ಬ್ರೇಕಿಂಗ್ ನ್ಯೂಸ್
09-04-26 07:43 pm HK News Staffer ದೇಶ - ವಿದೇಶ
ಟೆಹ್ರಾನ್, ಎಪ್ರಿಲ್ 9: ಮಧ್ಯಪ್ರಾಚ್ಯದಲ್ಲಿ ತಾತ್ಕಾಲಿಕ ಕದನ ವಿರಾಮಕ್ಕೆ ಇರಾನ್ -ಅಮೆರಿಕ ಸಮ್ಮತಿಸಿದರೂ ಹರ್ಮುಜ್ ಜಲಸಂಧಿಯ ಬಿಕ್ಕಟ್ಟು ಏಷ್ಯನ್ ದೇಶಗಳಿಗೆ ದೊಡ್ಡದಾಗಿ ತಟ್ಟುವ ಭೀತಿ ಉಂಟಾಗಿದೆ. ಜಲಸಂಧಿಯಲ್ಲಿ ಹಾದು ಹೋಗುವ ಪ್ರತಿ ನೌಕೆಗೆ 2 ದಶಲಕ್ಷ ಡಾಲರ್ (ಸುಮಾರು 18 ಕೋಟಿ ರೂ.) ಟೋಲ್ ವಿಧಿಸುವುದಾಗಿ ಇರಾನ್ ಘೋಷಿಸಿದೆ. ಇದೇ ವೇಳೆ, ಅಮೆರಿಕವೂ ಸುಂಕದಲ್ಲಿ ಪಾಲು ಕೇಳಿದ್ದು ಯುದ್ಧ ನಷ್ಟ ಭರಿಸಿಕೊಳ್ಳಲು ಮುಂದಾಗಿದೆ.
ಯುದ್ಧದ ಸಮಯದಲ್ಲಿ ಭಾರತ ಸೇರಿದಂತೆ ಕೆಲವೇ ಮಿತ್ರ ದೇಶಗಳನ್ನು ಹೊರತುಪಡಿಸಿ ಹರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿತ್ತು. ಆದರೆ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳಿಗೆ ಇದೇ ದೊಡ್ಡ ತಲೆನೋವಾಗಿತ್ತು. ಆನಂತರ, ಅಮೆರಿಕ ಮುಂದಿಟ್ಟ ಒಪ್ಪಂದದ ಷರತ್ತಿನಂತೆ ಹರ್ಮುಜ್ ಜಲಸಂಧಿಯನ್ನು ತಾತ್ಕಾಲಿಕವಾಗಿ ಮುಕ್ತಗೊಳಿಸಲು ಇರಾನ್ ಒಪ್ಪಿದೆ. ಆದರೆ, ಟೋಲ್ ವಿಧಿಸುವ ಮೂಲಕ ಹಣ ಸಂಗ್ರಹಿಸಲಿದ್ದು, ಯುದ್ಧದಿಂದ ಉಂಟಾದ ನಷ್ಟ ಭರ್ತಿಗೆ ಇದು ಅನಿವಾರ್ಯ ಎಂದು ಹೇಳಿಕೊಂಡಿದೆ.
ಇರಾನ್ ಟೋಲ್ ಪ್ರಸ್ತಾಪಕ್ಕೆ ಭಾರತ, ಒಮಾನ್ ಸೇರಿದಂತೆ ಹೆಚ್ಚಿನ ದೇಶಗಳಿಂದ ವಿರೋಧವೂ ವ್ಯಕ್ತವಾಗಿದೆ. ಎಲ್ಲ ದೇಶಗಳಿಗೆ ಟೋಲ್ ವಿಧಿಸಿದರೆ ಭಾರತಕ್ಕೆ ಮಾತ್ರ ದುಬಾರಿಯಾಗಿ ಪರಿಣಮಿಸಲಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಟೋಲ್ ಪ್ರಸ್ತಾಪಕ್ಕೆ ಪರೋಕ್ಷವಾಗಿ ಒಪ್ಪಿಗೆ ಸೂಚಿಸಿದ್ದು ಜೊತೆಗೆ ತನಗೂ ಪಾಲು ನೀಡುವಂತೆ ಕೇಳಿದ್ದಾರೆ.
ದಿನಕ್ಕೆ 200 ಕೋಟಿ ಹೊರೆ
ಹರ್ಮುಜ್ ವಿಷಯದಲ್ಲಿ ಇರಾನ್ ತನ್ನ ನಿಯಮವನ್ನು ಎಲ್ಲಾ ದೇಶಗಳಿಗೂ ಅನ್ವಯಿಸಿದರೆ, ಭಾರತಕ್ಕೆ ತೈಲ ಆಮದು ದುಬಾರಿಯಾಗಲಿದೆ. ಹರ್ಮುಜ್ ಮೂಲಕ ಇತರೆ ಸರಕುಗಳ ಸಾಗಣೆ ವೆಚ್ಚವೂ ದುಪ್ಪಟ್ಟಾಗಲಿದೆ. ಅಂದಾಜು ಭಾರತಕ್ಕೆ 200 ಕೋಟಿ ರೂ. ಹೊರೆಯಾಗಲಿದೆ. ಭಾರತದ ಶೇ. 50ರಷ್ಟು ಕಚ್ಚಾತೈಲ, 80% ಎಲ್‌ಪಿಜಿ ಹರ್ಮುಜ್ ಮೂಲಕವೇ ಬರುತ್ತಿದೆ. ನಿತ್ಯ 10-12 ಟ್ಯಾಂಕರ್‌ಗಳು ಜಲಸಂಧಿಯಿಂದ ಸಾಗುವುದರಿಂದ ದಿನಕ್ಕೆ ಪ್ರತಿ ನೌಕೆಗೆ 18 ಕೋಟಿ ರೂ.ನಂತೆ 180-200 ಕೋಟಿ ರೂ.ಟೋಲ್ ಭಾರ ಬೀಳಲಿದೆ. ಸಾಗಣೆ ವೆಚ್ಚದಲ್ಲಿ ಏರಿಕೆಯಿಂದಾಗಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಬೆಲೆಯ ಹೊರೆಯನ್ನು ಜನರ ಮೇಲೆ ಹೊರಿಸುವ ಸಾಧ್ಯತೆಯಿದೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm