ಬ್ರೇಕಿಂಗ್ ನ್ಯೂಸ್
03-05-26 02:35 pm HK News Staffer ದೇಶ - ವಿದೇಶ
ಬೆಂಗಳೂರು, ಮೇ 3: ಯುದ್ಧವು ನಮ್ಮ ಆಯ್ಕೆಯಲ್ಲ, ಇರಾನ್ ಮೇಲೆ ಬಲವಂತವಾಗಿ ಹೇರಲ್ಪಟ್ಟದ್ದು ಎಂದು ಇರಾನ್ ಸರ್ವೋಚ್ಛ ನಾಯಕನ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಹೇಳಿದ್ದಾರೆ.
ಬೆಂಗಳೂರು ಭೇಟಿ ವೇಳೆ ಮಾತನಾಡಿದ ಇಲಾಹಿ ಅವರು, ಇರಾನ್ ಎಂದಿಗೂ ಯುದ್ಧ ಬಯಸಲಿಲ್ಲ. ಆದರೆ, ನಮ್ಮ ಮೇಲೆ ಹೇರಲಾಯಿತು. ನಾವು ಈಗಲೂ ಯುದ್ಧ ಬಯಸುವುದಿಲ್ಲ, ಆದರೆ ಶತ್ರುಗಳು ಮುಂದುವರಿಸಿದರೆ 10 ವರ್ಷಗಳ ವರೆಗೂ ಹೋರಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಈ ಯುದ್ಧವನ್ನು ಮೂರು ದಿನಗಳಲ್ಲಿ ಮುಗಿಸಬಹುದು ಎಂದುಕೊಂಡಿದ್ದವು, ಇರಾನ್ ಕುಸಿದು ಹೋಗುತ್ತದೆ ಮತ್ತು ಅದನ್ನು ವಿಭಜಿಸಬಹುದು ಎಂದು ಭಾವಿಸಿದ್ದವು. ಆದರೆ ಅದು ಸಾಧ್ಯವಾಗಲಿಲ್ಲ, ಮುಂದೆ ಕೂಡ ಆಗುವುದಿಲ್ಲ ಎಂದು ತಿಳಿಸಿದರು.
ಇರಾನ್ ತನ್ನ ಭೂಭಾಗದ ಒಂದು ಇಂಚು ಭೂಮಿಯನ್ನೂ ಕೂಡ ಬಿಟ್ಟುಕೊಡುವುದಿಲ್ಲ, ಬೇಕಾದರೆ ಜನರು ತಮ್ಮ ರಕ್ತವನ್ನೇ ಹರಿಸಲು ಸಿದ್ಧರಾಗಿದ್ದಾರೆ. “ಅಮೆರಿಕ ನಮ್ಮ ಎಲ್ಲಾ ಪರಮಾಣು ಕೇಂದ್ರಗಳನ್ನು ನಾಶ ಮಾಡಿದೆ ಎಂದು ಹೇಳುತ್ತದೆ. ಆದರೆ ಅದೇ ಸಮಯದಲ್ಲಿ ನಾವು ಪರಮಾಣು ಶಸ್ತ್ರಾಸ್ತ್ರ ಹೊಂದಿದ್ದೇವೆ ಎಂದು ಆರೋಪಿಸುತ್ತದೆ. ನಾವು ಎನ್ಪಿಟಿ ಒಪ್ಪಂದದ ಸಹಿ ರಾಷ್ಟ್ರವಾಗಿದ್ದು, ಶಾಂತಿಯುತ ಪರಮಾಣು ತಂತ್ರಜ್ಞಾನ ಅಭಿವೃದ್ಧಿಗೆ ಹಕ್ಕು ಹೊಂದಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಆರಂಭಿಸಿದ ಈ ಯುದ್ಧವು ಕೆಲವು ಆಂತರಿಕ ರಾಜಕೀಯ ಸಮಸ್ಯೆಗಳನ್ನು ಮುಚ್ಚಿಹಾಕಲು ನಡೆಸಿದ ಪ್ರಯತ್ನವಾಗಿದ್ದು, ಜಾಗತಿಕ ಗಮನವನ್ನು ಬೇರೆ ವಿಷಯಗಳಿಂದ ತಿರುಗಿಸಲು ಈ ದಾಳಿ ನಡೆದಿದೆ ಎಂದು ಇಲಾಹಿ ಆರೋಪಿಸಿದರು. ಯುದ್ಧದಲ್ಲಿ ಇರಾನ್ ತನ್ನ ಉನ್ನತ ನಾಯಕರು ಸೇರಿದಂತೆ ಹಲವರನ್ನು ಕಳೆದುಕೊಂಡಿದೆ. ನೂರಾರು ನಾಗರಿಕರು, ಶಾಲಾ ಮಕ್ಕಳು ಮೃತಪಟ್ಟಿದ್ದಾರೆ. ಇರಾನ್ ಜನರು ‘ಶಹಾದತ್’ (ತ್ಯಾಗ) ಎಂಬ ತತ್ವವನ್ನು ನಂಬುತ್ತಾರೆ. ಅದಕ್ಕಾಗಿ ಹೋರಾಡಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm