ಬ್ರೇಕಿಂಗ್ ನ್ಯೂಸ್
01-02-21 02:10 pm Headline Karnataka News Network ದೇಶ - ವಿದೇಶ
ನವದೆಹಲಿ, ಫೆ.1: ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2021 ಮಂಡನೆ ಮಾಡಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ಸೆಸ್ ಬಗ್ಗೆ ತಿಳಿಸಿದ್ದು, ಇಂಧನ ಮೇಲೆ ಕೂಡಾ ಈ ಸೆಸ್ ಜಾರಿಯಾಗಲಿದ್ದು, ತೈಲ ಬೆಲೆ ಫೆಬ್ರವರಿ 1ರ ಮಧ್ಯರಾತ್ರಿಯಿಂದಲೇ ಹೆಚ್ಚಳ ವಾಗಲಿದೆ.
ಬಜೆಟ್ ದಿನಕ್ಕೂ ಮುನ್ನ ಇಂಧನ ಬೆಲೆ ಸ್ಥಿರತೆ ಪಡೆದುಕೊಂಡಿತ್ತು. ಆದರೆ, ಈಗ ಸೆಸ್ ಜಾರಿಯಾದ ಬಳಿಕ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 2.5 ರು ಏರಿಕೆಯಾಗಲಿದ್ದು, ಡೀಸೆಲ್ ಬೆಲೆ 4 ರು ಪ್ರತಿ ಲೀಟರ್ ಗೆ ಹೆಚ್ಚಳವಾಗಲಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ 86.30 ರು ನಷ್ಟಿದೆ. ಮಂಬೈ, ಚೆನ್ನೈ ಹಾಗೂ ಕೋಲ್ಕತಾಗಳಲ್ಲಿ ಕ್ರಮವಾಗಿ 92.86 ರು, 88.82 ರು ಹಾಗೂ 87.69 ರು ನಷ್ಟಿವೆ. ಡೀಸೆಲ್ ಬೆಲೆ ದೆಹಲಿ, ಮುಂಬೈ, ಚೆನ್ನೈ ಹಾಗೂ ಕೋಲ್ಕತಾದಲ್ಲಿ ಕ್ರಮವಾಗಿ 76.48 ರು, 83.30 ರು, 81.71 ರು ಹಾಗೂ 80.08 ರು ಆಗಿದೆ.
2018ರಲ್ಲಿ ಪೆಟ್ರೋಲ್ ಬೆಲೆ ದಾಖಲೆಯ 84ರು ಮುಟ್ಟಿತ್ತು. ಇದೇ ರೀತಿ ಡೀಸೆಲ್ ಕೂಡಾ 75.45 ರು ದಾಟಿದ್ದೇ ದಾಖಲೆಯಾಗಿತ್ತು. ಇದರ ಬೆನ್ನಲ್ಲೇ ಮುಂಬೈ ಸೇರಿದಂತೆ ಕೆಲ ಮೆಟ್ರೋಗಳಲ್ಲಿ 100 ರು ಗಡಿ ದಾಟಿತ್ತು. ರಾಜಸ್ಥಾನದಲ್ಲಿ 100 ಗಡಿ ದಾಟುತ್ತಿದ್ದಂತೆ ಅಲ್ಲಿನ ಸರ್ಕಾರ ವ್ಯಾಟ್ ದರ ಇಳಿಕೆ ಮಾಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಜಾಗತಿಕವಾಗಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 52.14 ಯುಎಸ್ ಡಾಲರ್ ನಷ್ಟಾಗಿದೆ.
Petrol and diesel are set to get expensive as the government has proposed farm cess of Rs 2.5/litre on petrol, Rs 4 on diesel.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 08:01 pm
Mangalore Correspondent
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm