ಬ್ರೇಕಿಂಗ್ ನ್ಯೂಸ್
09-01-21 06:36 pm Headline Karnataka News Network ದೇಶ - ವಿದೇಶ
ಜಕಾರ್ತಾ, ಜ.9: ಇಂಡೋನೇಶ್ಯಾ ರಾಜಧಾನಿ ಜಕಾರ್ತಾದಿಂದ ಹೊರಟಿದ್ದ ಏರ್ ಶ್ರೀವಿಜಯ ಎನ್ನುವ ವಿಮಾನ ದಿಢೀರ್ ನಾಪತ್ತೆಯಾಗಿದ್ದು, ಸಮುದ್ರ ಮಧ್ಯೆ ಪತನವಾಗಿರುವ ಶಂಕೆ ವ್ಯಕ್ತವಾಗಿದೆ.
ಜಕಾರ್ತಾ ವಿಮಾನ ನಿಲ್ದಾಣದಿಂದ ಹೊರಟಿದ್ದ ಬೋಯಿಂಗ್ 737 ವಿಮಾನದಲ್ಲಿ 62 ಮಂದಿ ಪ್ಯಾಸೆಂಜರ್ ಇದ್ದರು. ಆಗಸಕ್ಕೆ ಹಾರಿದ ನಾಲ್ಕು ನಿಮಿಷದಲ್ಲೇ ರಾಡಾರ್ ಸಂಪರ್ಕ ಕಡಿದುಕೊಂಡಿದೆ. ಅಲ್ಲದೆ, ಸಂಪರ್ಕ ಕಡಿದುಕೊಂಡ ಸಂದರ್ಭದಲ್ಲಿ ವಿಮಾನವು 11 ಸಾವಿರ ಅಡಿ ಎತ್ತರದಲ್ಲಿತ್ತು ಎಂದು ಅಲ್ಲಿನ ವಿಮಾನ ಸಚಿವಾಲಯ ತಿಳಿಸಿದೆ.
ಇದೇ ವೇಳೆ, ಇಂಡೋನೇಶ್ಯಾ ದ್ವೀಪ ಸಮೂಹದ ಉತ್ತರ ಭಾಗದಲ್ಲಿ ವಿಮಾನ ಪತನ ಆಗಿರುವ ಬಗ್ಗೆ ಅಲ್ಲಿನ ಮೀನುಗಾರರು ಶಂಕೆ ವ್ಯಕ್ತಪಡಿಸಿದ್ದಾರೆ. ಕೂಡಲೇ ರಕ್ಷಣಾ ತಂಡ ಅಲ್ಲಿ ಧಾವಿಸಿದೆ. ಆದರೆ, ಅದು ಜಕಾರ್ತಾದಿಂದ ಹೊರಟ ವಿಮಾನವೇ ಅನ್ನೋದನ್ನು ಇನ್ನೂ ಖಚಿತಪಡಿಸಿಲ್ಲ.
11 ಸಾವಿರ ಅಡಿ ಎತ್ತರಕ್ಕೇರಿದ್ದ ವಿಮಾನ ಹಠಾತ್ತಾಗಿ 250 ಅಡಿ ಎತ್ತರಕ್ಕೆ ಬಂದಿರುವ ಬಗ್ಗೆ ರಾಡಾರ್ ಮಾಹಿತಿ ರವಾನಿಸಿತ್ತು ಎನ್ನಲಾಗುತ್ತಿದೆ. ಆನಂತರ ವಿಮಾನದ ಸಂಪರ್ಕ ಕಡಿದುಕೊಂಡಿದೆ ಎನ್ನಲಾಗುತ್ತಿದೆ.
2018ರಲ್ಲಿ ಇದೇ ರೀತಿ ಇಂಡೋನೇಶ್ಯಾದ ಜಕಾರ್ತಾದಲ್ಲಿ ಬೋಯಿಂಗ್ ವಿಮಾನ ಪತನವಾಗಿದ್ದು 189 ಮಂದಿ ಪ್ರಾಣ ಕಳಕೊಂಡಿದ್ದ ಘಟನೆ ನಡೆದಿತ್ತು.
This is what we know about Sriwijaya Air flight #SJ182 based on ADS-B data.
— Flightradar24 (@flightradar24) January 9, 2021
Route: Jakarta to Pontianak
Callsign: SJY182
Aircraft: Boeing 737-500, PK-CLC
Take off: 07:36 UTC
Highest altitude: 10,900 feet
Last altitude: 250 feet
Signal lost: 07:40 UTChttps://t.co/fNZqlIR2dz pic.twitter.com/CPzFJdsuJZ
28-02-26 11:49 am
HK News Desk
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
01-03-26 09:52 am
HK News Staffer
ದುಬೈ, ಅಬುಧಾಬಿ ಮೇಲೆ ಇರಾನ್ ಮಿಸೈಲ್ ದಾಳಿ ; ಜಗತ್ತಿ...
28-02-26 10:54 pm
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರ ವ್ಯತ್ಯಯ ; ಏರ್...
28-02-26 07:17 pm
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
28-02-26 08:53 pm
HK News Desk
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm