ಬ್ರೇಕಿಂಗ್ ನ್ಯೂಸ್
23-05-26 03:53 pm HK News Staffer ದೇಶ - ವಿದೇಶ
ಮಂಗಳೂರು, ಮೇ 23: ಸುಬ್ರಹ್ಮಣ್ಯ -ಸಕಲೇಶಪುರ ನಡುವೆ 55 ಕಿಮೀ ರೈಲು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದೆ. ಇನ್ನು ಒಂದು ತಿಂಗಳಲ್ಲಿ ಮಂಗಳೂರು -ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಓಡಾಟ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮಕ್ಕಾಗಿ ಮಂಗಳೂರಿಗೆ ಬಂದಿರುವ ಸಚಿವ ಸೋಮಣ್ಣ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು. ಮಂಗಳೂರನ್ನು ರೈಲ್ವೇ ವಿಭಾಗ ಮಾಡುವ ನಿಟ್ಟಿನಲ್ಲಿ ಚಿಂತನೆ ಇದ್ದು ಈ ನಿಟ್ಟಿನಲ್ಲಿ ಸಭೆ ನಡೆಸಲಾಗುತ್ತಿದೆ. ಮಂಗಳೂರು ಮೂರು ರೈಲ್ವೇ ವಿಭಾಗಗಳಲ್ಲಿ ಹಂಚಿಹೋಗಿದೆ. ಈ ಮೂರನ್ನ ಬಿಟ್ಟು ಮಂಗಳೂರು ಪ್ರತ್ಯೇಕ ವಿಭಾಗ ಮಾಡಿದ್ರೆ ಅನುಕೂಲವಾಗಲಿದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ !
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತ ಪ್ರಶ್ನೆಗೆ, ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಪಕ್ಷದಲ್ಲಿ ಕೆಲವೊಂದು ಸುಧಾರಣೆ ತರಲು ಸಲಹೆಗಳನ್ನ ಕೇಳಿದ್ದಾರೆ. 48 ವರ್ಷದ ನನ್ನ ಅನುಭವದ ಆಧಾರದಲ್ಲಿ ಸಲಹೆಗಳನ್ನ ನೀಡಿದ್ದೇನೆ. ಎಲ್ಲಾ ನಿರ್ಧಾರಗಳನ್ನ ಪಕ್ಷದ ಹಿರಿಯರು ಕೈಗೊಳ್ಳಲಿದ್ದಾರೆ ಎಂದು ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯಸಭೆಗೆ ಹೆಚ್.ಡಿ ದೇವೇಗೌಡ ಪುನರಾಯ್ಕೆ ಕುರಿತ ಪ್ರಶ್ನೆಗೆ, ಆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಎನ್ ಡಿಎ ಮೈತ್ರಿಕೂಟದಲ್ಲಿ ದೇವೇಗೌಡರಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರದ ಪ್ರಧಾನಿ ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ದೇವೇಗೌಡರಿಗೆ ನೀಡುವ ಸ್ಥಾನಮಾನದ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ. ಪಕ್ಷದ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.
NEET ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸೋಮಣ್ಣ, ಇದು ಆಗಬಾರದಿತ್ತು ಆಗಿದೆ. ಅದರ ಹಿಂದೆ ಯಾರಿದ್ದಾರೆಂದು ಪತ್ತೆಹಚ್ಚಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳುತ್ತೆ ಎಂದು ಹೇಳಿದರು. ಮತ್ತೆ ರಾಜ್ಯ ರಾಜಕಾರಣಕ್ಕೆ ಸೋಮಣ್ಣ ಎಂಟ್ರಿಯಾಗುವ ವಿಚಾರದಲ್ಲಿ, ಈ ಬಗ್ಗೆ ನನಗೆ ಗೊತ್ತಿಲ್ಲ, ರಾಷ್ಟ್ರದ ಪ್ರಧಾನಿ ನನಗೆ ಸಚಿವ ಸ್ಥಾನ ನೀಡಿದ್ದಾರೆ. ದೇಶ ಸುತ್ತಿ ನನ್ನ ಕೆಲಸ ಮಾಡುತ್ತಿದ್ದೇನೆ. ಮುಂದಿನ ತೀರ್ಮಾನವನ್ನ ನಮ್ಮ ಹೈಕಮಾಂಡ್ ನಾಯಕರು ಮಾಡಲಿದ್ದಾರೆ ಎಂದರು. ಕಾಕ್ರೋಚ್ ಜನತಾ ಪಕ್ಷದ ಕುರಿತ ಪ್ರಶ್ನೆಗೆ, ಇಂತಹ ಎಷ್ಟೋ ಪಕ್ಷ ಈ ದೇಶದಲ್ಲಿ ಹುಟ್ಟಿ ಮಾಯವಾಗಿದೆ. ಇವೆಲ್ಲ ಅಣಬೆಗಳಂತೆ ಹುಟ್ಟುತ್ತವೆ... ಮತ್ತೆ ಮಾಯಾವಾಗುತ್ತವೆ. ಸುಳ್ಳನ್ನ ಸತ್ಯವಾಗಿಸುವ ಪ್ರಯತ್ನವಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರಕಾರ 55 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಈ ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿದ್ಯಾ? ಮಾಡಬಾರದ ಪಾಪದ ಕೆಲಸವನ್ನ ರಾಜ್ಯ ಸರಕಾರ ಮಾಡಿದೆ. ಇದೊಂದು ತೊದಲುಗೊಂಬೆ ಸರಕಾರ. ಯಾವಾಗ ತೊಲಗುತ್ತೋ ಗೊತ್ತಿಲ್ಲ. ನಾನು 7 ಬಾರಿ ಶಾಸಕನಾದವನು, ಮಂತ್ರಿಯಾದವನು. ರಾಜ್ಯದ ಆಗು ಹೋಗುಗಳನ್ನ ತುಂಬಾ ಹತ್ತಿರದಿಂದ ನೋಡಿದವನು. ಇದೊಂದು ನಿರ್ಲಿಪ್ತ ಸರಕಾರ. ಅವರದ್ದೇ ಕೆಲವು ಟಾಸ್ಕ್ ಗಳನ್ನ ಹಾಕಿಕೊಂಡು ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ತಲೆಯಲ್ಲಿ ಏನಿದೆ? ಭಾವನೆಗಳು ಏನು? ಗೊತ್ತಿಲ್ಲ. ಜನ ಉತ್ತರ ಕೊಡುವ ಕಾಲ ಹತ್ತಿರ ಬರುತ್ತಿದೆ. ಪ್ರಪಂಚಕ್ಕೆ ಗೊತ್ತಿದೆ, ಇವರು ಮಾಡುತ್ತಿರುವ ಪಾಪದ ವ್ಯವಸ್ಥೆಗಳು. ಪಾಪಕ್ಕೆ ಪ್ರಾಯಶ್ಚಿತವಾಗುತ್ತೆ. ಯಾರ ಯಾರ ಓಲೈಕೆ ಮಾಡುತ್ತಿದ್ದಾರೆ ಅನ್ನೋದಕ್ಕಿಂತ ಹೆಚ್ಚಾಗಿ ಅವರು ಮಾಡುತ್ತಿರುವ ಪಾಪದ ವ್ಯವಸ್ಥೆಗಳು ಪ್ರಪಂಚಕ್ಕೆ ಗೊತ್ತಾಗುತ್ತಿದೆ.
ರಾಜ್ಯದ ಜನರನ್ನ ಸಾಲದ ಕೂಪಕ್ಕೆ ತಳ್ಳಿದ್ದಾರೆ. ಇನ್ನೊಂದೆಡೆ ರಾಜ್ಯದ ಜನರನ್ನ ಕೂಪಮಂಡೂಕ ಮಾಡಿದ್ದಾರೆ. ರಾಜ್ಯದ ಜನರನ್ನ ಯಾಮಾರಿಸಬಹುದು ಎಂಬ ಭಾವನೆ ಸರಕಾರಕ್ಕಿದೆ. ಅದಕ್ಕೆ ತಕ್ಕುದಾದ ಪ್ರತಿಫಲ ರಾಜ್ಯದ ಜನ ನೀಡಲಿದ್ದಾರೆ. ಅವಶ್ಯಕತೆ ಇಲ್ಲದ ವಿಚಾರಗಳನ್ನ ಜನರ ಮೇಲೆ ಗೂಬೆ ಕೂರಿಸಲಾಗಿದೆ. ಒಂದು ಸಮಾಜವನ್ನ ಇನ್ನೊಂದು ಸಮಾಜದ ಮೇಲೆ ಎತ್ತಿಕಟ್ಟುವ ಕೆಲಸವಾಗುತ್ತಿದೆ
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm