ಬ್ರೇಕಿಂಗ್ ನ್ಯೂಸ್
18-02-21 10:42 am Headline Karnataka News Network ದೇಶ - ವಿದೇಶ
ನವದೆಹಲಿ, ಫೆಬ್ರವರಿ 18: ಬ್ರಿಟನ್ ರೂಪಾಂತರದ ಬಳಿಕ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ನ ರೂಪಾಂತರಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೊಸ ನಿಯಮವು ಬ್ರಿಟನ್, ಯುರೋಪ್ ಮತ್ತು ಮಧ್ಯಪ್ರಾಚ್ಯದಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಹೊರತುಪಡಿಸಿ ಉಳಿದವರಿಗೆ ಅನ್ವಯವಾಗಲಿದೆ. ಬ್ರಿಟನ್, ಯುರೋಪ್ ಮತ್ತು ಮಧ್ಯಪ್ರಾಚ್ಯದಿಂದ ಹೊರಡುವ ವಿಮಾನಗಳ ಮೂಲಕ ಬರುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಹೊರತುಪಡಿಸಿ ಉಳಿದವರು ತಮ್ಮ ನಿಗದಿತ ಪ್ರಯಾಣಕ್ಕೂ ಮುನ್ನ ಏರ್ ಸುವಿಧಾ ಪೋರ್ಟಲ್ನಲ್ಲಿ ಸ್ವಯಂ ಘೋಷಣೆ ಸಲ್ಲಿಸಬೇಕು.
ಕುಟುಂಬದಲ್ಲಿ ಸಾವು ಸಂಭವಿಸಿದ ಕಾರಣ ಭಾರತಕ್ಕೆ ತುರ್ತಾಗಿ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಕೋವಿಡ್ 19 ಆರ್ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಅಪ್ಲೋಡ್ ಮಾಡಬೇಕು. ಇದರಿಂದ ವಿನಾಯಿತಿ ಬೇಕಿದ್ದಲ್ಲಿ ವಿಮಾನ ಏರುವ ಕನಿಷ್ಠ 72 ಗಂಟೆಗೂ ಮುನ್ನ ನ್ಯೂಡೆಲ್ಲಿ ಏರ್ಪೋರ್ಟ್ ವೆಬ್ಸೈಟ್ನಲ್ಲಿ ಮನವಿ ಸಲ್ಲಿಸಬೇಕು. ಪ್ರಯಾಣಕ್ಕೂ 72 ಗಂಟೆಗಳ ಒಳಗೆ ಈ ಪರೀಕ್ಷೆ ನಡೆಸಬೇಕು. ಪ್ರತಿ ಪ್ರಯಾಣಿಕರೂ ವರದಿಯ ಅಧಿಕೃತತೆ ಬಗ್ಗೆ ಘೋಷಣೆ ಸಲ್ಲಿಸಬೇಕು.
ಲಕ್ಷಣವಿಲ್ಲದಿದ್ದರೆ ಮಾತ್ರ ಪ್ರಯಾಣ;
ವಿಮಾನ ಏರುವ ವೇಳೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಯಾವುದೇ ರೋಗ ಲಕ್ಷಣಗಳಿಲ್ಲದ ಪ್ರಯಾಣಿಕರನ್ನು ಮಾತ್ರ ಬಿಡಲಾಗುತ್ತದೆ. ಸಮುದ್ರ ಮಾರ್ಗದಲ್ಲಿ ಬಂದರುಗಳಿಗೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಕೂಡ ಇದೇ ಶಿಷ್ಟಾಚಾರಗಳನ್ನು ಅನುಸರಿಸಬೇಕು. ಆದರೆ ಅಂತಹ ಪ್ರಯಾಣಿಕರಿಗೆ ಆನ್ಲೈನ್ ನೋಂದಣಿಯ ಸೌಲಭ್ಯ ಸದ್ಯಕ್ಕೆ ಲಭ್ಯವಿಲ್ಲ.
6-8 ಗಂಟೆ ಸಮಯ ನೀಡಬೇಕು;
ಸಂಪರ್ಕ ವಿಮಾನಗಳಿಂದ ಬರುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಭಾರತದ ಪ್ರತಿ ವಿಮಾನ ನಿಲ್ದಾಣಕ್ಕೂ ಪ್ರಯಾಣಕ್ಕೆ ಕನಿಷ್ಠ 6-8 ಗಂಟೆ ಅಗತ್ಯ ಎಂಬುದನ್ನು ಪ್ರಯಾಣಿಕರಿಗೆ ತಿಳಿಸುತ್ತಿರಬೇಕು. ಸಂಪರ್ಕ ವಿಮಾನಗಳ ಟಿಕೆಟ್ ಬುಕಿಂಗ್ ಸಂದರ್ಭದಿಂದಲೂ ತಪಾಸಣೆ ಹಾಗೂ ಇತರೆ ಪ್ರಕ್ರಿಯೆಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ ಎಂಬ ಮಾಹಿತಿ ನೀಡಬೇಕು.
ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಮೂಲಕ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಗಳು ಗುರುತಿಸಿ ಅವರನ್ನು ವಿಮಾನದಲ್ಲಿ ಪ್ರತ್ಯೇಕಿಸಬೇಕು. ಬ್ರಿಟನ್, ಯುರೋಪ್ ಹಾಗೂ ಮಧ್ಯಪ್ರಾಚ್ಯದಿಂದ ಹೊರಡುವ ವಿಮಾನಗಳಲ್ಲಿ ಬಂದು ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಇಳಿಯುವ ರಾಜ್ಯವಾರು ಪ್ರಯಾಣಿಕರ ಬಗ್ಗೆ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಲಾಗುತ್ತದೆ.
ಹೊರಗೆ ಹೋಗಲು ಅನುಮತಿ ಅಗತ್ಯ;
14 ದಿನಕ್ಕಿಂತ ಕಡಿಮೆ ಅವಧಿ ಉಳಿದುಕೊಳ್ಳುವ ಅಂತಾರಾಷ್ಟ್ರೀಯ ಪ್ರಯಾಣಿಕರು, ನೆಗೆಟಿವ್ ಪತ್ತೆಯಾದವರು, ಯಾವುದೇ ರೋಗ ಲಕ್ಷಣಗಳಿಲ್ಲದವರು ಎಲ್ಲ ಪ್ರಕ್ರಿಯೆಗಳಿಗೂ ಒಳಪಡಬೇಕು. ಭಾರತದಿಂದ ಹೊರಕ್ಕೆ ಪ್ರಯಾಣಿಸಲು ತಮ್ಮ ಜಿಲ್ಲಾ/ರಾಜ್ಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು.
Ministry of Civil Aviation today announced updated guidelines for the international passengers coming to India in view of the rising cases mutant strain of covid-19 in India.
23-03-25 06:02 pm
Bangalore Correspondent
Karnataka Bandh Live, Bangalore, Mangalore Ud...
22-03-25 12:28 pm
Koppal, Sslc Exams, Mother death: SSLC ಪರೀಕ್ಷ...
21-03-25 10:41 pm
Sameer MD Video Delete Sowjanya, YouTube: ಸೌಜ...
21-03-25 10:35 pm
DK Shivakumar, BJP Muniratna, Honeytrap Case:...
21-03-25 09:21 pm
23-03-25 02:40 pm
HK News Desk
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
22-03-25 06:48 pm
Mangalore Correspondent
Mangalore, BJP protest, MLC Bharathi Shetty,...
22-03-25 05:45 pm
Sullia, Mangalore, Rabies death: ನಾಯಿ ಮರಿ ಕಚ್...
22-03-25 03:15 pm
Belthangady, Baby News, Mangalore: ಬೆಳ್ತಂಗಡಿ...
22-03-25 01:07 pm
Puttur, Mla Ashok Rai, BJP MLA, Mangalore: ಐದ...
20-03-25 02:05 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm