ಬ್ರೇಕಿಂಗ್ ನ್ಯೂಸ್
14-02-21 03:08 pm Headline Karnataka News Network ದೇಶ - ವಿದೇಶ
ಶ್ರೀನಗರ, ಫೆ.14: ಪುಲ್ವಾಮಾ ದಾಳಿಗೆ ವರ್ಷ ತುಂಬುತ್ತಿದ್ದಂತೆಯೇ ಅತ್ತ ಮತ್ತೊಂದು ದಾಳಿಗೆ ಉಗ್ರರು ಸಂಚು ಹೂಡಿದ್ದರೇ ಅನ್ನುವ ಶಂಕೆ ಮೂಡಿದೆ. ಪುಲ್ವಾಮಾ ದಾಳಿಯ ಎರಡನೇ ವರ್ಷಾಚರಣೆ ದಿನವೇ ಜಮ್ಮು ಬಸ್ ನಿಲ್ದಾಣದಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ.
ಪುಲ್ವಾಮಾ ದಾಳಿ ದಿನವಾದ ಫೆ.14ರ ಭಾನುವಾರ ಜಮ್ಮು ಕಾಶ್ಮೀರ ಪೊಲೀಸರು ಅಲರ್ಟ್ ಆಗಿದ್ದರು. ಪೊಲೀಸ್ ಪಡೆ ಗಸ್ತು ನಿರತ ಇರುವಾಗಲೇ ಜನನಿಬಿಡ ಜಮ್ಮು ಬಸ್ ನಿಲ್ದಾಣದಲ್ಲಿ ಏಳು ಕೇಜಿಯಷ್ಟು ಐಇಡಿ ಸ್ಫೋಟಕಗಳು ಪತ್ತೆಯಾಗಿವೆ. ಈ ದಿನವೇ ಮತ್ತೊಂದು ದೊಡ್ಡ ಮಟ್ಟದ ದಾಳಿಗೆ ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗುತ್ತಿದ್ದು, ಜಮ್ಮು ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಆಪತ್ತು ತಪ್ಪಿದಂತಾಗಿದೆ.
ಕಳೆದ ಒಂದು ವಾರದಲ್ಲಿ ಜಮ್ಮು ಕಾಶ್ಮೀರದ ವಿವಿಧೆಡೆ ರಾಜ್ಯ ಪೊಲೀಸರು ಸೇರಿದಂತೆ ಸೇನಾಪಡೆ, ಸಿಆರ್ ಪಿಎಫ್ ಪಡೆಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಈ ವೇಳೆ, ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿದ್ದು, ಪುಲ್ವಾಮಾ ದಾಳಿಯ ವರ್ಷಾಚರಣೆಯಂದೇ ಮತ್ತೊಂದು ದಾಳಿಗೆ ಸಿದ್ಧತೆ ನಡೆಸಿದ್ದರೇ ಎನ್ನುವ ಅನುಮಾನ ಮೂಡಿದೆ. ಒಂದೇ ವಾರದಲ್ಲಿ ಹಿದಾಯತುಲ್ಲಾ ಮಲಿಕ್ ಮತ್ತು ಝಹೂರ್ ಅಹ್ಮದ್ ರಾಥೋರ್ ಎಂಬ ಇಬ್ಬರು ಉಗ್ರರು ಬಂಧಿತರಾಗಿದ್ದರು. ಹಿದಾಯತುಲ್ಲಾ ಮಲಿಕ್, ಪಾಕಿಸ್ತಾನ ಮೂಲದ ಜೈಶ್ ಇ -ಮಹಮ್ಮದ್ ಉಗ್ರವಾದಿ ಸಂಘಟನೆಯಿಂದ ಪ್ರೇರಿತಗೊಂಡು ರಚಿಸಿದ್ದ ಲಷ್ಕರ್ ಇ –ಮುಸ್ತಫಾ ಹೆಸರಿನ ಸಂಘಟನೆಯ ಪ್ರಮುಖನಾಗಿದ್ದ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಜಮ್ಮು ಪೊಲೀಸರು ಆತನನ್ನು ಸೆರೆಹಿಡಿದಿದ್ದರು. ಝಹೂರ್ ಅಹ್ಮದ್ ರಾಥೋರ್, ಕಳೆದ ವರ್ಷ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸ್ ಅಧಿಕಾರಿಗಳನ್ನು ಕೊಂದಿದ್ದ ಇನ್ನೊಬ್ಬ ಉಗ್ರನಾಗಿದ್ದು, ಜಮ್ಮು ಕಾಶ್ಮೀರದ ಗುಪ್ತಚರ ಪಡೆಯೇ ಆತನ ಟಾರ್ಗೆಟ್ ಆಗಿತ್ತು. ಹಿದಾಯತುಲ್ಲಾ ಫೆ.6ರಂದು ಮತ್ತು ರಾಥೋರ್ ಎರಡು ದಿನಗಳ ಹಿಂದೆ ಸಾಂಬಾ ಜಿಲ್ಲೆಯಲ್ಲಿ ಬಂಧನವಾಗಿದ್ದ.
ಸ್ಫೋಟಕ ಪತ್ತೆ ಹಿನ್ನೆಲೆಯಲ್ಲಿ ಕಾಶ್ಮೀರ ಮತ್ತು ಜಮ್ಮುವಿನ ಕಣಿವೆಗಳಲ್ಲಿ ಶೋಧ ಕಾರ್ಯಾಚರಣೆ ಹೆಚ್ಚಿಸಿದ್ದಾರೆ. ಜನನಿಬಿಡ ಬಸ್ ನಿಲ್ದಾಣದಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ತಂದು ಇರಿಸಿದ್ದು ಯಾರೆನ್ನುವುದರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
A7-kilogram Improvised Explosive Device (IED) was detected on Sunday near the crowded general bus stand area in Jammu.
20-03-25 01:07 pm
Bangalore Correspondent
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
20-03-25 07:19 pm
HK News Desk
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm