ಬ್ರೇಕಿಂಗ್ ನ್ಯೂಸ್
08-01-21 04:24 pm Headline Karnataka News Network ದೇಶ - ವಿದೇಶ
ಕರಾಚಿ, ಜ.8: 26-11ರ ಮುಂಬೈ ದಾಳಿಯ ಮುಖ್ಯ ಸಂಚುಕೋರ, ಲಷ್ಕರ್ ಇ- ತೊಯ್ಬಾದ ಉಗ್ರವಾದಿ ಸಂಘಟನೆಯ ಮುಖ್ಯಸ್ಥ ಜಕೀವುರ್ ರೆಹ್ಮಾನ್ ಲಖ್ವಿಗೆ ಪಾಕಿಸ್ತಾನದ ಭಯೋತ್ಪಾದಕ ವಿರೋಧಿ ನ್ಯಾಯಾಲಯ 15 ವರ್ಷಗಳ ಶಿಕ್ಷೆ ಘೋಷಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
2015ರಲ್ಲಿ ಬಂಧಿತನಾಗಿ ಜಾಮೀನು ಮೇಲೆ ಹೊರಗಡೆ ತಿರುಗಾಡಿಕೊಂಡಿದ್ದ ಲಖ್ವಿಯನ್ನು ಆರು ದಿನಗಳ ಹಿಂದೆ ಪಂಜಾಬ್ ಪ್ರಾಂತದ ಭಯೋತ್ಪಾದನಾ ವಿರೋಧಿ ಘಟಕ (ಸಿಟಿಡಿ) ಬಂಧಿಸಿತ್ತು. ಭಯೋತ್ಪಾದನಾ ಸಂಘಟನೆಗಳಿಗೆ ಹಣದ ನೆರವು ನೀಡುತ್ತಿದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು.
2015ರಲ್ಲಿ ರಾವಲ್ಪಿಂಡಿ ಜೈಲಿನಿಂದ ಬಿಡುಗಡೆಯಾದ ಬಳಿಕ ಲಖ್ವಿ ಲಷ್ಕರ್ ಇ- ತೊಯ್ಬಾ ಸಂಖಘಟನೆ ಪ್ರಮುಖನಾಗಿ ಗುರುತಿಸಿಕೊಂಡಿದ್ದ. ಅಲ್ಲದೆ, ಫಂಡ್ ರೈಸಿಂಗ್ ಮಾಡುವುದಕ್ಕಾಗಿ ತನ್ನ ಸಹಚರರ ಮೂಲಕ ಡಿಸ್ಪೆನ್ಸರಿ ನಡೆಸುತ್ತಿದ್ದ. ಡಿಸ್ಪೆನ್ಸರಿ ಹೆಸರಲ್ಲಿ ಹಣ ಸಂಗ್ರಹಿಸುತ್ತಿದ್ದು, ಅಲ್ಲಿಂದಲೇ ಲಷ್ಕರ್ ಸಂಘಟನೆಯ ಕೆಲಸಗಳಿಗೆ ಬಳಸುತ್ತಿದ್ದ ಎಂದು ಕಳೆದ ವಾರದ ಬಂಧಿಸಿದ ವೇಳೆ ಕೌಂಟರ್ ಟೆರರಿಸಮ್ ಡಿಪಾರ್ಟ್ಮೆಂಟ್ ಪೊಲೀಸರು ಹೇಳಿಕೆ ನೀಡಿದ್ದರು.
2008ರಲ್ಲಿ ವಿಶ್ವಸಂಸ್ಥೆ ಕೂಡ ಲಖ್ವಿಯನ್ನು ಗ್ಲೋಬಲ್ ಟೆರರಿಸ್ಟ್ ಎಂದು ಘೋಷಣೆ ಮಾಡಿತ್ತು. ಅಲ್ ಖೈದಾ ಮತ್ತು ಲಷ್ಕರ್ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಬಗ್ಗೆ ಉಲ್ಲೇಖಿಸಿದ್ದಲ್ಲದೆ, ಬೇನಾಮಿ ಹೆಸರಲ್ಲಿ ಹಣಕಾಸು ವ್ಯವಸ್ಥೆ, ವಿಧ್ವಂಸಕ ಕೃತ್ಯಗಳಿಗೆ ಯೋಜನೆ ರೂಪಿಸುವುದು, ಸೌಲಭ್ಯ ಒದಗಿಸುವುದು, ಸಂಚು ರೂಪಿಸುತ್ತಿದ್ದ ಎಂಬುದನ್ನು ಆಗಲೇ ಪತ್ತೆ ಮಾಡಿತ್ತು.
A Pakistan court has sentenced Zaki-ur-Rehman Lakhvi, the operational commander of the Lashkar-e-Tayiba to 15 years in jail and also ordered him to pay a fine.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm