ಬ್ರೇಕಿಂಗ್ ನ್ಯೂಸ್
19-08-20 03:04 pm Headline Karnataka News Network ದೇಶ - ವಿದೇಶ
ಮಾಲಿ, ಆ.19: ಮಾಲಿಯಲ್ಲಿ ಬುಧವಾರ ಕ್ಷಿಪ್ರ ಕ್ರಾಂತಿ ನಡೆದು ಬಂಡುಕೋರ ಪಡೆಗಳು ಅಧ್ಯಕ್ಷರನ್ನು ಸೆರೆ ಹಿಡಿದಿವೆ. ಇದರ ಬೆನ್ನಲ್ಲೇ ದೇಶದಲ್ಲಿ ರಕ್ತಪಾತ ತಪ್ಪಿಸುವ ಸಲುವಾಗಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಇಬ್ರಾಹೀಂ ಬೌಬಕ್ಕರ್ ಕೀತಾ ಪ್ರಕಟಿಸಿದ್ದಾರೆ.
ಬಂಡುಕೋರ ಸೈನಿಕರು ಅಧ್ಯಕ್ಷ ಕೀತಾ ಹಾಗೂ ಪ್ರಧಾನಿ ಬೌಬೌ ಸಿಸ್ಸೆ ಅವರನ್ನು ಮಂಗಳವಾರ ಮಧ್ಯಾಹ್ನ ಸೆರೆ ಹಿಡಿದಿದ್ದರು. ಈ ಮೂಲಕ ಪಶ್ಚಿಮ ಆಫ್ರಿಕಾ ದೇಶದಲ್ಲಿ ಒಂದು ತಿಂಗಳ ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದೆ. ಬಂಡುಕೋರ ಸೈನಿಕರು ಸೆರೆ ಹಿಡಿದ ಇಬ್ಬರು ಮುಖಂಡರನ್ನು ರಾಜಧಾನಿ ಬಮಾಕೋ ಬಳಿಯ ಕಾತಿ ನಗರದಲ್ಲಿರುವ ಸೇನಾ ನೆಲೆಗೆ ಒಯ್ಯಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಬಂಡುಕೋರರು ಸೇನಾ ನೆಲೆಯನ್ನು ಮಂಗಳವಾರ ವಶಪಡಿಸಿಕೊಂಡಿದ್ದರು.
ಅಧ್ಯಕ್ಷರ ಬಂಧನವನ್ನು ಸಂಭ್ರಮಿಸಿದ ಜನರು ನಗರದ ಕೇಂದ್ರಭಾಗದಲ್ಲಿ ಜಮಾಯಿಸಿ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದರು. ಇದಕ್ಕೂ ಮುನ್ನ ಬಂಡುಕೋರ ಸೈನಿಕರು 75 ವರ್ಷ ವಯಸ್ಸಿನ ಕೀತಾ ಅವರನ್ನು ಅಧಿಕೃತ ಬಂಗಲೆಯಿಂದ ಬಂಧಿಸಿದ್ದರು.
ಸಮಾಧಾನಚಿತ್ತದಿಂದ ಇದ್ದಂತೆ ಕಂಡುಬಂದ ಕೀತಾ ಮಂಗಳವಾರ ಮಧ್ಯರಾತ್ರಿ ಸರ್ಕಾರಿ ಟೆಲಿವಿಷನ್ ಮುಂದೆ ಹಾಜರಾಗಿ ಸರ್ಕಾರ ಹಾಗೂ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜಿಸಿರುವುದನ್ನು ಪ್ರಕಟಿಸಿದರು. ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡದೇ ಅನ್ಯ ಮಾರ್ಗವಿಲ್ಲ ಎಂದು ಘೋಷಿಸಿದರು.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm