ಬ್ರೇಕಿಂಗ್ ನ್ಯೂಸ್
08-04-26 06:59 pm HK News Staffer ದೇಶ - ವಿದೇಶ
ಟೆಹ್ರಾನ್, ಎಪ್ರಿಲ್ 8: ಅಮೆರಿಕ - ಇರಾನ್ ಮಧ್ಯೆ ಎರಡು ವಾರಗಳ ಮಟ್ಟಿಗೆ ಯುದ್ಧ ವಿರಾಮ, ಹರ್ಮುಜ್ ಜಲಸಂಧಿಯ ಮುಕ್ತ ಸಂಚಾರಕ್ಕೆ ಅನುಮತಿ ಸಿಕ್ಕಿರುವ ನಡುವೆಯೂ ಗಲ್ಫ್ ದೇಶಗಳ ಮೇಲೆ ಮಿಸೈಲ್ ದಾಳಿಯಾಗಿದೆ. ಭಾರತೀಯ ಕಾಲಮಾನ ಬುಧವಾರ ನಸುಕಿನಲ್ಲಿ ಇಸ್ರೇಲಿನ ಟೆಲ್ ಅವೀವ್, ಯುಎಇ, ಕತಾರ್ ಮೇಲೆ ಇರಾನ್ ಕಡೆಯಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಾಗಿದ್ದು, ಹಲವು ಕ್ಷಿಪಣಿಗಳನ್ನು ಏರ್ ಡಿಫೆನ್ಸ್ ವ್ಯವಸ್ಥೆ ಹೊಡೆದು ಹಾಕಿದೆ.
ಇದೇ ವೇಳೆ, ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಹೇಳಿಕೆ ಬಿಡುಗಡೆಯಾಗಿದ್ದು, ಇದು ಯುದ್ಧದ ಅಂತ್ಯವಲ್ಲ, ಶತ್ರುಗಳ ಮೇಲೆ ನಿಗಾ ಇರಲಿ, ಸದಾ ನಮ್ಮ ಕೈಬೆರಳು ಟ್ರಿಗ್ಗರ್ ಮೇಲಿರಲಿ. ಎರಡು ವಾರಗಳ ಮಟ್ಟಿಗೆ ವಿರಾಮ ಅಷ್ಟೇ, ಯುದ್ಧ ಕೊನೆಯಾಗಿಲ್ಲ. ಇರಾನ್ ಮೇಲೆ ಅನೈಸರ್ಗಿಕ ರೀತಿಯ ದಾಳಿಯಾಗಿದೆ, ಇದನ್ನು ಇಷ್ಟಕ್ಕೇ ಬಿಡಲ್ಲ ಎಂದು ಮಾರ್ಮಿಕವಾಗಿ ಹೇಳಿರುವುದು ಜಾಗತಿಕ ವಲಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ.
ಇರಾನ್ ನಾಗರಿಕತೆಯನ್ನೇ ಇನ್ನಿಲ್ಲದ ರೀತಿ ಮುಗಿಸಿ ಬಿಡುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಅಬ್ಬರಿಸಿದ ಬೆನ್ನಲ್ಲೇ ಕೊನೆಕ್ಷಣದಲ್ಲಿ ಪಾಕಿಸ್ತಾನ ಮತ್ತು ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು ತಾತ್ಕಾಲಿಕವಾಗಿ ಹೊರ್ಮುಜ್ ಜಲಸಂಧಿಯನ್ನೂ ಮುಕ್ತ ಸಂಚಾರಕ್ಕೆ ಬಿಟ್ಟುಕೊಡುವುದಾಗಿ ಹೇಳಿದೆ. ಅಲ್ಲದೆ, ಈ ಕುರಿತು ಇರಾನ್ ಪ್ರಸ್ತಾಪಿಸಿದ ಹತ್ತು ಅಂಶಗಳ ಯಾದಿಗೆ ಅಮೆರಿಕವೂ ಒಪ್ಪಿಗೆ ನೀಡಿದ್ದು, ಎರಡು ವಾರಗಳ ಒಳಗಡೆ ಸಮಗ್ರ ಮಾತುಕತೆ ನಡೆದು ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಬರಲು ನಿಶ್ಚಯವಾಗಿದೆ. ಇದರಂತೆ, ಪಾಕಿಸ್ತಾನದ ಇಸ್ಲಮಾಬಾದ್ ನಲ್ಲಿ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳು ಜೊತೆಗೂಡಿ ಶುಕ್ರವಾರದ ವೇಳೆಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.
ಆದರೆ ಇದರ ನಡುವೆಯೂ ಇಸ್ರೇಲ್ ಮತ್ತು ಯುಎಇ, ಕತಾರ್ ಮೇಲೆ ಇರಾನ್ ಕಡೆಯಿಂದ ಕ್ಷಿಪಣಿ ಉಡಾಯಿಸಲಾಗಿದೆ. ಇಸ್ರೇಲಿನ ಮಧ್ಯ ಮತ್ತು ಉತ್ತರ ಭಾಗದಲ್ಲಿ ಮಿಸೈಲ್ ದಾಳಿ ಆಗಿರುವುದನ್ನು ಇಸ್ರೇಲ್ ಮಿಲಿಟರಿಯೂ ದೃಢಪಡಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಕೂಡ ದಾಳಿಯನ್ನು ಒಪ್ಪಿಕೊಂಡಿದ್ದು, ಬ್ಯಾಲಿಸ್ಟಿಕ್ ಮಿಸೈಲ್ ಮತ್ತು ಡ್ರೋನ್ ಗಳನ್ನು ನಮ್ಮ ಏರ್ ಡಿಫೆನ್ಸ್ ಸಿಸ್ಟಮ್ ತಡೆದಿದೆ ಎಂದು ಹೇಳಿದೆ. ಇದೇ ವೇಳೆ, ಸೌದಿ ಅರೇಬಿಯಾ ದೇಶಾದ್ಯಂತ ಅಲರ್ಟ್ ಸೂಚನೆಯನ್ನು ನೀಡಿದೆ. ಕುವೈತ್, ಬೆಹ್ರೈನ್, ಕತಾರ್ ದೇಶಗಳೂ ಇದೇ ರೀತಿಯ ಎಲರ್ಟ್ ಸೂಚನೆಯನ್ನು ತಮ್ಮ ನಾಗರಿಕರಿಗೆ ನೀಡಿವೆ. ಕತಾರ್ ಮೇಲಿನ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಗಾಯಗೊಂಡಿದ್ದಾರೆ.
ಫೆ.28ರಿಂದ ತೊಡಗಿನ ಈವರೆಗಿನ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಗುರಿಯಾಗಿಸಿ ಮೂರು ಸಾವಿರಕ್ಕೂ ದಾಳಿಗಳನ್ನು ನಡೆಸಿವೆ. ಇದೇ ವೇಳೆ, ಇರಾನ್ 1511 ದಾಳಿಗಳನ್ನು ಇಸ್ರೇಲ್ ಮತ್ತು ಗಲ್ಫ್ ದೇಶಗಳ ಸುತ್ತಮುತ್ತ ಮಾಡಿರುವುದಾಗಿ ಕ್ರಿಸಿಸ್ ಮಾನಿಟರಿಂಗ್ ಆರ್ಗನೈಸೇಶನ್ ಎಸಿಎಲ್ ಇಡಿ ಹೇಳಿದೆ. ದಾಳಿಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಇದರ ಬಗ್ಗೆ ಅಧಿಕೃತ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗಿಲ್ಲ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm