ಬ್ರೇಕಿಂಗ್ ನ್ಯೂಸ್
14-04-26 01:46 pm HK News Staffer ದೇಶ - ವಿದೇಶ
ವಾಷಿಂಗ್ಟನ್, ಏ 14: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕ್ಯಾಥೋಲಿಕ್ ಧರ್ಮಗುರು ಪೋಪ್ ಲಿಯೋ XIV ನಡುವೆ ವಾಕ್ಸಮರ ಆರಂಭವಾಗಿದ್ದು, ಇದು ಜಾಗತಿಕ ಹಾಗೂ ಧಾರ್ಮಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ನಲ್ಲಿ, ಲಿಯೋ ಅವರನ್ನು “ಅಪರಾಧ ವಿಷಯದಲ್ಲಿ ದುರ್ಬಲ” ಹಾಗೂ “ವಿದೇಶಾಂಗ ನೀತಿಯಲ್ಲಿ ದುರ್ಬಲ” ಎಂದು ಟೀಕಿಸಿದ್ದಾರೆ. ಜೊತೆಗೆ, ಲಿಯೋ ಪೋಪ್ ಆಗಿ ಆಯ್ಕೆಯಾಗಲು ನನ್ನ ರಾಜಕೀಯ ಪ್ರಭಾವವೇ ಕಾರಣ. ನಾನು ಶ್ವೇತಭವನದಲ್ಲಿ ಇಲ್ಲದಿದ್ದರೆ, ಲಿಯೋ ವ್ಯಾಟಿಕನ್ನಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಪೋಪ್ "ತೀವ್ರ ಎಡಪಂಥೀಯರ" ಪರವಾಗಿ ವರ್ತಿಸುತ್ತಿದ್ದಾರೆಂದು ಹೇಳಿರುವ ಅವರು, ಒಬ್ಬ ರಾಜಕಾರಣಿಯಂತೆ ವರ್ತಿಸುವುದನ್ನು ಬಿಟ್ಟು ಧರ್ಮಗುರುವಿನ ಕೆಲಸ ಮಾಡಲಿ ಎಂದು ಹೇಳಿದ್ದಾರೆ.
ನಾನು ಪೋಪ್ ಲಿಯೋ ಅಭಿಮಾನಿ ಅಲ್ಲ. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲಿ ಎಂದು ಒಪ್ಪುವ ಪೋಪ್ ನನಗೆ ಬೇಡ ಎಂದು ಕಟುವಾಗಿ ಟೀಕಿಸಿದ್ದಾರೆ. ಇದೇ ವೇಳೆ ಅಮೆರಿಕಾ ಕೈಗೊಂಡ ಕ್ರಮಗಳನ್ನು ಸಮರ್ಥಿಸಿಕೊಂಡಿರುವ ಅವರು, ದೇಶದ ಭದ್ರತೆಗಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ಟೀಕಿಸುವುದು ಸರಿಯಲ್ಲ ಎಂದಿದ್ದಾರೆ.
ಪೋಪ್ ಲಿಯೋ XIV ಅಮೆರಿಕ ಮೂಲದ ಮೊದಲ ಪೋಪ್ ಆಗಿದ್ದಾರೆ. ಅವರು ಯುದ್ಧದ ಜೊತೆಗೆ ವಲಸಿಗರ ಮೇಲಿನ ಅಮೆರಿಕದ ಕಠಿಣ ಕ್ರಮಗಳನ್ನು ಕೂಡ ವಿರೋಧಿಸುತ್ತಾ ಬಂದಿದ್ದಾರೆ. ಪೋಪ್ ಲಿಯೋ ಅವರ ಪ್ರಸ್ತುತದ ನಿಲುವು ಟ್ರಂಪ್ ಆಡಳಿತದ ಯುದ್ಧ ನೀತಿ ಹಾಗೂ ವಲಸೆ ನೀತಿಗಳಿಗೆ ವಿರುದ್ಧವಾಗಿದ್ದು, ಇದೇ ಕಾರಣದಿಂದ ಇಬ್ಬರ ನಡುವೆ ವಾಕ್ಸಮರ ನಡೆಯುತ್ತಿದೆ.
ಇನ್ನು ಟ್ರಂಪ್ ಅವರ ಆಡಳಿತದೊಂದಿಗೆ ಯಾವುದೇ ಮುಖಾಮುಖಿ ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ಇಚ್ಛೆ ನನಗಿಲ್ಲ ಎಂದು ಹೇಳಿರುವ ಪೋಪ್ 14ನೇ ಲಿಯೊ, ರಾಜಕೀಯ ಘರ್ಷಣೆಗಿಂತ ಆಧ್ಯಾತ್ಮಿಕ ವಕಾಲತ್ತಿಗೆ ಹೆಚ್ಚು ಬದ್ಧತೆ ಹೊಂದಿರುವುದಾಗಿ ಪುನರುಚ್ಚರಿಸಿದ್ದಾರೆ.
ಜಾಗತಿಕ ಸಾಮರಸ್ಯದ ಮೇಲೆ ಗಮನ ಕೇಂದ್ರೀಕರಿಸುವ ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದ ಅವರು, ನಾವು ಯಾವಾಗಲೂ ಶಾಂತಿಯನ್ನು ಹುಡುಕೋಣ, ಯುದ್ಧಗಳನ್ನು ಕೊನೆಗೊಳಿಸೋಣ. ನಾನು ಟ್ರಂಪ್ ಆಡಳಿತಕ್ಕೆ ಹೆದರುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.
‘ಯುದ್ಧ ವಿರೋಧಿಸಿ ನಾನು ಗಟ್ಟಿಯಾಗಿ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇನೆ. ಶಾಂತಿ ಮತ್ತು ರಾಷ್ಟ್ರಗಳ ನಡುವೆ ಬಹುಪಕ್ಷೀಯ ಸಂವಾದವನ್ನು ಉತ್ತೇಜಿಸಲು ಪ್ರಯತ್ನಿಸುತ್ತೇನೆ. ಇದರಿಂದ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಕಂಡುಕೊಳ್ಳಬಹುದು’ ಎಂದಿದ್ದಾರೆ.
‘ಚರ್ಚ್ನ ಸಂದೇಶವು ಸುವಾರ್ತೆಯ ಸಂದೇಶವಾಗಿದೆ. ಶಾಂತಿ ಸ್ಥಾಪಿಸುವವರು ಧನ್ಯರು. ನನ್ನ ಪಾತ್ರವನ್ನು ನಾನು ರಾಜಕಾರಣಿಯ ಪಾತ್ರವೆಂದು ನೋಡುವುದಿಲ್ಲ. ಅವರೊಂದಿಗೆ (ಟ್ರಂಪ್) ಚರ್ಚೆಗೆ ಇಳಿಯಲು ನಾನು ಬಯಸುವುದಿಲ್ಲ. ಜಗತ್ತಿನಲ್ಲಿ ಈಗಾಗಲೇ ಅತೀ ಹೆಚ್ಚು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm