ಬ್ರೇಕಿಂಗ್ ನ್ಯೂಸ್
16-02-21 07:40 pm Headline Karnataka News Network ದೇಶ - ವಿದೇಶ
ನವದೆಹಲಿ, ಫೆ.16: ಭಾರತ- ಚೀನಾ ಗಡಿಯಲ್ಲಿ ಕಳೆದ ಹತ್ತು ತಿಂಗಳಲ್ಲಿ ಉದ್ಭವ ಆಗಿದ್ದ ಉದ್ವಿಗ್ನ ಸ್ಥಿತಿ ಸಂಪೂರ್ಣ ಶಮನಗೊಳ್ಳುವ ಮುನ್ಸೂಚನೆ ಕಂಡುಬಂದಿದೆ. ಕಾಶ್ಮೀರದ ಪೂರ್ವ ಲಡಾಖ್ ಪ್ರಾಂತ್ಯದ 150 ಕಿಮೀ ಉದ್ದಕ್ಕೆ ನಿಯೋಜನೆಗೊಂಡಿದ್ದ ಚೀನಾ ಪಡೆಗಳು ದಿಢೀರ್ ಆಗಿ ಕಾಲು ಹಿಂದಕ್ಕೆ ಇಟ್ಟಿರುವುದನ್ನು ಭಾರತೀಯ ಸೇನಾ ಪಡೆ ದೃಢಪಡಿಸಿದೆ.
ಕಳೆದ ಎಪ್ರಿಲ್ ತಿಂಗಳಿಂದ ಬೀಡುಬಿಟ್ಟಿದ್ದ ಚೀನಾ ಸೇನಾ ಪಡೆ ಪಾಂಗೋಂಗ್ ತ್ಸೋ ನದಿಯ ಬದಿಯಿಂದ ಹಿಂದಕ್ಕೆ ಸರಿದಿದೆ. ಅಲ್ಲದೆ, ಅಲ್ಲಿ ರೆಡಿ ಮಾಡಿದ್ದ ಹೆಲಿಪ್ಯಾಡ್, ಯುದ್ಧ ಟ್ಯಾಂಕರ್ ಗಳು, ಜೆಟ್ಟಿ, ಟೆಂಟ್ ಗಳನ್ನು ತೆರವು ಮಾಡಿದ್ದು, ಫಿಂಗರ್ ಪಾಯಿಂಟ್ 4 ಮತ್ತು 5ರಲ್ಲಿ ಸೇನಾ ಪಡೆಯನ್ನು ತೆರವು ಮಾಡಲಾಗಿದೆ.
ಪಾಂಗೊಂಗ್ ಸರೋವರದ 134 ಕಿಮೀ ಉದ್ದಕ್ಕೂ ಚೀನಾ ಪಡೆ ನಿಯೋಜನೆಗೊಂಡಿತ್ತು. ಎಂಟು ಗಂಟೆಗಳ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಚೀನಾ ಪಡೆ ತನ್ನ ಜಾಗ ತೆರವು ಮಾಡಿದೆ ಎಂದು ಅಧಿಕಾರಿಯೊಬ್ಬರು ನ್ಯೂಸ್ 18 ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಕಳೆದ ವಾರ ಚೀನಾ- ಭಾರತ ನಡುವೆ ಏರ್ಪಟ್ಟ ಸಂಧಾನದ ಫಲವಾಗಿ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಪಡೆದಿದೆದ ಎನ್ನಲಾಗುತ್ತಿದೆ. ಕಳೆದ ಹತ್ತು ತಿಂಗಳಲ್ಲಿ ಗಡಿಭಾಗದಲ್ಲಿ ಮಾಡಿಕೊಂಡಿದ್ದ ಟೆಂಟ್, ಇನ್ನಿತರ ತಾತ್ಕಾಲಿಕ ಕಟ್ಟಡಗಳನ್ನು ತೆರವು ಮಾಡಲಾಗುತ್ತಿದೆ. ಲಾರಿಗಳಲ್ಲಿ ತುಂಬಿಸಿ ಹಿಂದಕ್ಕೆ ಒಯ್ಯುತ್ತಿರುವ ಫೋಟೋಗಳು ಲಭ್ಯವಾಗಿದೆ. ಕ್ರೇನ್ ಮೂಲಕ ಶಸ್ತ್ರಾಸ್ತ್ರಗಳನ್ನು ಕಂಟೇನರ್ ಲಾರಿಗಳಿಗೆ ತುಂಬಿಸುವುದು ಕಂಡುಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಉಭಯ ರಾಷ್ಟ್ರಗಳ ಮಾತುಕತೆ ಪ್ರಕಾರ, ಚೀನಾ ಸೇನೆ ಫಿಂಗರ್ ಪಾಯಿಂಟ್ 8ಕ್ಕೆ ಹಿಂದಿರುಗಬೇಕಿದ್ದರೆ, ಭಾರತದ ಸೇನೆ ಫಿಂಗರ್ ಪಾಯಿಂಟ್ 3ಕ್ಕೆ ಹಿಂದೆ ಬರಬೇಕಿದೆ. ಫೆ.10ರಂದು ಈ ಬಗ್ಗೆ ಒಪ್ಪಂದ ಏರ್ಪಟ್ಟಿದ್ದು, ಅದರಂತೆ ಎರಡೂ ಕಡೆಗಳಲ್ಲಿ ನಿಯೋಜನೆಗೊಂಡಿದ್ದ 100ಕ್ಕೂ ಹೆಚ್ಚು ಯುದ್ಧ ಟ್ಯಾಂಕರ್ ಗಳನ್ನು ಹಿಂದಕ್ಕೆ ಕರೆಸಲಾಗುತ್ತಿದೆ. ಪರ್ವತ ಶಿಖರಗಳ ಪ್ರದೇಶ ಮಾನವ ರಹಿತವಾಗಿದ್ದು, ಅಲ್ಲೀಗ ರಾಡಾರ್ ಮತ್ತು ಡ್ರೋಣ್ ಮೂಲಕ ನಿಗಾ ವಹಿಸಲಾಗುತ್ತಿದೆ ಎಂದು ಸೇನಾಧಿಕಾರಿ ಮಾಹಿತಿ ನೀಡಿದ್ದಾರೆ.
Indian and Chinese tanks were seen disengaging from the south bank of Pangong lake area in eastern Ladakh where they were deployed amid a standoff areas along the Line of Actual Control.
23-03-25 06:02 pm
Bangalore Correspondent
Karnataka Bandh Live, Bangalore, Mangalore Ud...
22-03-25 12:28 pm
Koppal, Sslc Exams, Mother death: SSLC ಪರೀಕ್ಷ...
21-03-25 10:41 pm
Sameer MD Video Delete Sowjanya, YouTube: ಸೌಜ...
21-03-25 10:35 pm
DK Shivakumar, BJP Muniratna, Honeytrap Case:...
21-03-25 09:21 pm
23-03-25 02:40 pm
HK News Desk
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
22-03-25 06:48 pm
Mangalore Correspondent
Mangalore, BJP protest, MLC Bharathi Shetty,...
22-03-25 05:45 pm
Sullia, Mangalore, Rabies death: ನಾಯಿ ಮರಿ ಕಚ್...
22-03-25 03:15 pm
Belthangady, Baby News, Mangalore: ಬೆಳ್ತಂಗಡಿ...
22-03-25 01:07 pm
Puttur, Mla Ashok Rai, BJP MLA, Mangalore: ಐದ...
20-03-25 02:05 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm