ಬ್ರೇಕಿಂಗ್ ನ್ಯೂಸ್
22-02-21 03:19 pm Headline Karnataka News Network ದೇಶ - ವಿದೇಶ
ಚೆನ್ನೈ, ಫೆ.22: ಒಂದೇ ತಿಂಗಳ ಅಂತರದಲ್ಲಿ ಐವರು ಕಾಂಗ್ರೆಸ್ ಶಾಸಕರು ಮತ್ತು ಒಬ್ಬ ಡಿಎಂಕೆ ಶಾಸಕರ ರಾಜಿನಾಮೆಯಿಂದಾಗಿ ಅಲ್ಪಮತಕ್ಕೆ ಕುಸಿದಿದ್ದ ಪುದುಚೇರಿಯ ಕಾಂಗ್ರೆಸ್ ಸರಕಾರ ಇಂದು ಪತನಗೊಂಡಿದೆ.
ಸೋಮವಾರ ವಿಶ್ವಾಸ ಮತ ಯಾಚಿಸುತ್ತೇನೆ ಎಂದಿದ್ದ ಸಿಎಂ ನಾರಾಯಣ ಸ್ವಾಮಿ, ವಿಧಾನಸಭೆಯಲ್ಲಿ ವಿಶ್ವಾಸ ಮತ ಗಳಿಸಲು ವಿಫಲರಾಗಿದ್ದಾರೆ. ಹೀಗಾಗಿ ರಾಜ್ಯಪಾಲರನ್ನು ಭೇಟಿಯಾಗಿ ಸಿಎಂ ಮತ್ತು ತಮ್ಮ ಕ್ಯಾಬಿನೆಟ್ ಸದಸ್ಯರ ರಾಜಿನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ.
ವಿಶ್ವಾಸ ಮತ ಯಾಚನೆಗೂ ಮುನ್ನ ವಿಧಾನಸಭೆಯಲ್ಲಿ ಕೊನೆಯ ಭಾಷಣ ಮಾಡಿದ ನಾರಾಯಣ ಸ್ವಾಮಿ, ಕೇಂದ್ರದ ಬಿಜೆಪಿ ಸರಕಾರ ಮತ್ತು ಪುದುಚೇರಿಯಲ್ಲಿ ಈ ಹಿಂದೆ ಲೆಫ್ಟಿನಂಟ್ ಗವರ್ನರ್ ಆಗಿದ್ದ ಕಿರಣ್ ಬೇಡಿಯ ವಿರುದ್ಧ ಕಿಡಿಕಾರಿದರು. ಬಿಜೆಪಿ ಸರಕಾರ ಹಲವು ರಾಜ್ಯಗಳಲ್ಲಿ ಶಾಸಕರನ್ನು ಖರೀದಿಸಿ, ಅಧಿಕಾರ ಗಿಟ್ಟಿಸಿಕೊಳ್ಳಲು ತಂತ್ರ ಹೂಡಿದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಆಗಿರುವ ಕೆಲಸ ಈಗ ಪುದುಚೇರಿಯಲ್ಲೂ ಮರುಕಳಿಸಿದೆ. ಆದರೆ, ಪುದುಚೇರಿಯ ಜನ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಆರು ಮಂದಿ ಶಾಸಕರ ರಾಜಿನಾಮೆಯಿಂದಾಗಿ ಕಾಂಗ್ರೆಸ್ – ಡಿಎಂಕೆ ನೇತೃತ್ವದ ಸರಕಾರ ಅಲ್ಪಮತಕ್ಕೆ ಕುಸಿದಿತ್ತು. 33 ಸ್ಥಾನಬಲದ ವಿಧಾನಸಭೆಯಲ್ಲಿ 11 ಸ್ಥಾನಗಳನ್ನಷ್ಟೆ ಆಡಳಿತಾರೂಢ ಕಾಂಗ್ರೆಸ್ ಉಳಿಸಿಕೊಂಡಿತ್ತು. ಹೀಗಾಗಿ ಬಹುತೇಕ ಸರಕಾರ ಪತನಗೊಳ್ಳುವುದು ಖಾತ್ರಿಯಾಗಿತ್ತು. ಈ ನಡುವೆ ಪ್ರತಿಪಕ್ಷಗಳು ಕಾಂಗ್ರೆಸ್ ಸರಕಾರಕ್ಕೆ ಸ್ಥಾನ ಬಲ ಇಲ್ಲದ ಕಾರಣಕ್ಕೆ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಒತ್ತಾಯ ಮಾಡಿತ್ತು. ಹೀಗಿದ್ದರೂ, ವಿಶ್ವಾಸ ಮತ ಯಾಚನೆಯ ಕಸರತ್ತಿಗೆ ಇಳಿದಿದ್ದ ಕಾಂಗ್ರೆಸ್ ಮುಖಭಂಗ ಅನುಭವಿಸಿದ್ದು, ಸೋಲು ಒಪ್ಪಿಕೊಂಡಿದೆ.
ಇದೇ ವೇಳೆ, ಕಾಂಗ್ರೆಸ್ ಸರಕಾರದ ಪತನದ ವಿಚಾರ ಬಿಜೆಪಿ ವಿರುದ್ಧ ಟೀಕೆ ಕೇಳಿಬರುವಂತಾಗಿದೆ. ತಮಿಳುನಾಡು ರಾಜಕೀಯ ಪ್ರವೇಶದ ಮೊದಲ ಹಂತವಾಗಿ ಪುದುಚೇರಿ ಸರಕಾರವನ್ನು ಬಿಜೆಪಿ ಉರುಳಿಸಿದೆ ಎಂದು ಹಲವರು ಟೀಕಿಸಿದ್ದಾರೆ. ಈಗಾಗ್ಲೇ ಕಾಂಗ್ರೆಸಿನಿಂದ ರಾಜಿನಾಮೆ ನೀಡಿ ಹೊರಬಂದಿರುವ ಶಾಸಕರು ಬಿಜೆಪಿ ಸೇರಿದ್ದಾರೆ.
The Congress government in Puducherry collapsed today after losing its majority and Chief Minister V Narayanasamy resigned. After two exits on Sunday, the government's numbers had dropped to 12 MLAs in the house where the majority mark is 14.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm