ಬ್ರೇಕಿಂಗ್ ನ್ಯೂಸ್
10-03-21 02:03 pm Headline Karnataka News Network ದೇಶ - ವಿದೇಶ
ಡೆಹ್ರಾಡೂನ್, ಮಾ.10: ತ್ರಿವೇಂದ್ರ ಸಿಂಗ್ ರಾವತ್ ರಾಜಿನಾಮೆಯಿಂದ ತೆರವಾಗಿದ್ದ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಂಸದ ತೀರತ್ ಸಿಂಗ್ ರಾವತ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿದೆ.
2013ರಿಂದ 2015ರ ವರೆಗೆ ಉತ್ತರಾಖಂಡದ ಬಿಜೆಪಿ ಅಧ್ಯಕ್ಷರಾಗಿದ್ದ ತೀರತ್ ಸಿಂಗ್ ಈ ಹಿಂದೆ ಶಾಸಕರಾಗಿದ್ದರು. 2019ರಲ್ಲಿ ಗರ್ವಾಲ್ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ರಾಜ್ಯದ ಸಚಿವ ಧನ್ ಸಿಂಗ್ ರಾವತ್, ಸತ್ಪಾಲ್ ಮಹಾರಾಜ್, ಭಗತ್ ಸಿಂಗ್ ಕೋಶ್ರಿಯಾಲ್ ಸೇರಿದಂತೆ ಡಜನ್ ಗೂ ಹೆಚ್ಚು ಮಂದಿ ಆಕಾಂಕ್ಷಿಯಾಗಿದ್ದರು.
ಬಿಜೆಪಿ ದೆಹಲಿ ಮಟ್ಟದ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ತೀರತ್ ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ. ತೀರತ್, ಇಂದು ಸಂಜೆ ನಾಲ್ಕು ಗಂಟೆಗೆ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 69 ವರ್ಷದ ಹಿರಿಯ ಸಚಿವರಾಗಿರುವ ಸತ್ಪಾಲ್ ಮಹಾರಾಜ್, ಕಾಂಗ್ರೆಸಿನಲ್ಲಿದ್ದು 2014ರಲ್ಲಿ ಹರೀಶ್ ರಾವತ್ ಮುಖ್ಯಮಂತ್ರಿಯಾಗಿದ್ದಕ್ಕೆ ಮುನಿಸಿಕೊಂಡು ಬಿಜೆಪಿ ಸೇರಿದ್ದರು. ಈ ಬಾರಿ ಸಿಎಂ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯೂ ಆಗಿದ್ದರು. ಆಧ್ಯಾತ್ಮ ಗುರುವಿನ ನೆಲೆಯಲ್ಲಿ ಉತ್ತರ ಭಾರತದಲ್ಲಿ ಭಾರೀ ಪ್ರಸಿದ್ಧಿಯನ್ನೂ ಹೊಂದಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್ ಅವರಿಗೆ ಮಣೆ ಹಾಕದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಸ್ಥಾನ ನೀಡಿದೆ.
Read: ಉತ್ತರಾಖಂಡ ಬಿಜೆಪಿ ಸರಕಾರದಲ್ಲಿ ಸಿಎಂ ಬದಲಾವಣೆ ಪರ್ವ ; ರಾವತ್ ರಾಜಿನಾಮೆ
Trivendra Singh Rawat resigned as the Uttarakhand chief minister on Tuesday amid calls for a change in leadership. BJP legislature party in a meeting in Dehradun today picked Tirath Singh Rawat to be his successor.
28-03-25 10:47 pm
Bangalore Correspondent
Minister Rajanna, honeytrap, Son, Murder atte...
28-03-25 12:19 pm
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
28-03-25 04:15 pm
HK News Desk
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
Uber, Ola, Sahkar Taxi: ಓಲಾ, ಉಬರ್ ರೀತಿಯಲ್ಲೇ ಸ...
27-03-25 04:07 pm
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
28-03-25 11:16 pm
Udupi Correspondent
Mangalore University, Rajendra Kumar, Rohan M...
28-03-25 07:38 pm
Cow Transport, Kaikamba, Bajrang Dal, Mangalo...
28-03-25 11:52 am
Mangalore Jail, Mobile Jammer: ಎತ್ತಿಗೆ ಜ್ವರ ಬ...
27-03-25 08:45 pm
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
28-03-25 09:25 pm
Mangalore Correspondent
Ccb Mangalore, Drugs, Charas, Crime: ಸಿಸಿಬಿ ಪ...
28-03-25 08:37 pm
Bangalore Murder, Techie: ಮುದ್ದಾದ ಪತ್ನಿಯನ್ನು...
28-03-25 06:12 pm
Kodagu Murder, Four Killed: ಕೊಡಗು ; ಅತ್ತೆ - ಮ...
28-03-25 05:41 pm
CISF Arrest, Robbery, Kolkata: ಐಟಿ ಅಧಿಕಾರಿಗಳ...
27-03-25 01:37 pm