ಬ್ರೇಕಿಂಗ್ ನ್ಯೂಸ್
11-02-21 02:03 pm Headline Karnataka News Network ದೇಶ - ವಿದೇಶ
ಡೆಹ್ರಾಡೂನ್, ಫೆಬ್ರವರಿ.11: ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿಯಲ್ಲಿ ಹಿಮಸ್ಫೋಟಿಸಿ ಉಂಟಾದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಈ ಪೈಕಿ 10 ಮಂದಿಯನ್ನು ಮಾತ್ರ ಗುರುತಿಸಲಾಗಿದೆ.
204 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಐಟಿಬಿಪಿ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳು 5ನೇ ದಿನವೂ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿವೆ. ಇನ್ನು ಸೇತುವೆಗಳನ್ನು ಮೂಲಕ ಆಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ಸಾಗಿಸಲಾಗುತ್ತಿದೆ.
ತಪೋವನ ಸುರಂಗದೊಳಗೆ ಹಲವರು ಸಿಲುಕಿದ್ದು, ಕೆಸರು ಮತ್ತು ಕಲ್ಲುಗಳನ್ನು ತೆರವುಗೊಳಿಸುತ್ತಿರುವ ರಕ್ಷಣಾ ತಂಡಗಳು ಸುರಂಗವನ್ನು ಕೊರೆಯಲು ಡ್ರಿಲ್ಲಿಂಗ್ ಆಪರೇಶನ್ ಆರಂಭಿಸಿರುವುದಾಗಿ ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
1965ರಲ್ಲಿ ರೇಡಿಯೋ ಆಕ್ಟಿವ್ ಡಿವೈಸ್ ಕಣ್ಮರೆಯಾದ ಕಥೆ
ಭಾರತದ ಕೇಂದ್ರ ತನಿಖಾ ತಂಡ ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳು ನಂದಾ ದೇವಿ ಪರ್ವತದ ಶಿಖರದಲ್ಲಿ ಪರಮಾಣು-ಚಾಲಿತ ಕಣ್ಗಾವಲು ಉಪಕರಣಗಳನ್ನು ನಿಯೋಜನೆ ಮಾಡಿತ್ತು. ಚೀನಾದ ಕಂಚೆಂಜುಂಗಾ ಹೊರತುಪಡಿಸಿದರೆ ಇದು ಜಗತ್ತಿನ ಅತಿ ಎತ್ತರದ ಕಣ್ಗಾವಲು ಸಾಧನ ಇದಾಗಿದ್ದು, 1965ರಲ್ಲಿ ರೇಡಿಯೋ ಆಕ್ಟಿವ್ ಡಿವೈಸ್ ಕಣ್ಮರೆಯಾಗಿತ್ತು.
ಕಣ್ಮರೆಯಾದ ವಿಕಿರಣ ಸಾಧನಕ್ಕೆ 100 ವರ್ಷ ಆಯಸ್ಸು
ಈ ಹಿಂದೆ ರೇಡಿಯೋ ಆಕ್ಟಿವ್ ಡಿವೈಸ್ ನಿಯೋಜನೆಗೆ ತೆರಳಿದ ಪರ್ವತಾರೋಹಣ ತಂಡವು ಹಿಮಪಾತದಲ್ಲಿ ಸಿಲುಕಿದ ಹಿನ್ನೆಲೆ ಅಂದು ವಾಪಸ್ಸಾಗಿತ್ತು. ಒಂದು ವರ್ಷದ ನಂತರದಲ್ಲಿ ಅದೇ ಪ್ರದೇಶಕ್ಕೆ ತೆರಳಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ವಿಕಿರಣ ಸಾಧನ ಅಲ್ಲಿ ಸಿಗಲಿಲ್ಲ. ರೇಡಿಯೋ ಆಕ್ಟಿವ್ ಡಿವೈಸ್ ಹುಡುಕಾಟ ನಡೆಸಿದರೂ ಅದರ ಬಗ್ಗೆ ಸುಳಿವು ಸಿಗಲಿಲ್ಲ. ಸುಮಾರು 100 ವರ್ಷದವರೆಗೆ ಜೀವಿತಾವಧಿ ಹೊಂದಿರುವ ಈ ಸಾಧನವು ನಾಪತ್ತೆಯಾಗಿದ್ದರೂ, ಅದೇ ಸುತ್ತಮುತ್ತಲಿನ ಪ್ರದೇಶದಲ್ಲೇ ಹುದುಗಿ ಹೋಗಿದೆ ಎಂದು ನಂಬಲಾಗುತ್ತಿದೆ.
ರಿಷಿಗಂಗಾ ನದಿಗೆ ಹಿಮ ಉರುಳಿದ ವೇಳೆ ಗೊಬ್ಬರದ ವಾಸನೆ
ಕಳೆದ ಫೆಬ್ರವರಿ.07ರಂದು ಉತ್ತರಾಖಂಡ್ ಚಮೋಲಿ ಜಿಲ್ಲೆ ರೈನಿ ಗ್ರಾಮದ ಬಳಿ ಪರ್ವತದಿಂದ ಹಿಮವು ಉರುಳಿ ರಿಷಿಗಂಗಾ ನದಿಗೆ ಬಿದ್ದಿತು. ಈ ವೇಳೆ ಎಲ್ಲೆಡೆ ಗೊಬ್ಬರದ ರೀತಿಯ ತೀವ್ರವಾದ ವಾಸನೆ ಹರಡಿತ್ತು. ಗಾಳಿಯಲ್ಲಿ ಹರಡಿದ ತೀವ್ರ ವಾಸನೆಯಿಂದಾಗಿ ನಾವು ಉಸಿರಾಡುವುದು ಕೂಡ ಕಷ್ಟಸಾಧ್ಯವಾಗಿತ್ತು. ಹಿಮಪಾತ ಅಥವಾ ಹಿಮ ಕುಸಿತವಷ್ಟೇ ಆಗಿದ್ದಲ್ಲಿ ಅಷ್ಟೊಂದು ಮಟ್ಟಿಗೆ ತೀವ್ರವಾದ ವಾಸನೆ ಏಕೆ ಹರಡುತ್ತಿತ್ತು. ಸುದೀರ್ಘ ಅವಧಿಯವರೆಗೂ ಇದೇ ಪ್ರದೇಶದಲ್ಲಿರುವ ರೇಡಿಯೋ ಆಕ್ಟಿವ್ ಡಿವೈಸ್ ಈ ರೀತಿಯ ವಾಸನೆ ಹರಡುವುದಕ್ಕೆ ಮುಖ್ಯ ಕಾರಣವಾಗಿದೆ. ಇತ್ತೀಚಿಗೆ ನಡೆದ ಹಿಮಪಾತದ ಹಿಂದೆ ಅದೇ ರೇಡಿಯೋ ಆಕ್ಟಿವ್ ಡಿವೈಸ್ ಮೂಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಉತ್ತರಾಖಂಡ್ ಹಿಮಪಾತ ದುರಂತ ; 12 ಮಂದಿ ಬಲಿ, 170 ಜನ ನಾಪತ್ತೆ
ಉತ್ತರಾಖಂಡ್ ಜೋಶಿ ಮಠ ಭಾಗದಲ್ಲಿ ಭಾರಿ ಹಿಮಪಾತ ; 150ಕ್ಕೂ ಅಧಿಕ ಮಂದಿ ಸಾವಿನ ಶಂಕೆ?
Uttarakhand glacier burst Death toll rises to 34 and 204 people still missing. The rescue operations are underway inside Tapovan tunnel in Chamoli.
27-03-25 06:41 pm
HK News Desk
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
BJP Yatnal Out, Vijayapura, BY Vijayendra: ಬಿ...
26-03-25 09:42 pm
27-03-25 04:07 pm
HK News Desk
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
27-03-25 08:45 pm
Mangalore Correspondent
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
Mangalore Anirvedha Organization: ಅನಿರ್ವೇದ ಸಂ...
26-03-25 10:02 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm