಹಲಿ, ಮಾ.29: ಆಫ್ರಿಕಾ ಮತ್ತು ಯುರೋಪ್ ಖಂಡವನ್ನು ಬೇರ್ಪಡಿಸುವ ಸುಯೆಜ್ ಕಾಲುವೆಯಲ್ಲಿ ಒಂದು ವಾರದಿಂದ ಸಿಕ್ಕಿಕೊಂಡಿದ್ದ ಬೃಹತ್ ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆದಿದೆ. 70 ಶೇಕಡಾ ತೆರವು ಕಾರ್ಯ ನಡೆದಿದೆ ಎಂದು ಸುಯೆಜ್ ಕಾಲುವೆ ಅಥಾರಿಟಿ ಅಧಿಕಾರಿಗಳು ತಿಳಿಸಿದ್ದಾರೆ.
ಎವರ್ ಗೀವನ್ ಎನ್ನುವ ಹೆಸರಿನ ಬೃಹತ್ ಕಂಟೇನರ್ ಹಡಗು ಈಜಿಪ್ಟ್ ಬಳಿಯ ಸುಯೆಜ್ ಕಾಲುವೆಯಲ್ಲಿ ವಾರದ ಹಿಂದೆ ಸಿಕ್ಕಿಕೊಂಡಿತ್ತು. ಇದರಿಂದಾಗಿ ಯುರೋಪ್ ಮತ್ತು ಮಧ್ಯ ಪ್ರಾಚ್ಯ ದೇಶಗಳಿಂದ ಸಾಗುವ ಹಡಗುಗಳ ಸಂಚಾರಕ್ಕೆ ತೊಡಕಾಗಿದ್ದು, ಭಾರೀ ವೈಪರೀತ್ಯ ಉಂಟಾಗಿತ್ತು. ಹಡಗು ಕಾಲುವೆಯಿಂದ ಸಾಗುತ್ತಿದ್ದಾಗ ಅಡಿಭಾಗದ ಮರಳಿನಲ್ಲಿ ಹೂತಿದ್ದರಿಂದ ಅಲ್ಲೇ ಉಳಿದುಕೊಂಡಿತ್ತು.
ಕಾಲುವೆಯಲ್ಲಿ ಅಡ್ಡಲಾಗಿ ಹಡಗು ನಿಂತಿದ್ದರಿಂದ ಇತರೇ ಹಡಗುಗಳ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು. ಎರಡೂ ಭಾಗದಲ್ಲಿ ಸುಮಾರು 450 ರಷ್ಟು ಹಡಗುಗಳು ಅಲ್ಲಿ ಸಿಕ್ಕಿಕೊಂಡು ಸರದಿ ನಿಂತಿದ್ದವು. ಇದರಿಂದಾಗಿ 9 ಬಿಲಿಯನ್ ಡಾಲರ್ ನಷ್ಟವಾಗಿತ್ತು. ಯುರೋಪ್ ಭಾಗದ ರಾಷ್ಟ್ರಗಳಿಂದ ಭಾರತ ಇನ್ನಿತರ ಪೂರ್ವ ರಾಷ್ಟ್ರಗಳಿಗೆ ವ್ಯಾಪಾರ ಸಂಬಂಧ ಸಾಗುವ ಹಡಗುಗಳು ಸುಯೆಜ್ ಕಾಲುವೆಯಲ್ಲಿ ಸಾಗುತ್ತವೆ.
ಆಫ್ರಿಕಾ ಮತ್ತು ಯುರೋಪ್ ಖಂಡದ ಮಧ್ಯೆ ಇರುವ ಸಪೂರ ಹಾದಿಯಾಗಿರುವ ಸುಯೆಜ್ ಕಾಲುವೆ ಈಜಿಪ್ಟ್ ದೇಶದ ವ್ಯಾಪ್ತಿಗೆ ಸೇರುತ್ತದೆ. ಅಲ್ಲಿನ ಕಾಲುವೆಯ ಮೂಲಕ ಸಾಗಿದರೆ, ಆಫ್ರಿಕಾವನ್ನು ಸುತ್ತುಹಾಕಿ ಸಾಗಬೇಕಾಗಿಲ್ಲ. ಆಫ್ರಿಕಾವನ್ನು ಸುತ್ತುಹಾಕಿ ಹಡಗು ಸಂಚರಿಸಿದರೆ, ಒಂದು ಹಡಗು ಭಾರತದಿಂದ ಇಂಗ್ಲೆಂಡ್ ತಲುಪಬೇಕಿದ್ದರೆ 34 ದಿನ(25 ಸಾವಿರ ಕಿಮೀ) ಬೇಕಾಗುತ್ತದೆ. ಸುಯೆಜ್ ಕಾಲುವೆಯಲ್ಲಿ ಸಾಗಿದರೆ 25 ದಿನಗಳಲ್ಲಿ(18 ಸಾವಿರ ಕಿಮೀ) ತಲುಪಬಹುದು. ಹೀಗಾಗಿ ಸರಕು ಸಾಗಾಟದ ಹಡಗುಗಳು ಹೆಚ್ಚಾಗಿ ಪೂರ್ವದಿಂದ ಪಶ್ಚಿಮ ರಾಷ್ಟ್ರಗಳಿಗೆ ತೆರಳಲು ಸುಯೆಜ್ ಕಾಲುವೆಯನ್ನೇ ಬಳಸುತ್ತವೆ.
The stern of a huge container ship that has been wedged across the Suez Canal for almost a week has been freed from the shoreline, officials say.
24-03-25 11:04 pm
HK News Desk
BJP, Phone Tapping, Karnataka, Ashok: ಹನಿಟ್ರ್...
24-03-25 10:42 pm
Big boss Vinay Gowda, Rajat Arrest, Bangalore...
24-03-25 09:24 pm
DK Shivakumar, Muslim, BJP: ಮುಸ್ಲಿಮರಿಗೆ ಮೀಸಲು...
24-03-25 07:23 pm
Kannada Bigg Boss, Rajat, Vinay Gowda, FIR: ರ...
24-03-25 02:36 pm
24-03-25 03:54 pm
HK News Desk
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
24-03-25 03:56 pm
Mangalore Correspondent
Mangalore, Swimming pool, Death, Madikeri: ಚಿ...
24-03-25 01:35 pm
Mangalore Jyotiraj, Kotiraj: ಕಾರಿಂಜೇಶ್ವರ ಬೆಟ...
23-03-25 10:44 pm
MP Govinda Karajola, Mangalore, Honey Trap: ಸ...
22-03-25 06:48 pm
Mangalore, BJP protest, MLC Bharathi Shetty,...
22-03-25 05:45 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm