ಬ್ರೇಕಿಂಗ್ ನ್ಯೂಸ್
04-03-21 12:01 pm Headline Karnataka News Network ದೇಶ - ವಿದೇಶ
ಕಾಸರಗೋಡು, ಮಾ.4 : ಅಲೆಗಳ ಅಬ್ಬರಕ್ಕೆ ಸಿಲುಕಿದ ಮೀನುಗಾರಿಕಾ ಬೋಟ್ ದುರಂತಕ್ಕೀಡಾಗಿ ಐವರು ಮೀನುಗಾರರು ಅಪಾಯದಲ್ಲಿ ಸಿಲುಕಿದ ಘಟನೆ ಬೇಕಲದ ಬಳಿ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಅವರನ್ನು ರಕ್ಷಿಸಿದ್ದಾರೆ.
ಬುಧವಾರ ರಾತ್ರಿ ಘಟನೆ ನಡೆದಿದ್ದು, ಕಾಸರಗೋಡು ತೀರದಿಂದ ಹತ್ತು ನಾಟಿಕಲ್ ಮೈಲ್ ದೂರದಲ್ಲಿ ಸಮುದ್ರ ಮಧ್ಯೆ ಬೋಟ್ ಅಲೆಗಳ ಅಬ್ಬರಕ್ಕೆ ಮಗುಚಿ ಇಬ್ಭಾಗಗೊಂಡಿದ್ದು, ಬೋಟಿನ ಒಂದು ಭಾಗವನ್ನು ಮೀನುಗಾರರು ಹಿಡಿದುಕೊಂಡು ಜೀವನ್ಮರಣ ಹೋರಾಟ ನಡೆಸಿದ್ದಾರೆ.
ಈ ಬಗ್ಗೆ ಕರಾವಳಿ ರಕ್ಷಣಾ ಸಿಬಂದಿ ಮಾಹಿತಿ ಪಡೆದು ದೌಡಾಯಿಸಿದ್ದು ಐವರನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ. ಎರಡು ದಿನಗಳ ಹಿಂದೆ ನೀಲೇಶ್ವರ ಆಯಿತ್ತಲದಿಂದ ಮರಿಯ ಎಂಬ ಹೆಸರಿನ ಈ ಬೋಟ್ ಮೀನುಗಾರಿಕೆಗೆ ತೆರಳಿದ್ದು, ಬೋಟ್ ನಲ್ಲಿದ್ದವರು ತಿರುವನಂತಪುರ ನಿವಾಸಿಗಳೆಂದು ತಿಳಿದುಬಂದಿದೆ.
ದುರಂತಕ್ಕೀಡಾದ ಬಳಿಕ ಮೀನುಗಾರರು ಎರಡು ಗಂಟೆಗಳ ಕಾಲ ಸಮುದ್ರ ಮಧ್ಯೆ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಬೋಟಿನಲ್ಲಿದ್ದ ಶ್ಯಾಮ್ (18), ಜಿಮ್ಮಿ (21), ಕುಮಾರ್ (43), ಈಶ್ವರ್ (58), ದಾಯಿ ರೋಸ್ (37) ಅವರನ್ನು ರಕ್ಷಿಸಿ ತಡರಾತ್ರಿ ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.
After a fishing boat capsized due to strong waves, five fishermen were facing danger to their lives at deep-sea at Bekal in Kasargod.
28-03-25 12:19 pm
Bangalore Correspondent
Yatnal expulsion, Ramesh Jarkiholi: ಯತ್ನಾಳ್...
27-03-25 06:41 pm
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
28-03-25 04:15 pm
HK News Desk
Elon Musk, Fraud India: ವಿಶ್ವದ ನಂಬರ್ 1 ಶ್ರೀಮಂ...
28-03-25 01:38 pm
Vladimir Putin, Zelensky: ರಷ್ಯಾ ಅಧ್ಯಕ್ಷ ಪುಟಿನ...
28-03-25 01:07 pm
Uber, Ola, Sahkar Taxi: ಓಲಾ, ಉಬರ್ ರೀತಿಯಲ್ಲೇ ಸ...
27-03-25 04:07 pm
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
28-03-25 11:52 am
Mangalore Correspondent
Mangalore Jail, Mobile Jammer: ಎತ್ತಿಗೆ ಜ್ವರ ಬ...
27-03-25 08:45 pm
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm