ಬ್ರೇಕಿಂಗ್ ನ್ಯೂಸ್
13-03-21 12:54 pm Headline Karnataka News Network ದೇಶ - ವಿದೇಶ
ನವದೆಹಲಿ, ಮಾರ್ಚ್ 13: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) 2021ರ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಆಗಸ್ಟ್ 1ರಂದು ನೀಟ್ 2021 ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ. ಒಟ್ಟು 11 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ.
ಕಳೆದ ವರ್ಷದಂತೆಯೇ ಪೆನ್ ಮತ್ತು ಪತ್ರಿಕೆ ಬಳಸಿಯೇ ಆಫ್ಲೈನ್ ಮಾದರಿಯಲ್ಲಿ ಪರೀಕ್ಷೆ ನಡೆಸುವ ಪ್ರಸ್ತಾಪದಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. 'ನೀಟ್ (ಯುಜಿ)ಅನ್ನು ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ 11 ಭಾಷೆಗಳಲ್ಲಿ ಪೆನ್ ಮತ್ತು ಪತ್ರಿಕೆ ಸ್ವರೂಪದಲ್ಲಿ ನಡೆಸಲಾಗುವುದು' ಎಂದು ಎನ್ಟಿಎ ಹೇಳಿಕೆ ತಿಳಿಸಿದೆ.
ಪರೀಕ್ಷೆ ಸಂಬಂಧಿಸಿದಂತೆ ಸಿಲಬಸ್, ವಯೋಮಾನ ಅರ್ಹತೆ ವಿವರ, ಮೀಸಲಾತಿ, ಸೀಟುಗಳು, ಶುಲ್ಕ, ಪರೀಕ್ಷೆ ನಡೆಯುವ ನಗರಗಳು, ರಾಜ್ಯವಾರು ಕೋಡ್ ಮುಂತಾದ ವಿವರಗಳು ಪರೀಕ್ಷೆಯ ಅರ್ಜಿ ಫಾರ್ಮ್ಗಳ ಸಲ್ಲಿಕೆ ಆರಂಭವಾದ ಬಳಿಕ ನೀಟ್ ವೆಬ್ಸೈಟ್ನಲ್ಲಿ ಲಭ್ಯವಾಗಲಿವೆ ಎಂದು ಹೇಳಿದೆ.
ಯಾವ ಭಾಷೆಗಳಲ್ಲಿ ಪರೀಕ್ಷೆ?
ಇಂಗ್ಲಿಷ್, ಹಿಂದಿ, ಕನ್ನಡ, ತೆಲುಗು, ತಮಿಳು, ಮರಾಠಿ, ಬಂಗಾಳಿ, ಗುಜರಾತಿ, ಒಡಿಯಾ, ಉರ್ದು ಮತ್ತು ಅಸ್ಸಾಮಿ ಭಾಷೆಗಳಲ್ಲಿ ಈ ಬಾರಿಯ ವೈದ್ಯಕೀಯ ಕೋರ್ಸ್ಗಳ ಪ್ರವೇಶ ಪರೀಕ್ಷೆ ನಡೆಯಲಿದೆ. ಆಗಸ್ಟ್ 1ರಂದು ಒಂದೇ ಅವಧಿಯಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗುವುದು ಎಂದು ಎನ್ಟಿಎ ಮಾಹಿತಿ ನೀಡಿದೆ.
ಎರಡು ತಿಂಗಳು ವಿಳಂಬ
ಎನ್ಟಿಎದ ಪ್ರಕಟಣೆಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ. ಸಾಮಾನ್ಯವಾಗಿ ಜೂನ್ನಲ್ಲಿ ನೀಟ್ ಪರೀಕ್ಷೆಗಳು ನಡೆಯುತ್ತಿದ್ದವು. ಕೋವಿಡ್ ಕಾರಣದಿಂದಾಗಿ 2020ರಲ್ಲಿ ಒಂದು ತಿಂಗಳು ತಡವಾಗಿ, ಜುಲೈನಲ್ಲಿ ನಡೆದಿತ್ತು. ಆದರೆ ಈ ವರ್ಷ ಸನ್ನಿವೇಶಗಳು ಬದಲಾಗಿದ್ದರೂ ಮತ್ತಷ್ಟು ತಡವಾಗಿ ಪರೀಕ್ಷೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
NEET (UG) 2021 will be conducted in 11 languages, including Hindi and English through Pen and Paper mode on August 1, 2021 (Sunday).
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 03:33 pm
Mangalore Correspondent
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm