ಬ್ರೇಕಿಂಗ್ ನ್ಯೂಸ್
16-02-21 07:17 pm Headline Karnataka News Network ದೇಶ - ವಿದೇಶ
ಲಂಡನ್, ಫೆ.16: ಎನ್ನೆಂಸಿ ಹೆಲ್ತ್ ಕೇರ್ ಸಮೂಹ ಸಂಸ್ಥೆಗಳ ಸ್ಥಾಪಕ, ಉಡುಪಿ ಮೂಲದ ದುಬೈ ಉದ್ಯಮಿ ಬಿ.ಆರ್. ಶೆಟ್ಟಿಗೆ ಸೇರಿದ ಜಗತ್ತಿನಾದ್ಯಂತ ಇರುವ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲು ಲಂಡನ್ ಕೋರ್ಟ್ ಆದೇಶ ಮಾಡಿದೆ.
ಅಬುಧಾಬಿ ಕಮರ್ಷಿಯನ್ ಬ್ಯಾಂಕ್ ಒಂದಕ್ಕೇ ಒಂದು ಬಿಲಿಯನ್ ಡಾಲರ್ ಸಾಲ ಬಾಕಿ ಇರುವ ಕಾರಣ ಬ್ಯಾಂಕ್ ಆಡಳಿತ, ಶೆಟ್ಟಿ ಮತ್ತು ಅವರ ಸಂಸ್ಥೆಯ ವಿರುದ್ಧ ಕಳೆದ ಎಪ್ರಿಲ್ ನಲ್ಲಿ ಕ್ರಿಮಿನಲ್ ದೂರು ದಾಖಲಿಸಿತ್ತು. ಮಾಹಿತಿ ಪ್ರಕಾರ, ಬಿ.ಆರ್.ಶೆಟ್ಟಿ ಸೇರಿದಂತೆ ಎನ್ನೆಂಸಿಯ ವಹಿವಾಟು ನೋಡಿಕೊಂಡಿದ್ದ ಸಿಇಓ ಪ್ರಶಾಂತ್ ಮಂಗಟ್, ಪಾಲುದಾರಿಕೆ ಹೊಂದಿದ್ದ ದುಬೈನವರೇ ಆದ ಖಲೀಫಾ ಅಲ್ ಮುಹೈರಿ, ಸಯೀದ್ ಅಲ್ ಖೆಬೈಸಿ ಅವರ ಖಾತೆಗಳನ್ನೂ ಸೀಜ್ ಮಾಡಲು ಆದೇಶ ಮಾಡಲಾಗಿದೆ. ಇದರಂತೆ, ಇವರು ಜಗತ್ತಿನ ಯಾವುದೇ ಕಡೆಯಲ್ಲಿ ತಮ್ಮ ಹೆಸರಲ್ಲಿ ಹೊಂದಿರುವ ಸ್ಥಿರ ಆಸ್ತಿಗಳನ್ನು ಮಾರುವಂತಿಲ್ಲ.
1970ರಲ್ಲಿ ಬಿ.ಆರ್ ಶೆಟ್ಟಿ ದುಬೈನಲ್ಲಿ ಹೆಲ್ತ್ ಕೇರ್ ಸಂಸ್ಥೆ ಸ್ಥಾಪನೆ ಮಾಡಿದ್ದು, 50 ವರ್ಷಗಳಲ್ಲಿ ಯುಎಇಯಲ್ಲೇ ಅತಿ ದೊಡ್ಡ ಹೆಲ್ತ್ ಕೇರ್ ಸಂಸ್ಥೆಯಾಗಿ ಮಾರ್ಪಾಟಾಗಿತ್ತು. ಆದರೆ, ಬ್ಯಾಂಕುಗಳಿಗೆ ನಕಲಿ ಮಾಹಿತಿ ನೀಡಿ ಆಸ್ತಿಗೆ ಮೀರಿದ ಸಾಲ ಪಡೆದಿದ್ದ ಬಗ್ಗೆ ಲೆಕ್ಕ ಪರಿಶೋಧನಾ ಸಂಸ್ಥೆಯ ವರದಿ ಆಧಾರದಲ್ಲಿ ಇಡೀ ಸಂಸ್ಥೆಯೇ ದಿವಾಳಿಯಾಗಿತ್ತು. ಎನ್ನೆಂಸಿ ಸಂಸ್ಥೆಯ ಒಟ್ಟು ಸಾಲ 4.5 ಬಿಲಿಯನ್ ಡಾಲರ್ ಎಂದು ಲೆಕ್ಕ ಪರಿಶೋಧನಾ ಸಂಸ್ಥೆ ವರದಿ ನೀಡಿತ್ತು. ನಷ್ಟದ ಹಿನ್ನೆಲೆಯಲ್ಲಿ ಲಂಡನ್ ಮೂಲದ ಕಂಪನಿ, ಎನ್ನೆಂಸಿಯನ್ನು ವಶಕ್ಕೆ ಪಡೆದಿದ್ದು ಸಾಲದಾರರಿಗೆ ಹಣ ತುಂಬುವ ಭರವಸೆ ನೀಡಿದೆ.
ಈಗಾಗ್ಲೇ ದುಬೈ ಮತ್ತು ಭಾರತದಲ್ಲಿ ಇರುವ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡುವಂತೆ ಲಂಡನ್ ಕೋರ್ಟ್, ಈ ರಾಷ್ಟ್ರಗಳಿಗೆ ಕೇಳಿಕೊಂಡಿದೆ. ದುಬೈ ಅಲ್ಲದೆ, ಬಿ.ಆರ್. ಶೆಟ್ಟಿ ಭಾರತದ ಬರೋಡಾ ಬ್ಯಾಂಕ್, ಫೆಡರಲ್ ಬ್ಯಾಂಕಿನಲ್ಲೂ ಸಾಲ ಹೊಂದಿದ್ದಾರೆ. ಬರೋಡಾ ಬ್ಯಾಂಕಿನಲ್ಲಿ 250 ಮಿಲಿಯನ್ ಡಾಲರ್ ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
The assets of BR Shetty, the founder of the troubled healthcare operator NMC Health, were frozen by a UK court. The freeze order reportedly applies worldwide, and was won by the Abu Dhabi Commercial Bank as its exposure to the company is more than $1 billion.
23-03-25 06:02 pm
Bangalore Correspondent
Karnataka Bandh Live, Bangalore, Mangalore Ud...
22-03-25 12:28 pm
Koppal, Sslc Exams, Mother death: SSLC ಪರೀಕ್ಷ...
21-03-25 10:41 pm
Sameer MD Video Delete Sowjanya, YouTube: ಸೌಜ...
21-03-25 10:35 pm
DK Shivakumar, BJP Muniratna, Honeytrap Case:...
21-03-25 09:21 pm
23-03-25 02:40 pm
HK News Desk
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತ...
21-03-25 04:46 pm
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
22-03-25 06:48 pm
Mangalore Correspondent
Mangalore, BJP protest, MLC Bharathi Shetty,...
22-03-25 05:45 pm
Sullia, Mangalore, Rabies death: ನಾಯಿ ಮರಿ ಕಚ್...
22-03-25 03:15 pm
Belthangady, Baby News, Mangalore: ಬೆಳ್ತಂಗಡಿ...
22-03-25 01:07 pm
Puttur, Mla Ashok Rai, BJP MLA, Mangalore: ಐದ...
20-03-25 02:05 pm
23-03-25 03:56 pm
HK News Desk
Mangalore Fraud, Online, Telagram: ಟೆಲಿಗ್ರಾಂನ...
22-03-25 10:51 pm
Bangalore Fake Police, Crime: ಪಾರ್ಕ್ನಲ್ಲಿ ಜೋ...
21-03-25 12:44 pm
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm