ಬ್ರೇಕಿಂಗ್ ನ್ಯೂಸ್
03-04-26 07:52 pm HK News Staffer ದೇಶ - ವಿದೇಶ
ಚೆನ್ನೈ, ಎಪ್ರಿಲ್ 3: ನಿರೀಕ್ಷೆಯಂತೆ, ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಸಿಂಗಂ ಖ್ಯಾತಿಯ ಅಣ್ಣಾಮಲೈ ಅವರಿಗೆ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಅವರ ಹೆಸರನ್ನು ಹೊರಗಿಟ್ಟು ಬಿಜೆಪಿ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು ಜಾಲತಾಣದಲ್ಲಿ ಮಾತ್ರ ಬಿಜೆಪಿ ಕೇಂದ್ರ ನಾಯಕರ ಬಗ್ಗೆ ಅಪಸ್ವರ ಕೇಳಿಬಂದಿದೆ.
ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿ, 27 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅಣ್ಣಾಮಲೈ ಅವರಿಗೆ ಟಿಕೆಟ್ ನೀಡಿಲ್ಲ. 27 ಸ್ಥಾನಗಳಲ್ಲಿ ಐವರು ಮಹಿಳೆಯರಿಗೆ ಟಿಕೆಟ್ ನೀಡುವ ಮೂಲಕ ರಾಜ್ಯಕ್ಕೆ ಹೊಸ ಸಂದೇಶ ನೀಡಿದೆ. ಎಡಪ್ಪಾಡಿ ಪಳನಿಸ್ವಾಮಿ ಜೊತೆಗಿನ ಮನಸ್ತಾಪ ಮತ್ತು ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಹೊಂದಿದ್ದ ಅಣ್ಣಾಮಲೈ ಇತ್ತೀಚೆಗೆ ಸ್ಪರ್ಧಾ ಕಣದಿಂದ ದೂರ ಉಳಿಯುವುದಾಗಿ ಹೇಳಿದ್ದರು.
ಬಿಜೆಪಿ ಪಟ್ಟಿಯಲ್ಲಿ ಮೈಲಾಪುರದಿಂದ ತಮಿಳುಸೈ ಸೌಂದರರಾಜನ್, ಅವನಾಶಿಯಿಂದ ಎಲ್.ಮುರುಗನ್, ಅಣ್ಣಾಮಲೈ ಸ್ಪರ್ಧಿಸಲು ಬಯಸಿದ್ದ ಕೊಯಂಬತ್ತೂರು ಉತ್ತರದಿಂದ ವಾನತಿ ಶ್ರೀನಿವಾಸನ್, ಸತ್ತೂರು ನಿಂದ ನೈನಾರ್ ರಾಜೇಂದ್ರನ್, ತಿರುಚೆಂಡೂರ್’ನಿಂದ KRM ರಾಧಾಕೃಷ್ಣನ್ ಅವರಿಗೆ ಟಿಕೆಟ್ ನೀಡಲಾಗಿದೆ. ಅಣ್ಣಾಮಲೈ ಅವರು ಕೊಯಂಬತ್ತೂರು ಉತ್ತರದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಎಐಎಡಿಎಂಕೆ ನಾಯಕರ ಜೊತೆಗಿನ ವೈಮನಸ್ಸಿನಿಂದ ಚುನಾವಣಾ ಕಣದಿಂದ ದೂರ ಉಳಿಯಲು ಬಯಸಿದ್ದಲ್ಲದೆ, ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಟ್ವೀಟ್ ಮಾಡಿ ಹಾರೈಸಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಘೋಷಣೆಯಾದ ಎಲ್ಲಾ ಬಿಜೆಪಿ ಅಭ್ಯರ್ಥಿಗಳಿಗೆ ನನ್ನ ಅಭಿನಂದನೆಗಳು. ರಾಜ್ಯದಲ್ಲಿ ಡಿಎಂಕೆಯ ಭ್ರಷ್ಟಾಚಾರ, ಜನದ್ರೋಹಿ ಆಡಳಿತದಿಂದ ಬೇಸತ್ತಿರುವ ತಮಿಳುನಾಡಿನ ಪ್ರತಿಯೊಬ್ಬ ಸಹೋದರ, ಸಹೋದರಿಯರು ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಲು ಕೋರುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ದೂರದರ್ಶಿ ನಾಯಕತ್ವದಲ್ಲಿ ದೇಶ ಶಕ್ತಿಯುತವಾಗುತ್ತಿದೆ. ಆದರೆ, ತಮಿಳುನಾಡು ಮಾತ್ರ ಡಿಎಂಕೆ ಸರ್ಕಾರದ ಅಹಂಕಾರದ ಧೋರಣೆಯಿಂದ ಹಿಂದುಳಿದಿದೆ. ಒಬ್ಬ ಕಾರ್ಯಕರ್ತನಾಗಿ, ಹೆಗಲಿಗೆ ಹೆಗಲು ಕೊಟ್ಟು ನಿಂತು, ಮುಂಬರುವ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ 210 ಸ್ಥಾನವನ್ನು ಗೆಲ್ಲಿಸುವ ಗುರಿಯನ್ನಿಟ್ಟು ಪ್ರಚಾರ ಮಾಡುತ್ತೇನೆ ಎಂದು ಎಕ್ಸ್ ನಲ್ಲಿ ಅಣ್ಣಾಮಲೈ ಪೋಸ್ಟ್ ಮಾಡಿದ್ದಾರೆ.
ಅಣ್ಣಾಮಲೈ ಪೋಸ್ಟಿಗೆ ನೂರಾರು ಪ್ರತಿಕ್ರಿಯೆ ಬಂದಿದ್ದು ಕೇಂದ್ರ ನಾಯಕರ ಬಗ್ಗೆ ಟೀಕೆಯನ್ನೂ ಮಾಡಿದ್ದಾರೆ. ನೀವು ತಮಿಳುನಾಡಿನ ಮುಂದಿನ ಭವಿಷ್ಯ, ನಿಮ್ಮ ಬೆಂಬಲದೊಂದಿಗೆ ಬಿಜೆಪಿ ಉತ್ತಮ ಸಾಧನೆಯನ್ನು ಮಾಡಲಿ, ಬಿಜೆಪಿ ಎಲ್ಲಾ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನು ವೃದ್ದಿಸಿಕೊಳ್ಳುತ್ತದೆ, ಆದರೆ, ತಮಿಳುನಾಡಿನಲ್ಲಿ ಹಿಂದೆ ಎಲ್ಲಿತ್ತೋ, ಅಲ್ಲಿಗೇ ಮತ್ತೆ ಹೋಗುತ್ತಿದೆ. ನಿಮಗೆ ಟಿಕೆಟ್ ಸಿಗದಿರುವುದಕ್ಕೆ ನಮಗೆಲ್ಲ ಬೇಸರವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm